ದಾವಣಗೆರೆಗೆ 24 ಗಂಟೆ ಕುಡಿಯುವ ನೀರಿನ ಯೋಜನೆ : ಮನೆ ಮನೆ ಸರ್ವೆ ಕಾರ್ಯ ಆರಂಭ

Share
  • 82
    Shares

ದಾವಣಗೆರೆ-ದಾವಣಗೆರೆ ಮಹಾನಗರಪಾಲಿಕೆ ವತಿಯಿಂದ ‘ಜಲಸಿರಿ’ ಯೋಜನೆಯಡಿ, ನಗರಕ್ಕೆ 24×7  ಕುಡಿಯುವ ನೀರು ಸರಬರಾಜು ಯೋಜನೆ ಮಂಜೂರಾಗಿದ್ದು, ಕಾಮಗಾರಿಯನ್ನು ಈಗಾಗಲೇ ದೆಹಲಿ ಮೂಲದ ಮೆ|| ಸೂಯೆಜ್ ಪ್ರೋಜೆಕ್ಟ್ಸ್ ಕಂಪನಿಯವರಿಗೆ ವಹಿಸಲಾಗಿದೆ.
ಈ ಗುತ್ತಿಗೆದಾರರು ದಾವಣಗೆರೆ ನಗರದಲ್ಲಿ ಪ್ರಾರಂಭಿಕ ಹಂತವಾಗಿ ಮನೆ ಮನೆ ಸರ್ವೆ ಕೈಗೊಂಡಿದ್ದು, ಸರ್ವೆ ಮಾಹಿತಿಗಳು ಯೋಜನೆಯನ್ನು ಯಶಸ್ವಿಗೊಳಿಸಲು ತುಂಬಾ ಸಹಕಾರಿಯಾಗಿರುತ್ತದೆ. ಈ ಕಂಪನಿಯ ಪ್ರತಿನಿಧಿಗಳು ಕೆಯುಐಡಿಎಫ್‌ಸಿ ಇಲಾಖೆಯ ಗುರುತಿನ ಚೀಟಿ ಹೊಂದಿದ್ದು, ಗುರುತಿನ ಚೀಟಿ ಹೊಂದಿದ ಪ್ರತಿನಿಧಿಗಳು ತಮ್ಮ ಮನೆಗಳಿಗೆ ಬಂದಲ್ಲಿ ಸಾರ್ವಜನಿಕರು ಸಂಬಂಧಿಸಿದ ಮಾಹಿತಿಯನ್ನು ನೀಡಿ ಸಹಕರಿಸಬೇಕೆಂದು ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment on "ದಾವಣಗೆರೆಗೆ 24 ಗಂಟೆ ಕುಡಿಯುವ ನೀರಿನ ಯೋಜನೆ : ಮನೆ ಮನೆ ಸರ್ವೆ ಕಾರ್ಯ ಆರಂಭ"

Leave a comment

Your email address will not be published.


*