ಆರೋಗ್ಯವೇ ಭಾಗ್ಯ-ದುಶ್ಚಟಗಳಿಂದ ದೂರವಿರಿ : ನ್ಯಾ. ಹೊಸಗೌಡರ್

Share
  • 4
    Shares

ದಾವಣಗೆರೆ- ಇಂದಿನ ಯುವ ಪೀಳಿಗೆ ದುಶ್ಚಟಗಳ ದಾಸ ರಾಗದೆ ಸಂಸ್ಕಾರಯುತ ಜೀವನ ರೂಡಿಸಿಕೊಳ್ಳಬೇಕು. ಆರೋಗ್ಯವೆ ಭಾಗ್ಯವೆಂಬುದನ್ನು ಅರಿತು ದುಶ್ಚಟಗಳಿಂದ ದೂರವಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್.ಎಸ್ ಹೊಸಗೌಡರ ಅಭಿಪ್ರಾಯಪಟ್ಟರು.
ನಗರದ ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಅಥಣಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿಶ್ವ ಆರೋಗ್ಯ ಸಂಸ್ಥೆಯ ಆದೇಶದಂತೆ ಪ್ರತಿವರ್ಷ ಮೇ ೩೧ ರಂದು ಈ ದಿನಾಚರಣೆ ಆಚರಿಸಲಾಗುತ್ತಿದೆ. ಆ ಮೂಲಕ ನಾಗರಿಕರಲ್ಲಿ ಯುವಕ-ಯುವತಿಯರಲ್ಲಿ ಈ ಬಗ್ಗೆ ಅರಿವು ಜಾಗೃತಿ ಮೂಡಿಸಿ ಈ ದುಶ್ಚಟದಿಂದ ಹೊರ ಬರಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು. ವಿವಿಧ ರೀತಿಯ ಭಯಂಕರ ಕ್ಯಾನ್ಸರ್‌ಗಳಿಗೆ ಕಾರಣವಾಗುವ ತಂಬಾಕನ್ನು ಹಲವಾರು ವಿಧದಲ್ಲಿ ಜನ ಸೇವಿಸುತ್ತಾರೆ. ಬೀಡಿ ಸಿಗರೇಟು, ಗುಟ್ಕಾ, ಚುಟ್ಟಾ ಮುಂತಾದ ರೀತಿಯಲ್ಲಿ ಅನಾದಿ ಕಾಲದಿಂದಲೂ ಸೇವಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಗ್ಗೆ ಅರಿವು, ಜಾಗೃತಿ ಮೂಡಿ ಸ್ವಲ್ಪ ಮಟ್ಟಿಗೆ ಜಾಗೃತಿ ಬಂದಿದೆ ಎಂದರು.
ಅತಿಥಿಗಳಾಗಿ ಮಾತನಾಡಿದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ನ್ಯಾಯಾಧೀಶ ಕೆಂಗಬಾಲಯ್ಯ ತಂಬಾಕು ಸೇವಿಸುವವರಿಗೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ. ಹಾಗಾಗಿ ಇಂತಹ ಕ್ಯಾನ್ಸರ ಕಾರಕ ತಂಬಾಕಿನಿಂದ ದೂರವಿದ್ದರಷ್ಟೇ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಪ್ರಪಂಚದಲ್ಲಿ ಪ್ರತಿವರ್ಷ ೫೫ ಲಕ್ಷ ಜನ ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಪ್ರತಿವರ್ಷ ೧೦ ಲಕ್ಷ ಮಂದಿ ತಂಬಾಕಿಗೆ ಬಲಿಯಾಗುತ್ತಿದ್ದಾರೆ.
ಈ ನಿಟ್ಟಿನಲ್ಲಿ ಸರ್ಕಾರ ಜಾಗೃತಿ ಮೂಡಿಸುವುದಲ್ಲಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು. ಒಮ್ಮೆ ಈ ಚಟಕ್ಕೆ ಬಲಿಯಾದರೆ ಇದರಿಂದ ಹೊರ ಬರುವುದು ಕಷ್ಟ. ನಿಕೋಟಿನ್ ಅಂಶ ದೇಹಕ್ಕೆ ಸೇರಿದರೆ ಅದರ ಚಟ ನಮ್ಮನ್ನು ಭಾದಿಸುತ್ತದೆ. ಈ ಚಟಕ್ಕೆ ಬಲಿಯಾದರೆ ಯಾವುದೇ ಔಷಧಿ ಇಲ್ಲ. ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿನ ಜಾಗೃತಿ ಬಂದಿದೆ. ಆದರೆ ಸಂಪೂರ್ಣ ನಿಂತಿಲ್ಲ. ಈ ನಿಟ್ಟಿನಲ್ಲಿ ಮಾಧ್ಯಮ ರಂಗ ಹೆಚ್ಚು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕಾಗಿದೆ ಎಂದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಟಿ ಹೆಚ್ ಸಿದ್ದಪ್ಪ ಮಾತನಾಡಿ, ನಮ್ಮಲ್ಲಿ ಆರೋಗ್ಯ ಕರ ಚಟಗಳು ಇರಲಿ. ದುಶ್ಚಟಗಳು ಬೇಡ. ಓದಬೇಕು.. ಸಾಧಿಸಬೇಕು.. ಆರೋಗ್ಯವಾಗಿರಬೇಕು ಎಂಬ ಚಟಗಳಿರಲಿ. ಮನಸ್ಸಿಗೆ-ಆರೋಗ್ಯಕ್ಕೆ ವಿರುದ್ಧವಾದ ಚಟಗಳು ಬೇಡ. ಉನ್ನತ ಸಾಧನೆಯ ಹಠದ ಚಟವಿರಲಿ ಎಂದರು.
ಕಾರ್ಯಕ್ರಮದಲ್ಲಿ ವಕೀಲ ರಾದ ಎಲ್ ಹೆಚ್ ಅರುಣ್ ಕುಮಾರ್, ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ರಾಜಶೇಖರ್ ಕೆ ಪಾಲ್ಗೊಂಡಿದ್ದರು. ಸೋನು ಸ್ವಾಗತಿಸಿದರು. ಭಾವನಾ ನಿರೂಪಿಸಿದರು.

Be the first to comment on "ಆರೋಗ್ಯವೇ ಭಾಗ್ಯ-ದುಶ್ಚಟಗಳಿಂದ ದೂರವಿರಿ : ನ್ಯಾ. ಹೊಸಗೌಡರ್"

Leave a comment

Your email address will not be published.


*