22 ಕೆರೆಗಳಿಗೆ ನೀರು: 23 ರಂದು ಸಭೆ

Share
  • 118
    Shares

ದಾವಣಗೆರೆ- 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಜಾಕ್ವೆಲ್-1ರ ಪಂಪ್ ಗಳನ್ನು ಚಾಲನೆ ಮಾಡಲು ಇರುವ ತೊಂದರೆ ಕುರಿತು ಚರ್ಚಿಸಲು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಇದೇ 23ರ ಶನಿವಾರ ಜಾಕ್ವೆಲ್-೧ರಲ್ಲಿ ಮಧ್ಯಾಹ್ನ ೩ ಗಂಟೆಗೆ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಸಂಸದಜಿ.ಎಂ. ಸಿದ್ದೇಶ್ವರ, ಶಾಸಕರುಗಳಾದ ಎಸ್.ಎ. ರವೀಂದ್ರನಾಥ್, ಪ್ರೊ.ಲಿಂಗಣ್ಣ, ಎಸ್.ವಿ. ರಾಮಚಂದ್ರ ಭಾಗವಹಿಸಲಿದ್ದಾರೆ. ಸಭೆಗೆ ನೀರಾವರಿ ನಿಗಮದ ಅಧಿಕಾರಿಗಳು, ಜಾಕ್ವೆಲ್-1 ಹಾಗೂ 2ಕ್ಕೆ ಸಂಬಂಧಿಸಿದ ಬೆಸ್ಕಾಂ ಅಧಿಕಾರಿಗಳು, ಎಲ್ &ಟಿ ಕಂಪನಿ ಅಧಿಕಾರಿಗಳು ಹಾಗೂ ೨೨ ಕೆರೆಗಳ ವ್ಯಾಪ್ತಿಯ ರೈತ ಮುಖಂಡರು ಹಾಜರಾಗಲು ೨೨ ಕೆರೆಗಳ ಏತ ನೀರಾವರಿ ಹೋರಾಟ ಸಮಿತಿ ಕೋರಿದೆ.

Be the first to comment on "22 ಕೆರೆಗಳಿಗೆ ನೀರು: 23 ರಂದು ಸಭೆ"

Leave a comment

Your email address will not be published.


*