ದಾವಣಗೆರೆ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ

Share
  • 24
    Shares

ದಾವಣಗೆರೆ -ನಗರದಲ್ಲಿ ದಿನಾಂಕ: 21-05-2018 ರಂದು  ಬಿದ್ದ ಭಾರಿ ಪ್ರಮಾಣದ ಗಾಳಿ ಮತ್ತು ಮಳೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಅಸ್ತವ್ಯಸ್ಥವಾಗಿದೆ. ಎರಡನೇ ಹಂತದ ನೀರು ಸರಬರಾಜು ಕೇಂದ್ರದ ಜಾಕ್‌ವೆಲ್ ಪಂಪ್‌ಹೌಸ್‌ಗೆ ವಿದ್ಯುತ್ ಸರಬರಾಜು ಮಾಡುವ ಕೋಡಿಯಾಲ-ಹೊಸಪೇಟೆ ವಿದ್ಯುತ್ ಸ್ಥಾವರದ ಬಳಿ ಮರ ಬಿದ್ದು, ವಿದ್ಯುತ್ ಪೂರೈಕೆಗೆ ತೊಂದರೆಯಾಗಿದೆ. ಅದೇ ರೀತಿ ಬಾತಿ ಶುದ್ದ ನೀರಿನ ಜಲಗಾರ ಕೇಂದ್ರದಲ್ಲಿ ವಿದ್ಯುತ್ ಬ್ರೇಕರ್ ಹಾಳಾಗಿ ನೀರು ಸರಬರಾಜಿಗೆ ತೊಂದರೆಯಾಗಿದೆ.

ಇದಲ್ಲದೆ ಭಾರಿ ಸಿಡಿಲಿನ ಹೊಡೆತಕ್ಕೆ ಕುಂದುವಾಡ ಕೆರೆ ನೀರು ಸರಬರಾಜು ಕೇಂದ್ರದ ಎರಡೂ ೫೦೦ಕೆವಿ ಟ್ರಾನ್ಸ್‌ಫಾರ್‍ಮರ್‌ಗಳು ಸುಟ್ಟು ಹೋಗಿದೆ. ಇದರಿಂದಾಗಿ ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ನೀರು ಸರಬರಾಜಿಗೆ ತೊಂದರೆಯಾಗಿದೆ. ಟ್ರಾನ್ಸ್‌ಫಾರ್‍ಮರ್ ದುರಸ್ತಿ ಕಾರ್ಯ ಪ್ರಗತಿಯಲ್ಲಿರುತ್ತದೆ ಹಾಗೂ ಬೆಸ್ಕಾಂ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ವಿದ್ಯುತ್ ಪೂರೈಕೆಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ವಹಿಸಲಾಗಿದೆ. ಇದರಿಂದ ನಾಗರೀಕರಿಗೆ ನೀರು ಪೂರೈಕೆಯಲ್ಲಿ ವ್ಯಥಯವಾಗಿದ್ದು, ಹಂತ ಹಂತವಾಗಿ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗಿರುತ್ತದೆ.

ವಿದ್ಯುತ್ ತೊಂದರೆಯಿಂದ ನಗರದಲ್ಲಿ ರಾತ್ರಿ ವೇಳೆ ನೀರು ಸರಬರಾಜು ಮಾಡುವ ಸಂಭವ ಇದೆ. ಆದ್ದರಿಂದ ನಾಗರೀಕರು ಮಹಾನಗರಪಾಲಿಕೆ ನೀರು ಪೂರೈಸುವ ನೀರನ್ನು ಸದ್ಭಳಕೆ ಮಾಡಿಕೊಂಡು ತುರ್ತು ಸಂದರ್ಭದಲ್ಲಿ ಬೋರ್‌ವೆಲ್ ನೀರನ್ನು ಉಪಯೋಗಿಸಿ ಮಹಾನಗರಪಾಲಿಕೆಯೊಂದಿಗೆ ಸಹಕರಿಸಲು ಕೋರಿದೆ.

Be the first to comment on "ದಾವಣಗೆರೆ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ"

Leave a comment

Your email address will not be published.


*