ದಾವಣಗೆರೆಯ ಅಂಗವಿಕಲ ಮಹಿಳೆ ಶೈಲಾಗೆ ಉದ್ಯೋಗ ನೀಡಿದ ಸಿಎಂ

Share
  • 92
    Shares

ಬೆಂಗಳೂರು : ಇತ್ತೀಚೆಗಷ್ಟೆ ಗುಂಡ್ಲುಪೇಟೆಯ ಅಂಗವಿಕಲ ಮಹಿಳೆಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಉದ್ಯೋಗ ಕಲ್ಪಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೀಗ ಮತ್ತೊಬ್ಬ ಅಂಗವಿಕಲ ಮಹಿಳೆಗೆ ಉದ್ಯೋಗ ಕಲ್ಪಿಸುವ ಮೂಲಕ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.
ದಾವಣಗೆರೆಯ ಅಂಗವಿಕಲ ಮಹಿಳೆ ಶೈಲಾ ಎಂಬುವವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಯೋಗ ಒದಗಿಸಿದ್ದಾರೆ. ವಿಧಾನಸೌಧದಲ್ಲಿ ಕುಮಾ ರಸ್ವಾಮಿ ಅವರನ್ನು ಭೇಟಿ ಮಾಡಿದ ಶೈಲಾ ತಮ್ಮ ಅಳಲನ್ನು ತೋಡಿಕೊಂಡರು. ಈ ವೇಳೆ ಮಹಿಳೆಯ ಕಷ್ಟಕ್ಕೆ ಮರುಗಿದ ಮುಖ್ಯಮಂತ್ರಿಗಳು ದಾವಣಗೆರೆ ಜಿಲ್ಲಾ ವಾರ್ತಾ ಇಲಾಖೆಯಲ್ಲಿ ಟೈಪಿಸ್ಟ್ ಕೆಲಸ ನೀಡುವಂತೆ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀ ನಾರಾಯಣ ಅವರಿಗೆ ಸೂಚನೆ ನೀಡಿದರು.
ತಮ್ಮ ಪುಟ್ಟ ಕಂದಮ್ಮ ಮತ್ತು ತಾಯಿಯೊಂದಿಗೆ ಶೈಲಾ ಅವರು ನನ್ನನ್ನು ಭೇಟಿ ಮಾಡಲು ಬೆಂಗಳೂರಿಗ ಆಗಮಿಸಿ ದ್ದಾರೆ. ಪತ್ನಿಯಿಂದ ಪತಿ ದೂರವಾಗಿದ್ದು, ೨ ತಿಂಗಳ ಹಸುಗೂಸು ಮತ್ತು ತಾಯಿಯನ್ನು ಸಾಕುವ ಜವಾಬ್ದಾರಿ ಈಕೆಯ ಮೇಲಿದೆ. ಈ ನಡುವೆ ಅಪಘಾತದಲ್ಲಿ ಮಹಿಳೆಯು ತನ್ನ ಬಲಗೈಯನ್ನು ಕಳೆದುಕೊಂಡಿದ್ದಾರೆ.
ಆದರೂ, ಎಡಗೈನಲ್ಲಿಯೇ ಟೈಪಿಂಗ್ ಮಾಡಲು ಸಮರ್ಥರಾಗಿದ್ದಾರೆ. ಹೀಗಾಗಿ ಶೈಲಾ ಅವರಿಗೆ ಮಾನವೀಯತೆ ದೃಷ್ಟಿ ಯಿಂದ ಕೆಲಸ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಇದೇ ವೇಳೆ ಶೈಲಾ ಅವರ ಎರಡು ತಿಂಗಳ ಹಸುಗೂಸನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಎತ್ತಿ ಮುದ್ದಾಡಿದ್ದು ಗಮನ ಸೆಳೆಯಿತು.ಓತ್ಲಾ ಹೊಡೆಯುವ ಸಿಬ್ಬಂದಿ ತೆಗೆಯಿರಿ!: ಕಾರಿಡಾರ್‌ನಲ್ಲಿ ಓತ್ಲಾ ಹೊಡೆದುಕೊಂಡು ತಿರುಗಾಡುವವರನ್ನು ತೆಗೆದುಹಾಕುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

1 Comment on "ದಾವಣಗೆರೆಯ ಅಂಗವಿಕಲ ಮಹಿಳೆ ಶೈಲಾಗೆ ಉದ್ಯೋಗ ನೀಡಿದ ಸಿಎಂ"

  1. Thank u sir….

Leave a comment

Your email address will not be published.


*