ತರಳಬಾಳು ಶ್ರೀಗಳಿಂದ `ನಮ್ಮ ನಡಿಗೆ ಚೆನ್ನಮ್ಮನ ನಾಡಿಗೆ’ ಸದ್ಭಾವನಾ ಯಾತ್ರೆಗೆ ಚಾಲನೆ

Share
  • 53
    Shares

ಹರಿಹರ – ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಿಂದ ಹೊರಟಿರುವ ನಮ್ಮ ನಡಿಗೆ ಚೆನ್ನಮ್ಮನ ನಾಡಿಗೆ ಸದ್ಬಾವನಾ ಯಾತ್ರೆಯ ಸಮಾರಂಭದಲ್ಲಿ ಪಾದಯಾತ್ರೆಗೆ ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮ ಸಮೀಪವಿರುವ ಶ್ರೀ ವೀರಶೈವಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಿಂದ ಸಿರಿಗರೆ ತರಳಬಾಳು ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಸಮಾಜದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ನಾಡಿಗೆ ಹೊರಟಿರುವ ನಮ್ಮ ನಡಿಗೆ ಚೆನ್ನಮ್ಮ ನಾಡಿಗೆ ಸದ್ಬಾವನಾ ಯಾತ್ರೆಯು ಬರೀ ಪಾದಯಾತ್ರೆಯಾಗಿರದೆ ಎಲ್ಲಾ ಸಮಾಜಗಳ ಪಾದಯಾತ್ರೆಯಾಗಿದೆ. ಹಿಂದೆ ಮಹಾತ್ಮ ಗಾಂಧೀಜಿ ನಡೆಸಿದ ದಂಡಿ ಯಾತ್ರೆಯು ದೇಶ ಕಟ್ಟುವ ಯಾತ್ರೆಯಂತೆ ಶ್ರೀಗಳು ಕೈಗೊಂಡಿರುವ ಯಾತ್ರೆಯು ಸಮಾಜ ಕಟ್ಟುವ ಪವಿತ್ರವಾದ ಯಾತ್ರೆಯಾಗಲಿದೆ ಎಂದರು.
ವಚನಾನಂದ ಶ್ರೀಗಳು ಮಾತನಾಡಿ,ಇಂದಿನ ದಿನಮಾನದಲ್ಲಿ ಸಮಾಜವನ್ನು ಹೇಗೆ ಕಟ್ಟಬೇಕೆಂದರೆ ಅದಕ್ಕೆ ಆದರ್ಶ ಪುರುಷರು ಡಾ.ಶಿವಮೂರ್ತಿ ಶಿವಾಚಾರ್ಯರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿಯ ಶಾಖಾ ಮಠದ ಮಹಾಂತ ಶ್ರೀಗಳು ಆರ್ಶೀವಚನ ನೀಡಿದರು. ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರುಗಳಾದ ಬಸವ ರಾಜ್ ದಿಂಡೂರು, ಬಾವಿ ಬೆಟ್ಟಪ್ಪ, ಧರ್ಮದರ್ಶಿಗಳಾದ ಡಿ.ಉಮಾಪತಿ, ಉಪಾಧ್ಯಕ್ಷರಾದ ಜಿ.ಪಿ.ಪಾಟೀಲ್, ಕಾರ್ಯದರ್ಶಿ ಹನಸಿ ಸಿದ್ದೇಶ್, ಮಲಣ್ಣ ಹುನಗುಂದ್, ನಾಗರತ್ನ ಬಾವಿಕಟ್ಟಿ, ಎನ್.ಜಿ.ನಾಗನಗೌಡ್ರು,ಚಂದ್ರಶೇಖರ್ ಪೂಜಾರ್, ಮಾಜಿ ಶಾಸಕ ಬಿ.ಪಿ. ಹರೀಶ್  ಮುಂತಾದವರು ಉಪಸ್ಥಿತರಿದರು.

Be the first to comment on "ತರಳಬಾಳು ಶ್ರೀಗಳಿಂದ `ನಮ್ಮ ನಡಿಗೆ ಚೆನ್ನಮ್ಮನ ನಾಡಿಗೆ’ ಸದ್ಭಾವನಾ ಯಾತ್ರೆಗೆ ಚಾಲನೆ"

Leave a comment

Your email address will not be published.


*