ವಿಧಾನಪರಿಷತ್ ಚುನಾವಣೆ : ದಾವಣಗೆರೆಯಲ್ಲಿ ಉತ್ತಮ ಮತದಾನ

Share
  • 45
    Shares

ದಾವಣಗೆರೆ -ಜೂ. 8 ರಂದು ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ, ನೈರುತ್ಯ ಪದವೀಧರರ ಕ್ಷೇತ್ರ ಮತ್ತು ಈಶಾನ್ಯ ಪದವೀಧರರ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತದಾನದ ವಿವರ ಇಂತಿದೆ.
ಆಗ್ನೇಯ ಶಿಕ್ಷಕರ ಕ್ಷೇತ್ರ : ಈ ಕ್ಷೇತ್ರದಲ್ಲಿ ಶೇ. 91.59 ಮತದಾನವಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು ೬ ಮತಗಟ್ಟೆಗಳಿದ್ದು ೨೦೫೪ ಪುರುಷ, ೮೩೫ ಮಹಿಳೆ ಸೇರಿದಂತೆ ೨೮೮೯ ಮತದಾರರ ಪೈಕಿ ೧೯೦೨ ಪುರುಷ, ೭೪೪ ಮಹಿಳೆ ಸೇರಿದಂತೆ ೨೬೪೬ ಮತದಾರರು ಮತದಾನ ಮಾಡಿದ್ದಾರೆ.
ಹರಿಹರ ತಾಲ್ಲೂಕಿನ ಮತಗಟ್ಟೆ ಸಂಖ್ಯೆ ೪ ರಲ್ಲಿ ೨೪೦ ಪುರುಷ, ೭೯ ಮಹಿಳೆ ಸೇರಿದಂತೆ ಒಟ್ಟು ೩೧೯ ಮತದಾರರಿದ್ದು ಈ ಪೈಕಿ ೨೩೪ ಪುರುಷ, ೭೫ ಮಹಿಳೆ (೯೬.೮೭) ಮತದಾರರು ಮತದಾನ ಮಾಡಿದ್ದಾರೆ. ದಾವಣಗೆರೆ ಮತಗಟ್ಟೆ ಸಂಖ್ಯೆ ೨ ರಲ್ಲಿ ೩೮೩ ಪುರುಷ, ೧೮೩ ಮಹಿಳೆಯರ ಪೈಕಿ ೩೪೪ ಪುರುಷ, ೧೪೭ ಮಹಿಳೆಯರು(ಶೇ೮೬.೭೫) ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ ೨ಎ ರಲ್ಲಿ ೩೯೭ ಪುರುಷ, ೧೬೯ ಮಹಿಳೆಯರ ಪೈಕಿ ೩೭೧ ಪುರುಷ, ೧೫೧ ಮಹಿಳ ಮತದಾರರು (ಶೇ.೯೨.೨೩)ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ ೨ಬಿ ರಲ್ಲಿ ೩೬೬ ಪುರುಷರು, ೨೦೦ ಮಹಿಳೆಯರ ಪೈಕಿ ೩೪೨ ಪುರುಷ, ೧೮೧ ಮಹಿಳೆ ಮತದಾರರು (ಶೇ. ೯೨.೪೦) ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ ೨ಸಿ ರಲ್ಲಿ ೪೨೨ ಪುರುಷ, ೧೨೨ ಮಹಿಳೆಯರ ಪೈಕಿ ೩೭೪ ಪುರುಷ, ೧೬೦ ಮಹಿಳೆಯರು (ಶೇ.೮೯.೯೦) ಮತದಾನ ಮಾಡಿದ್ದಾರೆ. ಜಗಳೂರು ಮತಗಟ್ಟೆ ಸಂಖ್ಯೆ ೩ ರಲ್ಲಿ ೨೪೬ ಪುರುಷ, ೩೨ ಮಹಿಳಾ ಮತದಾರರ ಪೈಕಿ ೨೩೭ ಪುರುಷ, ೩೦ ಮಹಿಳಾ ಮತದಾರರು (ಶೇ. ೯೬.೦೪) ಮತದಾನ ಮಾಡಿದ್ದಾರೆ.


