ನಮ್ಮ ನಡಿಗೆ ಚೆನ್ನಮ್ಮನ ನಾಡಿಗೆ; ಸದ್ಭಾವನಾ ಪಾದಯಾತ್ರೆ

Share
  • 9
    Shares

ಹರಿಹರ-ನಮ್ಮ ನಡಿಗೆ ಚೆನ್ನಮ್ಮನ ನಾಡಿಗೆ ಎಂಬ ಸದ್ಭಾವನಾ ಪಾದಯಾತ್ರೆಯನ್ನು ಇದೇ ಮೇ.೩೧ ರಂದು ಸಂಜೆ ೪ ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಪಂಚಮಸಾಲಿ ಪೀಠದ ನೂತನ ಸ್ವಾಮೀಜಿ ವಚನಾನಂದ ಶ್ರೀ ಹೇಳಿದರು.
ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿ ಇರುವ ಪಂಚಮಸಾಲಿ ಪೀಠದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿರುವ ವೀರರಾಣಿ ಚೆನ್ನಮ್ಮ ಅವರ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಮೇ ೩೧ ರಿಂದ ಸದ್ಭಾವನಾ ಪಾದಯಾತ್ರೆ ಹಮ್ಮಿಕೊಳ್ಳ ಲಾಗಿದೆ. ಹರಿಹರದ ಪಂಚಮಸಾಲಿ ಪೀಠದಿಂದ ಪ್ರಾರಂಭವಾಗುವ ಸದ್ಭಾವನಾ ಪಾದಯಾತ್ರೆಗೆ ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಜೂನ್. ೧ರಂದು ಪಾದಯಾತ್ರೆ ರಾಣೆಬೆನ್ನೂರು, ಜೂ.೨ ರಂದು ಮೋಟೆಬೆನ್ನೂರು, ೩ ಕ್ಕೆ ಹಾವೇರಿ, ೪ ರಂದು ಬಂಕಾಪುರದಲ್ಲಿ ಕ್ರಮಿಸಿ ನಂತರ ಜೂ.೫ ಕ್ಕೆ ಕಳಸ ಕ್ರಾಸ್,೬ ಹುಬ್ಬಳ್ಳಿ, ೭ ರಂದು ಧಾರವಾಡದಲ್ಲಿ ಬಳಿಕ ಜೂನ್ ೮ ರಂದು ಕಿತ್ತೂರು, ೯ ರಂದು ಬೈಲಹೊಂಗಲಕ್ಕೆ ತಲುಪಲಾ ಗುವುದು. ಜೂನ್ ೧೦ ರಂದು ಬೈಲಹೊಂಗಲದಲ್ಲಿ ಪಾದಯಾತ್ರೆ ಸಮಾರೋಪ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ೩೦ ಕಿ.ಮೀ ಪಾದಯಾತ್ರೆ ನಡೆಸಲಾಗುವುದು. ಒಟ್ಟು ೨೨೩ ಕಿ.ಮಿ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಬಿ ಸಿ ಉಮಾಪತಿ ಇತರರಿದ್ದರು.

Be the first to comment on "ನಮ್ಮ ನಡಿಗೆ ಚೆನ್ನಮ್ಮನ ನಾಡಿಗೆ; ಸದ್ಭಾವನಾ ಪಾದಯಾತ್ರೆ"

Leave a comment

Your email address will not be published.


*