ಹರಪನಹಳ್ಳಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Share
  • 21
    Shares

ಹರಪನಹಳ್ಳಿ- ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹಿರಿಯ ಸಿವಿಲ್ ನ್ಯಾಯದೀಶರಾದ ಹುಂಡಿ ಮಂಜುಳಾ ಶಿವಪ್ಪನವರು ಹರಪನಹಳ್ಳಿ ಪಟ್ಟಣದ ಎಲ್ಲಾ ಸರ್ಕಾರಿ ಅನುದಾನಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಎಸ್.ಯು,ಜೆ.ಎಂ. ಕಾಲೇಜು ಬಳಿ ಸೇರಿಸಿ ಅಲ್ಲಿ ಸಾಂಕೇತಿಕವಾಗಿ ಗಿಡ ನೆಟ್ಟ ನಂತರ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಶಾಲಾ ಮಕ್ಕಳ ಜೋತೆಗೆ ಪರಿಸರ ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಪ್ಲೆ ಕಾರ್ಡ ಹಾಗೂ ಘೋಷಣೆಗಳನ್ನು ಕೂಗುತ್ತ ಗಿಡಗಳನ್ನು ಸಾರ್ವಜಿನಿಕರಿಗೆ. ವರ್ತಕರಿಗೆ ರೈತರಿಗೆ ತಾವೆ ನಿಡಿ ಪೋಷಣೆ ಮಾಡಬೇಕು ಕಿವಿಮಾತು ಹೇಳಿದರು.
ಈ ವೇಳೆ ಮಾತನಾಡಿದ ಹಿರಿಯ ಸಿವಿಲ್ ನ್ಯಾಯದೀಶರಾದ ಹುಂಡಿ ಮಂಜುಳಾ ಶಿವಪ್ಪನವರು ಶಾಲಾ ಮಕ್ಕಳು ಹಾಗೂ ಆಧಿಕಾರಿಗಳ ಜೋತೆಜಾಥ ಹೋರಟು ಸಾವಿರ ಸಸಿಗಳನ್ನು ವಿತರಿಸಲಾಗಿದ್ದು ಜನಸಾಮನ್ಯರು ತಾವು ನೆಟ್ಟು ಪೋಷಣೆ ಮಾಡುತ್ತವೆ ಎಂದು ಹೇಳಿದ್ದಾರೆಮತ್ತು ಸಾರ್ವಜಿನಿಕ ಸ್ಥಳಗಳಲ್ಲಿ ಸಸಿ ನೆಟ್ಟಿದ್ದವೆ ನಗರದ ವಕೀಲರು ಅಧಿಕಾರಿಗಳು ನಮಗೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದರು.ಹಿರಿಯ ನ್ಯಾಯವಾಧಿ ಟಿ.ಎಚ್.ಎಂ. ವಿರೂಪಾಕ್ಷಯ್ಯ ಮಾತನಾಡಿ ಕಾಡು ಪ್ರಾಣಿಗಳಿದ್ದರೆ ಕಾಡು ಉಳಿಯುತ್ತದೆ ಇಂತಹ ದಿನಮಾನಗಳಲ್ಲಿ ಕಾಡು ನಾಶವಾಗಿ ಮಳೆ ಬಾರದೆ ಬರಗಾಲ ಆವರಿಸಿದ್ದು ನಾವು ಗಿಡಗಳನ್ನು ನೆಡುವ ಮೂಲಕ ಪರಿಸರ ಉಳಿಸುವ ಕೆಲಸ ಮಾಡಬೇಕು ಎಂದರು.
ಅಪರ ಸರ್ಕಾರಿ ವಕೀಲ ಕಣಿವಿಹಳ್ಳಿ ಮಂಜುನಾಥ ಮಾತನಾಡಿ ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ ಸುನಾಮಿಯಂತಹ ಅನೇಕ ಘಟನೆಗಳು ಜರುಗುತ್ತಿದ್ದು ಮುಂದಿನ ಪಿಳಿಗಿಗೆ ಉತ್ತಮ ಪರಿಸರ ಬಿಟ್ಟು ಹೋಗಬೇಕು ಎಂಬುದು ನಮ್ಮೆಲ್ಲರ ಕಳೆಕಳೆಯಾಗಿದ್ದು ಪರಿಸರ ಮಾಲಿನ್ಯಕ್ಕೆ ಮುಖ್ಯಕಾರಣವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಬಿಡಬೇಕು ಎಂದರು.ಸಮಾಜಿಕ ವಲಯರಣ್ಯಾಧಿಕಾರಿ ಕಾಂತೇಶ ಮಾತನಾಡಿ ,ನ್ಯಾಯವಾಧಿ ರೇವಣಗೌಡ ಮಾತನಾಡಿದರು
ವಕೀಲರ ಸಂಘದ ಅದ್ಯಕ್ಷ ಎ.ಕೆ.ಅಜ್ಜಪ್ಪ, ಕಾರ್ಯದರ್ಶಿ ಇದ್ಲಿರಾಮಪ್ಪ, ಉಪಾದ್ಯಕ್ಷೆ ಜೆ.ಸೀಮಾ, ನ್ಯಾಯವಾಧಿಗಳಾದ ಗಂಗಾಧರ ಗುರುಮಠ್,ಪಿ.ಜಗದೀಶಗೌಡ,ಎಸ್.ಎಂ.ರುದ್ರುಮುನಿಸ್ವಾಮಿ, ವಿ.ಜಿ.ಪ್ರಕಾಶಗೌಡ, ಕೆ.ನಾಗರಾಜ, ಕೆ.ಪ್ರಕಾಶ,ಮುತ್ತಿಗಿ ರೇವಣಸಿದ್ದಪ್ಪ, ಎಚ್.ಮಲ್ಲಿಕಾರ್ಜುನ, ಕೆ.ಬಸವರಾಜ, ವಿ.ಮಂಜಣ್ಣ, ಟಿ.ಎಚ್.ಎಂ.ಮಹೇಶ,ಬೆಲೂರು ಸಿದ್ದೇಶ, ವಲಯ ಅರಣ್ಯ ಅಧಿಕಾರಿ ಕೆ.ಶಂಕರನಾಯ್ಕ ತಹಶೀಲ್ದಾರ ಶಿವಶಂಕರನಾಯ್ಕ, ಕ್ಷೇತ್ರಶಿಕ್ಷಾಣಾಧಿಕಾರಿ ರವಿ ಎಲ್. ಪಿಎಸ್‌ಐ ಉಮೇಶ, ಶಿಕ್ಷಣ ಇಲಾಖೆಯ ಡಿಎಸ್ ಲಿಂಗೇಶ, ಎಚ್.ಎಸ್ ಬಂಕಾಪುರ,ಮತ್ತಿತರರು ಇದ್ದರು.

Be the first to comment on "ಹರಪನಹಳ್ಳಿಯಲ್ಲಿ ವಿಶ್ವ ಪರಿಸರ ದಿನಾಚರಣೆ"

Leave a comment

Your email address will not be published.


*