ಅಣ್ಣೆ ಮಠದ ಶ್ರೀಗಳ ನಿಧನಕ್ಕೆ ಪಂಡಿತಾರಾಧ್ಯ ಶ್ರೀಗಳ ಸಂತಾಪ

Share
  • 28
    Shares

ಸಾಣೇಹಳ್ಳಿ, ಜೂನ್ ೧೪; ಇಲ್ಲಿನ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ನಿನ್ನೆ ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನರಾದ ತರೀಕೆರೆ ತಾಲ್ಲೂಕಿನ ಅಣ್ಣೆ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳವರ ಅಂತಿಮ ದರ್ಶನವನ್ನು ಅಜ್ಜಂಪುರದ ಬಳಿಯಿರುವ ಅಣ್ಣೆ ಮಠದಲ್ಲಿ ಪಡೆದು ಮಾತನಾಡಿ ಪೂಜ್ಯರು ಕ್ರೀಯಾಶೀಲರಾಗಿದ್ದು ಅದ್ಭುತ ಓದುಗರಾಗಿದ್ದರು. ಓದಿನ ವಿದ್ವತ್ತು ಇದ್ದರೂ ಗ್ರಾಮೀಣ ಭಾಷೆಯಲ್ಲಿಯೇ ಮಾತನಾಡಿ ಜನರ ಮನಸ್ಸನ್ನು ಆಕರ್ಷಿಸುತ್ತಿದ್ದರು. ಸದಾ ಜನರ ಸಾಮಾಜಿಕ ಒಳಿತನ ಬಗ್ಗೆ ಚರ್ಚಿಸುತ್ತಿದ್ದರು. ಹಿರಿ-ಕಿರಿಯರೆನ್ನದೆ ಎಲ್ಲರೊಂದಿಗೂ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದರು. ಶರಣ ತತ್ವದ ಬಗ್ಗೆ ಅಪಾರ ಪ್ರೀತಿಯುಳ್ಳವರಾಗಿದ್ದರು. ಪ್ರವಾಸ ಪ್ರಿಯರಾದ ಪೂಜ್ಯರು ಆಗಾಗ ತಮ್ಮ ಭಕ್ತರನ್ನು, ಅನ್ಯ ಮಠದ ಸ್ವಾಮಿಜಿಗಳನ್ನೂ ಉತ್ತರ ಮತ್ತು ದಕ್ಷಿಣ ಭಾರತದ ಅನೇಕ ರಾಜ್ಯಗಳಿಗೆ ಕರೆದೊಯ್ಯುತ್ತಿದ್ದರು. ನಮ್ಮೊಡನೆ ಸದಾ ಒಡನಾಟದಲ್ಲಿದ್ದ ಇಂಥ ಪೂಜ್ಯರ ಅಕಾಲಿಕ ನಿಧನ ನಮಗೆ ತುಂಬ ವೇದನೆಯನ್ನುಂಟು ಮಾಡಿದೆ ಎಂದು ತಿಳಿಸಿದರು.

Be the first to comment on "ಅಣ್ಣೆ ಮಠದ ಶ್ರೀಗಳ ನಿಧನಕ್ಕೆ ಪಂಡಿತಾರಾಧ್ಯ ಶ್ರೀಗಳ ಸಂತಾಪ"

Leave a comment

Your email address will not be published.


*