ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ನ್ಯಾಷನಲ್ ಐಸಿಟಿ ಅಚೀವ್‌ಮೆಂಟ್ ಪ್ರಶಸ್ತಿ

Share
  • 45
    Shares

ದಾವಣಗೆರೆ -ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಅಸೋಚಾಮ್ (ASSOCHAM The Associated Chambers of Commerce and Industry of India) ಇವರು ದಾವಣಗೆರೆ ವಿಶ್ವವಿದ್ಯಾನಿಲಯವು ಮಾಹಿತಿ ಮತ್ತು ಸಂವಹನ ಕ್ಷೇತ್ರದಲ್ಲಿ ಮಾಡಿದ ಗಣನೀಯ ಪ್ರಗತಿಯನ್ನು ಗುರುತಿಸಿ ‘ದಕ್ಷಿಣ ಭಾರತದ ಶೈಕ್ಷಣಿಕ ವಲಯದಲ್ಲಿನ ಸಾಧನೆಗೆ ನೀಡುವ ನ್ಯಾಷನಲ್ ಐಸಿಟಿ ಅಚೀವ್‌ಮೆಂಟ್ ಪ್ರಶಸ್ತಿ’ಯನ್ನು ಪ್ರಧಾನ ಮಾಡಿರುತ್ತಾರೆ.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಶರಣಪ್ಪ ವಿ. ಹಲಸೆ ಇವರು ಜೂ.೨೨ ರಂದು ಜಾರ್ಕಂಡ್ ರಾಜ್ಯದ ರಾಜಧಾನಿಯಾದ ರಾಂಚಿಯಲ್ಲಿ ನಡೆದ ಅಸೋಚಾಮ್ ಪ್ರಶಸ್ತಿ ಪ್ರದಾನ ಸಮಾರಂಭ-2018 ಸಮಾರಂಭದಲ್ಲಿ ಅಸೋಚಾಮ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ್ರಾಂತೀಯ ನಿರ್ದೇಶಕರ ಸಮ್ಮುಖದಲ್ಲಿ ಜಾರ್ಖಂಡ್ ರಾಜ್ಯದ ಆಹಾರ, ಸಾರ್ವಜನಿಕ ವಿತರಣೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಸರಯುರಾಯ್ ಇವರಿಂದ ಪ್ರಶಸ್ತಿ ಸ್ವೀಕರಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

Be the first to comment on "ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ನ್ಯಾಷನಲ್ ಐಸಿಟಿ ಅಚೀವ್‌ಮೆಂಟ್ ಪ್ರಶಸ್ತಿ"

Leave a comment

Your email address will not be published.


*