ಜಿಎಂಐಟಿಯ ಜೈವಿಕ ತಂತ್ರಜ್ಞಾನ ವಿಭಾಗದ ಜೆನಿಲಿಕ್ಸ್ ಪೋರಂನ ಸಮಾರೋಪ

Share
  • 9
    Shares

 

ದಾವಣಗೆರೆ-ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜೈವಿಕ ತಂತ್ರಜ್ಞಾನ ವಿಭಾಗದ ಜೆನಿಲಿಕ್ಸ್ ಪೋರಂನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹರೀಶ್ ಜಿ ಆರ್ ಇವರು ವಿದ್ಯಾರ್ಥಿಗಳಿಗೆ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಇರುವ ಉದ್ಯೋಗಾವಕಾಶ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿನ ಉದ್ಯೋಗಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಪ್ರಾಂಶುಪಾಲರಾದ ಡಾ. ಪಿ. ಪ್ರಕಾಶ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ೨೦೧೮-೨೦೧೯ನೇ ಸಾಲಿನಿಂದ ಹೊಸ ಭೋಧನಾ ವಿಧಾನವನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
ಅಂತಿಮ ಸೆಮಿಸ್ಟರ್‍ನ ವಿದ್ಯಾರ್ಥಿಗಳು ಶೇಕಡ ೧೦೦ರಷ್ಟು ಫಲಿತಾಂಶ ಹಾಗು ಉದ್ಯೋಗವನ್ನು ಪಡೆದಿರುವುದಕ್ಕೆ ಅಭಿನಂದಿಸಿ, ಜೆನಿಲಿಕ್ಸ್ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ವಿಭಾಗದ ಮುಖ್ಯಸ್ಥರಾದ ಡಾ. ಹೆಚ್. ಗುರುಮೂರ್ತಿ ಉದ್ಯೋಗ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಅವರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಆಗುವ ಬದಾಲಾವಣೆಗಳ ಬಗ್ಗೆ ಅರಿತು ಸರ್ಮಪಿಸಿಕೊಂಡು ಹೋಗುವ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಸಂಚಾಲಕರಾದ ಶ್ರೀಮತಿ ಕೀರ್ತಿ ಎಸ್ ಸಹ ಪ್ರಧ್ಯಾಪಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯಶಸ್ವಿನಿ ಪ್ರಾರ್ಥಿಸಿದರು, ಮಹದೇವ ಪ್ರಸಾದ್ ಬಹುಮಾನ ವಿತರಣೆಯನ್ನು ನಡೆಸಿಕೊಟ್ಟರು, ಸ್ವಪ್ನ ವೈ ಮತ್ತು ಸ್ನೇಹ ಎನ್ ಎಮ್ ಕ್ರಮವಾಗಿ ಸ್ವಾಗತಿಸಿ ಮತ್ತು ವಂದಿಸಿದರು.

Be the first to comment on "ಜಿಎಂಐಟಿಯ ಜೈವಿಕ ತಂತ್ರಜ್ಞಾನ ವಿಭಾಗದ ಜೆನಿಲಿಕ್ಸ್ ಪೋರಂನ ಸಮಾರೋಪ"

Leave a comment

Your email address will not be published.


*