ದಾವಣಗೆರೆಯಲ್ಲಿ ನಾಳೆ ‘ರಾಷ್ಟ್ರೀಯ ಗೀತ ನೃತ್ಯೋತ್ಸವ’ – ಶ್ರೀಮತಿ ದೀಪಾ

Share
  • 45
    Shares

ದಾವಣಗೆರೆ.ಜೂ.9-ಇದೇ 10 ರ ಭಾನುವಾರ ಸಂಜೆ ನಗರದ ಶಿವಯೋಗ ಮಂದಿರದ ಆವರಣದಲ್ಲಿ “ಚಿರಂತನ ಉತ್ಸವ-ರಾಷ್ಟ್ರೀಯ ಗೀತ ನೃತ್ಯೋತ್ಸವ ‘ ನಡೆಯಲಿದೆ ಎಂದು ‘ಚಿರಂತನ’ ಅಧ್ಯಕ್ಷೆ ಶ್ರೀಮತಿ ದೀಪಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಜೆ 5.30  ಕ್ಕೆ ಆರಂಭವಾಗಲಿರುವ ಈ ಕಾರ್ಯಕ್ರಮದಲ್ಲಿ ೧೦೦ಕ್ಕೂಹೆಚ್ಚು ಕಲಾವಿದರು ಭಾರತೀಯ ರಾಷ್ಟ್ರೀಯ ನೃತ್ಯಗಳರಸದೌತಣ ಪ್ರಸ್ತುತ ಪಡಿಸಲಿದ್ದಾರೆ ಎಂದರು.


ಮುಂಬೈನ ಷಣ್ಮುಖಪ್ರಿಯ ಸಂಸ್ಥೆಯ ಕಲಾವಿದರು ಒಡಿಸ್ಸಿ ನೃತ್ಯ, ಹೈದರಾಬಾದ್‌ನ ಲಾಸ್ಯ ಲಹರಿ ತಂಡದವರು ಕೂಚಿಪುಡಿ,ಬೆಂಗಳೂರಿನ ಥಾಟ್ ತಂಡವು ಕಥಕ್ ನೃತ್ಯ ಹಾಗೂ ಚಿರಂತನ ಕಲಾವಿದರು ಶಿವಶಕ್ತಿ ಭರತನಾಟ್ಯ ರೂಪಕ ಪ್ರದರ್ಶಿಸಲಿದ್ದಾರೆ. ಮತ್ತು ಬೆಂಗಳೂರಿನ ಶ್ರೀರೇವತಿ ರಾಮತ್ ತಂಡ ವೀಣಾ ವಾದನ ಹಾಗೂ ಚಿರಂತನ ತಂಡದಿಂದ ಸಿಂಪೋನಿ ವಿವಿಧ ವಾದ್ಯ ಪ್ರದರ್ಶನಗಳಿವೆ ಎಂದು ಹೇಳಿದರು.
ಮಾಧವಿ ಗೋಪಾಲಕೃಷ್ಣ ಮಾತನಾಡುತ್ತಾ, ಸಂಜೆಯ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್,ದೂಡಾ ಆಯುಕ್ತ ಆದಪ್ಪ, ಉದ್ಯಮಿ ಅಥಣಿವೀರಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಕುಮಾರ ಬೆಕ್ಕೇರಿ, ಕಲ್ಪಶ್ರೀ ಸಂಸ್ಥೆ ಸಂಸ್ಥಾಪಕರ ಸುಜೇಂದ್ರಬಾಬು ಆಗಮಿಸಲಿದ್ದಾರೆ ಎಂದು ಹೇಳಿದರು.
ಎಂ.ಎಸ್.ಅಲಕಾನಂದ ಅವರು ಮಾತನಾಡುತ್ತಾ ಮೈಸೂರಿನ ಡಾ.ಶೀಲಾ ಶ್ರೀಧರ್ ಅವರಿಗೆ ಈ ಬಾರಿಯ ಚಿರಂತನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.ರಾಜು ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Be the first to comment on "ದಾವಣಗೆರೆಯಲ್ಲಿ ನಾಳೆ ‘ರಾಷ್ಟ್ರೀಯ ಗೀತ ನೃತ್ಯೋತ್ಸವ’ – ಶ್ರೀಮತಿ ದೀಪಾ"

Leave a comment

Your email address will not be published.


*