ಈಶಾನ್ಯ ಪದವೀಧರರ ಕ್ಷೇತ್ರ: ಈ ಕ್ಷೇತ್ರದಲ್ಲಿ ಶೇ. ೭೭.೫೬ ಮತದಾನವಾಗಿದೆ. ಒಟ್ಟು ೯೭೪ ಪುರುಷ, ೨೭೮ ಮಹಿಳೆ ಸೇರಿದಂತೆ ೧೨೫೨ ಮತದಾರರ ಪೈಕಿ ೭೫೮ ಪುರುಷ, ೨೧೩ ಮಹಿಳೆ ಸೇರಿದಂತೆ ೯೭೧ ಮತದಾರರು ಮತದಾನ ಮಾಡಿದ್ದಾರೆ.
ಈ ಕ್ಷೇತ್ರದ ಹರಪನಹಳ್ಳಿ ತಾಲ್ಲೂಕಿನ ಮತಗಟ್ಟೆ ಸಂಖ್ಯೆ ೧೩೩ ರಲ್ಲಿ ಶೇ. ೭೮.೫೮ ಮತದಾನವಾಗಿದೆ. ಈ ಮತಕ್ಷೇತ್ರದಲ್ಲಿ ೪೯೦ ಪುರುಷ, ೧೩೧ ಮಹಿಳೆ ಸೇರಿದಂತೆ ೬೨೧ ಮತದಾರರ ಪೈಕಿ ೩೮೬ ಪುರುಷ, ೧೦೨ ಮಹಿಳೆ ಸೇರಿದಂತೆ ೪೮೮ ಮತದಾರರು(ಶೇ. ೭೮.೫೮) ಮತದಾನ ಮಾಡಿರುತ್ತಾರೆ. ಮತಗಟ್ಟೆ ಸಂಖ್ಯೆ ೧೩೩ಎ ರಲ್ಲಿ ೪೮೪ ಪುರುಷ, ೧೪೭ ಮಹಿಳಾ ಮತದಾರರ ಪೈಕಿ ೩೭೨ ಪುರುಷ, ೧೧೧ ಮಹಿಳೆ ಸೇರಿದಂತೆ ಒಟ್ಟು ೪೮೩ ಮತದಾರರು(ಶೇ. ೭೬.೫೫)ಮತದಾನ ಮಾಡಿದ್ದಾರೆ.
ನೈರುತ್ಯ ಪದವೀಧರರ ಕ್ಷೇತ್ರ: ಈ ಕ್ಷೇತ್ರದಲ್ಲಿ ಶೇ ೬೮.೬೨ ಮತದಾನವಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು ೨೬೯೮ ಪುರುಷ, ೧೧೫೮ ಮಹಿಳೆ ಸೇರಿದಂತೆ ೬೦೭೧ ಮತದಾರರಿದ್ದು ಈ ಪೈಕಿ ೩೦೮೨ ಪುರುಷ, ೧೦೮೪ ಮಹಿಳೆ ಸೇರಿದಂತೆ ೪೧೬೬ ಮತದಾರರು ಮತದಾನ ಮಾಡಿದ್ದಾರೆ.
ಈ ಕ್ಷೇತ್ರದ ಹೊನ್ನಾಳಿ ತಾಲ್ಲೂಕಿನ ಮತಗಟ್ಟೆ ಸಂಖ್ಯೆ ೨೧ ರಲ್ಲಿ ೪೩೯ ಪುರುಷ, ೨೧೦ ಮಹಿಳೆ ಮತದಾರರ ಪೈಕಿ ೩೨೬ ಪುರುಷ, ೧೪೨ ಮಹಿಳೆ ಸೇರಿದಂತೆ ಒಟ್ಟು ೪೬೮ ಮತದಾರರು(ಶೇ.೭೨.೧೧)ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ ೨೨ ರಲ್ಲಿ ೬೨೧ ಪುರುಷ, ೨೧೧ ಮಹಿಳೆ ಪೈಕಿ ೪೫೫ ಪುರುಷ, ೧೩೯ ಮಹಿಳೆ ಸೇರಿದಂತೆ ೫೯೪ ಮತದಾರರು(ಶೇ.೭೧.೩೯) ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ ೨೨ಎ ರಲ್ಲಿ ೫೬೧ ಪುರುಷ, ೨೩೯ ಮಹಿಳೆ ಮತದಾರರ ಪೈಕಿ ೩೭೩ ಪುರುಷ, ೧೭೬ ಮಹಿಳಾ ಮತದಾರರು(ಶೇ.೬೮.೬೩)ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ ೨೨ಬಿ ರಲ್ಲಿ ೫೨೮ ಪುರುಷ, ೨೭೨ ಮಹಿಳಾ ಮತದಾರರ ಪೈಕಿ ೩೮೧ ಪುರುಷ, ೧೨೧ ಮಹಿಳಾ ಮತದಾರರು(ಶೇ. ೬೨.೭೫) ಮತದಾನ ಮಾಡಿದ್ದಾರೆ. ಬಸವಾಪಟ್ಟಣದ ಮತಗಟ್ಟೆ ಸಂಖ್ಯೆ ೨೩ ರಲ್ಲಿ ೫೪೯ ಪುರುಷ, ೨೨೬ ಮಹಿಳೆಯರ ಪೈಕಿ ೩೯೭ ಪುರುಷ, ೧೨೬ ಮಹಿಳ ಮತದಾರರು(ಶೇ. ೬೭.೪೮)ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ ೨೩ಎ ರಲ್ಲಿ ೫೭೬ ಪುರುಷ, ೨೨೪ ಮಹಿಳೆ ಮತದಾರರ ಪೈಕಿ ೩೮೩ ಪುರುಷ, ೧೧೯ ಮಹಿಳಾ ಮತದಾರರು(ಶೇ. ೬೨.೭೫) ಮತದಾನ ಮಾಡಿರುತ್ತಾರೆ. ಚನ್ನಗಿರಿಯ ಮತಗಟ್ಟೆ ಸಂಖ್ಯೆ ೨೪ ರಲ್ಲಿ ೫೧೮ ಪುರುಷ, ೧೮೨ ಮಹಿಳೆ ಮತದಾರರ ಪೈಕಿ ೪೧೨ ಪುರುಷ, ೧೧೯ ಮಹಿಳಾ ಮತದಾರರು(ಶೇ. ೭೫.೮೬)ಮತದಾನ ಮಾಡಿರುತ್ತಾರೆ. ಮತಗಟ್ಟೆ ಸಂಖ್ಯೆ ೨೪ಎ ರಲ್ಲಿ ೪೮೧ ಪುರುಷ, ೨೩೪ ಮಹಿಳೆ ಮತದಾರರ ಪೈಕಿ, ೩೫೫ ಪುರುಷ, ೧೪೨ ಮಹಿಳಾ ಮತದಾರರು(ಶೇ. ೬೯.೫೧) ಮತದಾನ ಮಾಡಿರುತ್ತಾರೆ.

