ವಿಶ್ವ ಕರವೇ ಜಿಲ್ಲಾ ಮಹಿಳಾ ಘಟಕದಿಂದ ಪರಿಸರ ದಿನಾಚರಣೆ

Share
  • 2
    Shares

ದಾವಣಗೆರೆ-ಸಮೀಪದ ಆವರಗೆರೆಯ ಮಂಜುನಾಥ ದೇವಸ್ಥಾನದ ಆವರಣದಲ್ಲಿ  ವಿಶ್ವಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎಸ್.ಎ.ರವೀಂದ್ರನಾಥ್ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಾರಕ್ಕೊಮ್ಮೆ ಎಲ್ಲೆಡೆ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಗಿಡಗಳಿಂದ ಬೀಸುವ ಉತ್ತಮ ಗಾಳಿಯಿಂದಾಗಿ ಆರೋಗ್ಯ ಉತ್ತಮವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಹೆಚ್ಚು ಗಿಡಗಳನ್ನು ಬೆಳೆಸಬೇಕು. ಬೆಂಗಳೂರಿ ನಂತಹ ದೊಡ್ಡ ಪಟ್ಟಣದಲ್ಲಿ ಶೇ. 100ಕ್ಕೆ 40 ರಷ್ಟು ಅಸ್ತಮಾ ರೋಗ ಬರುತ್ತಿದೆ. ಆದ್ದರಿಂದ ಪರಿಸರ ಉಳಿವಿಗೆ ಒತ್ತು ನೀಡಬೇಕು. ಕಾಡು ನಾಶಮಾಡುವುದರಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ ಇದು ವಿಷಾಧಕರ ಸಂಗತಿ. ಕಾಡನ್ನು ಹೆಚ್ಚಾಗಿ ಬೆಳೆಸಬೇಕು. ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕೆಂದು ಕರೆ ನೀಡಿದರು.

ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಮಾತನಾಡಿ, ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿರುವುದರಿಂದ ಎಲ್ಲಂದರಲ್ಲಿ ಗಿಡಗಳನ್ನು ನೆಡೆಸಲಾಗುತ್ತಿದೆ. ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯ ಜೊತೆಗೆ ನಮ್ಮ ನೆಲ, ಜಲದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಕರವೇ ಅಧ್ಯಕ್ಷ ಕೆ.ಜಿ.ಯಲ್ಲಪ್ಪ, ವಿಕರವೇ ಕೆ.ಕಾವ್ಯ, ಜ್ಯೋತಿವಿನಾಯಕ್, ಮಂಜುನಾಥ್, ಪಾಲಿಕೆ ಸದಸ್ಯ ಉಮೇಶ್, ಕರಿಯಪ್ಪ, ಸಾಲಮರದ ವೀರಚಾರಿ, ಸುರೇಶ್ ಮತ್ತಿತರರಿದ್ದರು.

Be the first to comment on "ವಿಶ್ವ ಕರವೇ ಜಿಲ್ಲಾ ಮಹಿಳಾ ಘಟಕದಿಂದ ಪರಿಸರ ದಿನಾಚರಣೆ"

Leave a comment

Your email address will not be published.


*