ಜೈನ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಪ್ರೋಜೆಕ್ಟ್ ರಾಜ್ಯಮಟ್ಟಕ್ಕೆ ಆಯ್ಕೆ

Share
  • 753
    Shares

ದಾವಣಗೆರೆ- ನಗರದ  ಜೈನ್  ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೇಕ್ಯಾನಿಕಲ್ ಹಾಗೂ ಕಂಪ್ಯೂಟರ್  ಸೈನ್ಸ್  ವಿದ್ಯಾರ್ಥಿಗಳ ಪ್ರೋಜೆಕ್ಟ್ ಅವಿಷ್ಕಾರವು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಮೇಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಕು. ಸಂತೋಷ ಸಿ, ರಘುಪತಿ, ಸಂತೋಷ ಟಿ, ಪ್ರವೀಣ ಎಂ ಸಿ, ಈ ವಿದ್ಯಾರ್ಥಿಗಳು ಕ್ಯಾರಬ್ ಬೀಜಗಳನ್ನು & ತಿರಳನ್ನು ಬೇರ್ಪಡಿಸುವ ಯಂತ್ರ ವನ್ನು ಆವಿಷ್ಕಾರ ಮಾಡಿದ್ದಾರೆ. ಈ ವಿದ್ಯಾರ್ಥಿಗಳು].ಪ್ರದೀಪಕುಮಾರ ಇಳಯ ಇವರ ಮಾರ್ಗದರ್ಶನದಲ್ಲಿ ಕಂಡುಹಿಡಿದಿದ್ದಾರೆ.
ಮೇಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಕು. ಶ್ರೀಕಾಂತ ಅಂಬಲಿ, ಸೌಜನ್ಯಾ ಎಂ, ಸ್ವಾತಿ ವಿ ಎಸ್, ಸಿರಾಜ ಈ ವಿದ್ಯಾರ್ಥಿಗಳು ಮೋಟಾರ್ ಸೈಕಲ್ ಗೇರ್‌ಗಳನ್ನು ಆಟೋಮ್ಯಾಟಿಕ್ ಬಟನ್ ಮೂಲಕ ನಿಯಂತ್ರಿಸುವ ಯಂತ್ರ ವನ್ನು ಆವಿಷ್ಕಾರ ಮಾಡಿದ್ದಾರೆ. ಈ ವಿದ್ಯಾರ್ಥಿಗಳು  ರಮೇಶ ಬಿ.ಟಿ ಇವರ ಮಾರ್ಗದರ್ಶನದಲ್ಲಿ ಕಂಡುಹಿಡಿದಿದ್ದಾರೆ.
ಕಂಪ್ಯೂಟರ್ ಸಾಯಿನ್ಸ್ ವಿಭಾಗದ ವಿದ್ಯಾರ್ಥಿಗಳಾದ ಕು. ಶ್ರೀಸಿವಾಸಪ್ರಸಾದ, ಐಶ್ವರ್ಯಾ, ಚಿನ್ಮಯಾ, ಹರ್ಷಿತಾ ಈ ವಿದ್ಯಾರ್ಥಿಗಳು ಇನ್ಸ್ಟಾಕೇರ್-ರಕ್ತದ ಲಭ್ಯತೆ, ಡಾಕ್ಟರ್‌ರ ಬಗ್ಗೆ ಮಾಹಿತಿ, ಮೇಡಿಸಿಯನ್‌ಗಳ ಬಗ್ಗೆ ಮಾಹಿತಿಯನ್ನು ಕೊಡುವ ಮೋಬೈಲ್ -ಆಂಡ್ರ್ಡಾಯ್ಡ ಆಪ್ ವನ್ನು ಕಂಡು ಹಿಡಿದಿದ್ದಾರೆ. ಈ ವಿದ್ಯಾರ್ಥಿಗಳು  ಶೀನಿವಾಸ್ ಬಿ ಆರ್ ಇವರ ಮಾರ್ಗದರ್ಶನದಲ್ಲಿ ಕಂಡುಹಿಡಿದಿದ್ದಾರೆ.
ಮೇಲಿನ ಎಲ್ಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟದ ‘ಕರ್ನಾಟಕ ರಾಜ್ಯ ವಿಜ್ಞಾನ & ತಂತ್ರಜ್ಞಾನ ಮಂಡಳಿ’ಯ-೨೦೧೮ ರ ಪ್ರಾಜೆಕ್ಟ್ ಪ್ರದರ್ಶನಕ್ಕೆ ಆಯ್ಕೆಯಾಗಿದ್ದಾರೆ, ಈ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಟಿ ಎಸ್, ಆಡಳಿತ ಮಂಡಳಿಯವರು, ವಿಭಾಗ ಮುಖ್ಯಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 

Be the first to comment on "ಜೈನ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಪ್ರೋಜೆಕ್ಟ್ ರಾಜ್ಯಮಟ್ಟಕ್ಕೆ ಆಯ್ಕೆ"

Leave a comment

Your email address will not be published.


*