ನೈರುತ್ಯ ಶಿಕ್ಷಕರ ಕ್ಷೇತ್ರ: ಈ ಕ್ಷೇತ್ರದಲ್ಲಿ ಶೇ. ೮೪ ಮತದಾನವಾಗಿದೆ. ೮೧೮ ಪುರುಷ, ೨೦೭ ಮಹಿಳಾ ಮತದಾರರು ಸೇರಿದಂತೆ ಒಟ್ಟು ೧೦೨೫ ಮತದಾರರ ಪೈಕಿ ೬೯೫ ಪುರುಷ ಮತ್ತು ೧೬೬ ಮಹಿಳಾ ಮತದಾರರು ಸೇರಿದಂತೆ ೮೬೧ ಮತದಾರರು ಮತ ಚಲಾಯಿಸಿದ್ದಾರೆ.
ಈ ಕ್ಷೇತ್ರದ ಹೊನ್ನಾಳಿ ತಾಲ್ಲೂಕಿನ ಮತಗಟ್ಟೆ ಸಂಖ್ಯೆ ೨೧ ರಲ್ಲಿ ೬೫ ಪುರುಷ, ೧೨ ಮಹಿಳೆ ಪೈಕಿ ೫೨ ಪುರುಷ, ೧೧ ಮಹಿಳೆಯರು ಮತದಾನ(ಶೇ.೮೧.೮೨) ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ ೨೨ ರಲ್ಲಿ ೨೬೬ ಪುರುಷ, ೭೨ ಮಹಿಳೆ ಪೈಕಿ ೨೪೧ ಪುರುಷ ಮತ್ತು ೫೬ ಮಹಿಳೆಯರು ಮತದಾನ(೮೭.೮೭)ಮಾಡಿದ್ದಾರೆ. ಬಸವಾಪಟ್ಟಣದ ಮತಗಟ್ಟೆ ಸಂಖ್ಯೆ ೨೩ ರಲ್ಲಿ ೨೯೮ ಪುರುಷ, ೬೫ ಮಹಿಳೆಯರ ಪೈಕಿ ೨೪೪ ಪುರುಷ, ೫೭ ಮಹಿಳೆ ಮತದಾರರು (ಶೇ. ೮೨.೯೨)ಮತದಾನ ಮಾಡಿದ್ದಾರೆ. ಚನ್ನಗಿರಿಯ ಮತಗಟೆ ಸಂಖ್ಯೆ ೨೪ ರಲ್ಲಿ ೧೮೯ ಪುರುಷ, ೫೮ ಮಹಿಳೆಯರ ಪೈಕಿ ೧೫೮ ಪುರುಷ ಮತ್ತು ೪೨ ಮಹಿಳೆ ಮತದಾರರು(ಶೇ. ೮೦.೯೭)ಮತದಾನ ಮಾಡಿರುತ್ತಾರೆ.

Be the first to comment on "ವಿಧಾನಪರಿಷತ್ ಚುನಾವಣೆ : ದಾವಣಗೆರೆಯಲ್ಲಿ ಉತ್ತಮ ಮತದಾನ"

Leave a comment

Your email address will not be published.


*