ವಸತಿರಹಿತ ನೇಕಾರರಿಗೆ ವಸತಿ ಕಾರ್ಯಾಗಾರ ನಿರ್ಮಿಸಲು ಅರ್ಜಿ ಆಹ್ವಾನ

Share
  • 28
    Shares

ದಾವಣಗೆರೆ-ಕೈಮಗ್ಗ ಮತ್ತು ಜವಳಿ ಇಲಾಖೆಯ ರಾಜ್ಯ ವಲಯ ನೇಕಾರರ ವಸತಿ ಕಾರ್ಯಾಗಾರ ಯೋಜನೆಯಡಿ ೨೦೧೮-೧೯ ನೇ ಸಾಲಿಗೆ ದಾವಣಗೆರೆ ಜಿಲ್ಲೆಯ ಕೈಮಗ್ಗ/ವಿದ್ಯುತ್ ಚಾಲಿತ ಮಗ್ಗ ಹಾಗೂ ಮಗ್ಗಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ಗ್ರಾಮೀಣ ಮತ್ತು ನಗರ ಪ್ರದೇಶದ ವಸತಿರಹಿತ ನೇಕಾರರಿಗೆ ವಸತಿ ಕಾರ್ಯಾಗಾರ ನಿರ್ಮಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಾಮಾನ್ಯ ವರ್ಗದ ನೇಕಾರರಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಸಹಾಯಧನ ರೂ.೧.೦೦ ಲಕ್ಷ, ರಾಜೀವ್‌ಗಾಂಧಿ ವಸತಿ ನಿಗಮದಿಂದ ರೂ.೧.೨೦ ಲಕ್ಷ ಹೀಗೆ ಒಟ್ಟು ರೂ.೨.೨೦ ಲಕ್ಷಗಳ ಸಹಾಯಧನ ನೀಡಲಾಗುತ್ತದೆ. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಗ್ರಾಮೀಣ ನೇಕಾರರಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಸಹಾಯಧನ ರೂ.೧.೦೦ ಲಕ್ಷ, ರಾಜೀವ್‌ಗಾಂಧಿ ವಸತಿ ನಿಗಮದಿಂದ ರೂ.೧.೭೫ ಲಕ್ಷ ಹೀಗೆ ಒಟ್ಟು ರೂ.೨.೭೫ ಲಕ್ಷಗಳ ಸಹಾಯಧನ ನೀಡಲಾಗುತ್ತದೆ. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ನಗರ ನೇಕಾರರಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಸಹಾಯಧನ ರೂ.೧.೦೦ ಲಕ್ಷ, ರಾಜೀವ್‌ಗಾಂಧಿ ವಸತಿ ನಿಗಮದಿಂದ ರೂ.೨.೦೦ ಲಕ್ಷ ಹೀಗೆ ಒಟ್ಟು ರೂ.೩.೦೦ ಲಕ್ಷಗಳ ಸಹಾಯಧನ ನೀಡಲಾಗುತ್ತದೆ.
ವಸತಿ ರಹಿತ ನೇಕಾರರು ಕನಿಷ್ಠ ೪೦೦ ಚದರ ಅಡಿ ಖಾಲಿ ನಿವೇಶನವನ್ನು ಹೊಂದಿರಬೇಕು. ಅರ್ಜಿ ನಮೂನೆಗಳನ್ನು ಕೈಮಗ್ಗ ಮತ್ತು ಜವಳಿ ಇಲಾಖೆ, ದಾವಣಗೆರೆ ಕಚೇರಿಯಿಂದ ಪಡೆದು ನಿವೇಶನ ದಾಖಲಾತಿ, ಜಾತಿ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್‌ನ ಪ್ರತಿ, ಸ್ಥಳೀಯ ಪ್ರಾಧಿಕಾರಗಳಿಂದ ಪಡೆದ ನಿರಾಪೇಕ್ಷಣಾ ಪತ್ರದೊಂದಿಗೆ ಅರ್ಜಿಗಳನ್ನು ಭರ್ತಿ ಮಾಡಿ, ಜೂನ್ ೩೦ ರ ಒಳಗಾಗಿ ಉಪನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ರಾಮಾಂಜನೇಯ ಪ್ಲಾಜಾ, ಕಾಲೇಜ್ ರಸ್ತೆ, ನಿಟುವಳ್ಳಿ, ದಾವಣಗೆರೆ ಇವರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ಉಪನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿ.ಪಂ, ರಾಮಾಂಜನೇಯ ಪ್ಲಾಜಾ, ನಿಟುವಳ್ಳಿ ರಸ್ತೆ, ದಾವಣಗೆರೆ ದೂರವಾಣಿ ಸಂ: 08192-262362 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment on "ವಸತಿರಹಿತ ನೇಕಾರರಿಗೆ ವಸತಿ ಕಾರ್ಯಾಗಾರ ನಿರ್ಮಿಸಲು ಅರ್ಜಿ ಆಹ್ವಾನ"

Leave a comment

Your email address will not be published.


*