ಗೊಲ್ಲರಹಳ್ಳಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ‘ಮಂಗಳ ಮಹೋತ್ಸವ’

Share
  • 10
    Shares
ದಾವಣಗೆರೆ- ತಾಲ್ಲೂಕಿನ  ಗೊಲ್ಲರಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ವೇಂಕಟೇಶ್ವರ  ದೇವಸ್ಥಾನದ ಉದ್ಘಾಟನೆ ವಿಜೃಂಭಣೆಯಿಂದ ನಡೆಯಿತು.
ಗೊಲ್ಲರಹಳ್ಳಿ ಗ್ರಾಮದಲ್ಲಿ ರೇವತಿ ನಕ್ಷತ್ರ ಸೌಭಾಗ್ಯ ಯೋಗದಲ್ಲಿ ಬೆಳಗ್ಗೆ 6.25 ನಿಮಿಷದಲ್ಲಿ ಶುಭ ಅಮೃತ ಕಾಲದಲ್ಲಿ ಶ್ರೀ ಲಕ್ಷ್ಮಿ ವೇಂಕಟೇಶ್ವರ ಸ್ವಾಮಿಗೆ ಮಂಗಳ ಮಹೋತ್ಸವದಲ್ಲಿ ದೇವಸ್ಥಾನವನ್ನು ಉದ್ಘಾಟನೆ ಮಾಡಲಾಯಿತು. ದಾಸ ಸಾಹಿತ್ಯ ಪ್ರೊಜೆಕ್ಟ್ ಟಿಟಿಡಿ ತಿರುಪತಿ ಪಂಡಿತರಾದ ವಿದ್ವಾನ್ ಶ್ರೀ ಪಗಡಾಲ ಆನಂದತಿರ್ಥಾಚಾರ್ಯ ಅಶಿರ್ವಚನ ನೀಡಿದ ಅವರು ಸುಮಾರು ಮೂರು ವರ್ಷಗಳಿಂದ ದೇವಸ್ಥನ ಉದ್ಘಾಟನೆಯಾಗದೆ ಸಮಯಕ್ಕಾಗಿ ಕಾಯುತ್ತಿತ್ತು, ಮೂರು ವರ್ಷಕೊಮ್ಮೆ ಬರುವ ಅಧಿಕ ಮಾಸದ ದಿನ ಉದ್ಘಾಟನೆಯಾಗುತ್ತಿರುವುದರಿಂದ ಗ್ರಾಮಕ್ಕೆ ಮತ್ತು ಜಿಲ್ಲೆಗೆ ಒಳ್ಳೆಯ ಮಳೆ ಬೆಳೆ ಆಗಲಿ ಎಂದು ಹೇಳಿದರು. ವಿಶೇಷ ಧಾರ್ಮಿಕ ಪ್ರವಚನ, ಹಾಗೂ ಶಾಸ್ತ್ರೀಯ ಸಂಗಿತ ಹಾಗೂ ದಾಸವಾಣಿ ಕಾರ್ಯಕ್ರಮ ನಂತರ ದೇವರಿಗೆ ಮಹಾ ಮಂಗಳಾರತಿ ಕಾರ್ಯಕ್ರಮ ನಡೆಸಿಕೊಟ್ಟರು.
ಬೆಂಗಳೂರು ಆಕಾಶವಾಣಿ ಗಾಯಕಿ ದಿವ್ಯ ಗಿರಿಧರ್ ಮತ್ತು ಸಂಗಡಿಗರಿಂದ ದೇವರನಾಮಗಳು ಮತ್ತು ಶಾಸ್ತ್ರೀಯ ಸಂಗಿತ, ದಾವಣಗೆರೆಯ ಶಾರದಾಂಬ ಮತ್ತು ಜೈ ಗುರುದೇವ ಭಜನ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ತಿರುಪತಿಯಿಂದ ತರಲಾಗಿದ್ದ ಚಿನ್ನದ ಮೂರ್ತಿಗಳದ ಶ್ರೀದೇವಿ ಭೂದೇವಿ ಸಮೇತ ಶ್ರೀನಿವಾಸ ದೇವರುಗಳ ಮೂರ್ತಿಯನ್ನು ಬೆಳ್ಳಿರಥದಲ್ಲಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಪುಷ್ಪಾರ್ಚನೆ ಹಾಗೂ ಕಾಲ ತಂಡಗಳಿಂದ ಭಾಜ- ಭಜಂತ್ರಿ, ನಂದಿಕೊಲು, ನಾದಸ್ವರ, ಮ್ರದಂಗ ವಾಲಗ ಡೊಳ್ಳು ಕುಣಿತ ಜೊತೆಯಲ್ಲಿ ಮೇರವಣಿಗೆ ನಡೆಸಲಾಯಿತು. ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ಮೇಳಕಟ್ಟೆ ನಾಗರಾಜಪ್ಪ, ಬಿಜೆಪಿ ಮುಖಂಡರಾದ ವಿ. ವೇಂಕಟಪ್ಪ ಕುಟುಂಬವರ್ಗದವರು, ಹನುಮಂತನಾಯ್ಕ್, ನೋಂದಣಾಧಿಕಾರಿ ರವೀಂದ್ರಗೌಡ, ದೇವಸ್ಥಾನದ ಅಧ್ಯಕ್ಷ ಬಿ.ಟಿ ಸಿದ್ದಪ್ಪ, ಕುಟುಂಬವರ್ಗ, ಉಪಧ್ಯಕ್ಷ ಜಿ ತಿಮ್ಮಪ್ಪ, ಗೌರವಧ್ಯಕ್ಷ ಬಾಲಚಂದ್ರಪ್ಪ, ಚೌಡಪ್ಪ, ಪ್ರಧನಕಾರ್ಯಧರ್ಶಿ ಶೇಖರಪ್ಪ, ಮುಖಂಡ ಆನಂದಪ್ಪ, ವೇಂಕಟಪ್ಪ, ಬಿಟಿ ಚಂದ್ರಪ್ಪ ವೀರಭದ್ರಪ್ಪ ಸುತ್ತ ಮುತ್ತಲಿನ ಗ್ರಾಮಸ್ಥರು ಇದ್ದರು.

Be the first to comment on "ಗೊಲ್ಲರಹಳ್ಳಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ‘ಮಂಗಳ ಮಹೋತ್ಸವ’"

Leave a comment

Your email address will not be published.


*