ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆ ಪ್ರಯುಕ್ತ ಜಾಥಾ

Share
  • 16
    Shares

ದಾವಣಗೆರೆ -ನಶೆಯ ಅಲೆ, ಸಾವಿನ ಸೆಲೆ… ಜೀವನ ಬೇಕೆ? ವ್ಯಸನ ಬೇಕೆ?… ಆರೋಗ್ಯವೇ ಭಾಗ್ಯ,… .ವ್ಯಸನ ಮುಕ್ತ ಸಮಾಜ ನಿರ್ಮಿಸೋಣ ಬನ್ನಿ..ಎಂಬ ಘೋಷವಾಕ್ಯಗಳೊಂದಿಗೆ, ಮಾದಕ ವ್ಯಸನದಿಂದಾಗುವ ದುಷ್ಪರಿಣಾಮಗಳನ್ನು ಸಾರುತ್ತಾ ನಗರದ ವಿವಿಧೆಡೆ ಜಾಗೃತಿ ಜಾಥ ಸಾಗಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಬೆಳಿಗ್ಗೆ ೯ ಕ್ಕೆ ದಾವಣಗೆರೆಯ ಭಾಷಾನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಂತರಾಷ್ಟ್ರೀಯ ಮಾದಕವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಅಬಕಾರಿ ಇಲಾಖೆ ಉಪ ಆಯುಕ್ತ ವೈ ಆರ್ ಮೋಹನ್ ಚಾಲನೆ ನೀಡಿದರು.
ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆಯ ಈ ವರ್ಷದ ಘೋಷಣೆ ‘ಮೊದಲು ಆಲಿಸು : ಮಕ್ಕಳು ಮತ್ತು ಯುವಜನರೊಂದಿಗೆ ಭಾವನಾತ್ಮಕವಾಗಿ ಸ್ಪಂದಿಸುವುದು ಅವರ ಆರೋಗ್ಯಕರ ಬೆಳವಣಿಗೆ ಮತ್ತು ಭದ್ರತೆಗೆ ಸಹಕಾರಿ’ ಎಂಬುದಾಗಿದ್ದು ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಅರಿವು ಮೂಡಿಸಲಾಯಿತು.
ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಡಾ. ಎಂ.ಎಸ್.ತ್ರಿಪುಲಾಂಬ, ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ. ಸರೋಜಾ ಬಾಯಿ, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ರಾಘವನ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಮೀನಾಕ್ಷಿ, ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದ, ಮಾನಸಿಕ ಆರೋಗ್ಯ ತಜ್ಞ ಡಾ. ದಯಾನಂದ ಸಾಗರ್, ಇತರೆ ಮಡಿಕಲ್ ಕಾಲೇಜುಗಳ ಮನೋವೈದ್ಯರು, ಜಿಲ್ಲಾ ಮಾನಸಿಕ ಕಾರ್ಯಕ್ರಮದ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಜಾಥಾದಲ್ಲಿ ಆಶಾ ಕಾರ್ಯಕರ್ತೆಯರು, ಶುಶ್ರೂಷ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಜಾಥಾ ಭಾಷಾನಗರದ ಪ್ರಾಥಮಿಕ ಕೇಂದ್ರದಿಂದ ಹೊರಟು ಅಕ್ತರ್ ರಜಾ ಸರ್ಕಲ್‌ವರೆಗೆ ತಲುಪಿತು.
ಜಾಥಾ ಕಾರ್ಯಕ್ರಮ ನಂತರ ಭಾಷಾನಗರದ ಮಿಲ್ಲತ್ ಕಾಲೇಜಿನಲ್ಲಿ ವ್ಯಸನದಿಂದಾಗುವ ದುಷ್ಪರಿಣಾಮದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲಿ ಏರ್ಪಡಿಸಲಾಗಿತ್ತು.

Be the first to comment on "ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆ ಪ್ರಯುಕ್ತ ಜಾಥಾ"

Leave a comment

Your email address will not be published.


*