ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಸರ್ ಎಂವಿ

Share
  • 193
    Shares

ದಾವಣಗೆರೆ-2018ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ)ಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ನಚಿಕೇತ್ ಜಿ ಕಲ್ಲಾಪುರ್ ೧೦೧ನೇ ರ್‍ಯಾಂಕ್ ಪಡೆದು ಜಿಲ್ಲೆಯಲ್ಲಿ ಪ್ರಥಮ ಸ್ಥಾನಗಳಿಸಿ ಸರ್ ಎಂ ವಿ ಪದವಿ ಪೂರ್ವ ಕಾಲೇಜಿನ ಕೀರ್ತಿ ಹೆಚ್ಚಿಸಿರುತ್ತಾನೆ.

ಹೃತಿಕ್ ಪಾಟೀಲ್ ವೆಟರ್ನರಿ ವಿಭಾಗದಲ್ಲಿ ೩೨ನೇ ರ್‍ಯಾಂಕ್, ಬಿ.ಎಸ್ಸಿ. (ಅಗ್ರಿ) ವಿಭಾಗದಲ್ಲಿ ೫೬ನೇ ರ್‍ಯಾಂಕ್, ಡಿ.ಫಾರ್‍ಮನಲ್ಲಿ ೮೮ನೇ ರ್‍ಯಾಂಕ್ ಹಾಗೂ ಬಿ.ಫಾರ್‍ಮನಲ್ಲಿ ೮೮ನೇ ರ್‍ಯಾಂಕ್ ಪಡೆದಿರುತ್ತಾನೆ.

ಕಾಲೇಜಿಗೆ ೧೦೦ರೊಳಗೆ ೧೫ ರ್‍ಯಾಂಕ್‌ಗಳು, ೫೦೦ರೊಳಗೆ ೭೫ ರ್‍ಯಾಂಕ್‌ಗಳು, ೧೦೦೦ದೊಳಗೆ ೧೬೦ ರ್‍ಯಾಂಕ್‌ಗಳು, ೨೦೦೦ದೊಳಗೆ ೩೨೭ ರ್‍ಯಾಂಕ್‌ಗಳು, ಮತ್ತು ೫೦೦೦ದೊಳಗೆ ೭೬೦ ರ್‍ಯಾಂಕ್‌ಗಳು ಬಂದಿದ್ದು, ವಿದ್ಯಾರ್ಥಿಗಳು ಕಾಲೇಜಿನ ಗೌರವವನ್ನು ಹೆಚ್ಚಿಸಿರುತ್ತಾರೆ.

ವಿದ್ಯಾರ್ಥಿಗಳ ಮುಂದಿನ ಭವಿಷ್ಯ ರೂಪಿಸುವ ಸಿಇಟಿ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅತ್ಯುತ್ತಮ ಹೆಚ್ಚಿನ ರ್‍ಯಾಂಕ್ ಪಡೆದಿದ್ದು ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಪ್ರೇರಣೆ ನೀಡಿರುತ್ತಾರೆ.

ವಿದ್ಯಾರ್ಥಿ / ವಿದ್ಯಾರ್ಥಿನಿಯರ ಈ ಅದ್ಭುತ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ. ಎಸ್. ಜೆ. ಶ್ರೀಧರ್, ಕಾಲೇಜಿನ ಪ್ರಾಚಾರ್ಯರಾದ ಡಾ|| ವಿ. ರಾಜೇಂದ್ರ ನಾಯ್ಡು ಹಾಗೂ ಬೋಧಕ ಬೋಧಕೇತರ ಸಿಬ್ಬಂಧಿ ವರ್ಗದವರು ಹಾರ್ಧಿಕವಾಗಿ ಅಭಿನಂದಿಸಿದ್ದಾರೆ.

Be the first to comment on "ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಸರ್ ಎಂವಿ"

Leave a comment

Your email address will not be published.


*