ಎಸ್ಸೆಸ್ಸೆಲ್ಸಿ ಫಲಿತಾಂಶ : ಮಿತಾ ಎಸ್.ರೆಡ್ಡಿ ಪ್ರಥಮ

Share
  • 30
    Shares

ದಾವಣಗೆರೆ-ನಗರದ ಅನುಭವ ಮಂಟಪ ಶಾಲೆಯ ವಿದ್ಯಾರ್ಥಿನಿ, ಚರ್ಮ ವೈದ್ಯ ಡಾ.ಸುಗಾರೆಡ್ಡಿ ಹಾಗೂ ವಕೀಲರಾದ ಶಕುಂತಲಾ ಅವರ ಪುತ್ರಿ ಮಿತಾ ಎಸ್. ರೆಡ್ಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 619 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಂಸ್ಕೃತ-124,ಇಂಗ್ಲಿಷ್-100,ಕನ್ನಡ-98,ಗಣಿತ-97,ವಿಜ್ಞಾನ-100 ಹಾಗೂಸಮಾಜ-100 ಅಂಕ ಪಡೆಯವ ಮೂಲಕ 619 ಅಂಕ ಪಡೆದಿರುವ ಮಿತಾ ಗೆ ಐಎಎಸ್ ಅಧಿಕಾರಿ ಯಾಗುವ ಬಯಕೆ. ತನ್ನ ಸಂತಸವನ್ನು ಹಂಚಿಕೊಂಡಿರುವ ಮಿತಾ, ಪ್ರತಿ ದಿನ 6 ರಿಂದ 7 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ620 ಅಂಕ ಬರಬಹುದೆಂಬ ನಿರೀಕ್ಷೆ ಇತ್ತು. ಆದರೂ ನಿರಾಸೆಏನಾಗಿಲ್ಲ. ಇಷ್ಟು ಅಂಕ ಪಡೆಯಲು  ಮಾರ್ಗದರ್ಶನ ನೀಡಿದ ಶಾಲೆಯ ಶಿಕ್ಷಕರಿಗೂ, ಸಹಕರಿಸಿದ ಪೋಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು

Be the first to comment on "ಎಸ್ಸೆಸ್ಸೆಲ್ಸಿ ಫಲಿತಾಂಶ : ಮಿತಾ ಎಸ್.ರೆಡ್ಡಿ ಪ್ರಥಮ"

Leave a comment

Your email address will not be published.


*