2ನೇ ವಾರ್ಡ್‌ನಲ್ಲಿ ಎಸ್ಸೆಸ್ ಚುನಾವಣಾ ಪ್ರಚಾರ

Share

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ|| ಶಾಮನೂರು ಶಿವಶಂಕರಪ್ಪನವರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಹಾನಗರ ಪಾಲಿಕೆ ವ್ಯಾಪ್ತಿಯ ೨ನೇ ವಾರ್ಡ್‌ನ ಗಾಂಧಿನಗರ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಅಪಾರ ಅಭಿಮಾನಿಗಳು ಮತ್ತು ಕಾರ್ಯಕರ್ತರ ಜೊತೆಗೆ ಮನೆ-ಮನೆಗೆ ತೆರಳಿ ಮತಯಾಚನೆ ಮಾಡುವುದರ ಮೂಲಕ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.
ಇಂದು ಬೆಳಿಗ್ಗೆ ಮಹಾನಗರ ಪಾಲಿಕೆಯ ೨ನೇ ವಾರ್ಡ್‌ನ ಪ್ರಚಾರ ನಡೆಸಿದ ಡಾ|| ಶಾಮನೂರು ಶಿವಶಂಕರಪ್ಪನವರಿಗೆ ಸಾರ್ವಜನಿಕರಿಗೆ ಸ್ವಯಂ ಪ್ರೇರಿತವಾಗಿ ಆಗಮಿಸಿ ನೀವು ಪ್ರಚಾರಕ್ಕೆ ಬರುವುದು ಬೇಡ. ನಮ್ಮ ಬೆಂಬಲ ಸದಾ ಇರಲಿದೆ. ನೀವು ಈ ಬಾರಿ ಹೆಚ್ಚಿನ ಬಹುಮತದಲ್ಲಿ ಗೆಲುವು ಸಾಧಿಸಲಿದ್ದೀರಿ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ಭಾಗದ ೬ ಪೌರಕಾರ್ಮಿಕರನ್ನು ಸಿಂಗಾಪುರಕ್ಕೆ ಅಧ್ಯಯನ ಪ್ರವಾಸ ಕಳುಹಿಸಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ೨ನೇ ವಾರ್ಡ್‌ನ ಮಹಾನಗರ ಪಾಲಿಕೆ ಸದಸ್ಯ ಎಂ.ಹಾಲೇಶ್, ನಾಮ ನಿರ್ದೇಶಿತ ಸದಸ್ಯ ಎಲ್.ಎಂ.ಹನುಮಂತಪ್ಪ, ಪಾಲಿಕೆ ಮಾಜಿ ಸದಸ್ಯ ದೋಣಿ ನಿಂಗಪ್ಪ, ನಗರಸಭೆ ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನ್, ಮುಖಂಡರುಗಳಾದ ನೀಲಗಿರಿಯಪ್ಪ, ಟಿ.ರಮೇಶ್, ಹೆಚ್.ತಿಪ್ಪೇಸ್ವಾಮಿ(ಮಾನಸ), ಬಿ.ಎಂ.ಈಶ್ವರ್, ಶಿವಲಿಂಗಪ್ಪ, ವಾಸುದೇವ್, ಪೈಲ್ವಾನ್ ಹನುಮಂತಪ್ಪ, ಕದಂಬ ಈಶ್ವರ್, ಮೈಲಪ್ಪ ಶಿವಳ್ಳಿ, ಡಿ.ರಾಜಪ್ಪ, ಸುರೇಶ್, ಎಲ್.ಹೆಚ್.ಸಾಗರ್, ಪಿ.ರಮೇಶ್, ಎಸ್.ಸಂತೋಷ್ ಮತ್ತಿತರರಿದ್ದರು.

Be the first to comment on "2ನೇ ವಾರ್ಡ್‌ನಲ್ಲಿ ಎಸ್ಸೆಸ್ ಚುನಾವಣಾ ಪ್ರಚಾರ"

Leave a comment

Your email address will not be published.


*