ಮುಖ್ಯಮಂತ್ರಿಗಳೇ ತರಳಬಾಳು ಶ್ರೀಮಠದ ಬಗೆಗಿನ ನಿಮ್ಮ ಧೋರಣೆ ಬದಲಾಯಿಸಿಕೊಳ್ಳಿ : ಸಂಸದ ಜಿ.ಎಂ.ಸಿದ್ದೇಶ್ವರ

Share
  • 103
    Shares

     ದಾವಣಗೆರೆ-ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ ನಂತರ ನಡೆಸಿದ ಪತ್ರಿಕಾಘೋಷ್ಟಿ ವೇಳೆ ತರಳಬಾಳು ಶ್ರೀಮಠದ ಸಾಣೆಹಳ್ಳಿಯ ಡಾ: ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಬಗ್ಗೆ ನೀಡಿರುವ ಹೇಳಿಕೆಯನ್ನು ನಾನು ಅತ್ಯುಘ್ರವಾಗಿ ಖಂಡಿಸುತ್ತೇನೆ, ಅಷ್ಟಕ್ಕೂ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿರುವುದು ವಾಸ್ತವ ವಿಷಯವನ್ನು, ಸಮ್ಮಿಶ್ರ ಸರ್ಕಾರಗಳಿಂದ ಅಭಿವೃದ್ದಿಯನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ ಎನ್ನುವ ದಾಟಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಈ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸುವಾಗ ಮುಖ್ಯಮಂತ್ರಿ ಹುದ್ದೆಯಲ್ಲಿ ಯಾವ ಜಾತಿಯವರು ಇದ್ದಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಅವರು ಹೇಳಿಕೆ ನೀಡಿಲ್ಲ, ಒಟ್ಟಾರೆಯಾಗಿ ಸಮ್ಮಿಶ್ರ ಸರ್ಕಾರಗಳು ಎರಡೂ ಪಕ್ಷಗಳ ನಡುವೆ ಸಮನ್ವಯತೆಯನ್ನು ಸಾಧಿಸಿಕೊಂಡು ಹೋಗುವುದಕ್ಕಾಗಿ ಹೆಣಗಾಡಬೇಕಾಗುತ್ತದೆಯೇ ವಿನ: ಅಭಿವೃದ್ದಿ ಬಗ್ಗೆ ಹೆಚ್ಚಿನ ಕಾಳಜಿಯಿರುವುದಿಲ್ಲ ಎನ್ನುವುದು ಅವರ ಮಾತಿನ ತಾತ್ಪರ್ಯ, ಆದರೆ ನೀವು ಅವರ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಿಕೊಂಡು ಸಿರಿಗೆರೆ ಶ್ರೀಗಳ ಬಗ್ಗೆ ಪ್ರತಿಹೇಳಿಕೆ ನೀಡಿದ್ದೀರಿ,
       ಸಿರಿಗೆರೆ ಶ್ರೀಮಠದ ಇತಿಹಾಸವನ್ನು ತಿಳಿದೂ ಸಹ ನೀವು ಶ್ರೀಮಠದ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತ ಯಾರಿಗೇ ಆದರೂ ಶೋಭೆ ತರುವುದಿಲ್ಲ. ಸಿರಿಗೆರೆ ಶ್ರೀಮಠದ ಕಾರ್ಯಚಟುವಟಿಕೆಗಳ ಬಗ್ಗೆ ನಿಮಗೆ ಮಾಹಿತಿಯ ಕೊರತೆಯಿದೆ, ರಾಜ್ಯದ ಜನರು ಶಾಂತಿಯಿಂದ, ನಮ್ಮದಿಯಿಂದ ಬಾಳಬೇಕು ಎನ್ನುವುದು ಶ್ರೀಗಳ ಆಶಯ, ಈ ನಿಟ್ಟಿನಲ್ಲಿ ಶ್ರೀಗಳು ನೀಡಿರುವ ಹೇಳಿಕೆಗೆ ತಾವುಗಳು ನೀಡಿರುವ ಪ್ರತಿಹೇಳಿಕೆ ಯಾರೂ ಕೂಡ ಒಪ್ಪತಕ್ಕದ್ದಲ್ಲ, ಈ ಹಿನ್ನೆಲೆಯಲ್ಲಿ ತಾವು ಆತ್ಮಾವಲೋಕನೆ ಮಾಡಿಕೊಳ್ಳುವ ಮೂಲಕ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಶ್ರೀಗಳ ಬಳಿ ಕ್ಷಮೆ ಯಾಚಿಸುವಂತೆ ಆಗ್ರಹ ಪಡಿಸುತ್ತೇನೆ ಎಂದರು.

Be the first to comment on "ಮುಖ್ಯಮಂತ್ರಿಗಳೇ ತರಳಬಾಳು ಶ್ರೀಮಠದ ಬಗೆಗಿನ ನಿಮ್ಮ ಧೋರಣೆ ಬದಲಾಯಿಸಿಕೊಳ್ಳಿ : ಸಂಸದ ಜಿ.ಎಂ.ಸಿದ್ದೇಶ್ವರ"

Leave a comment

Your email address will not be published.


*