ಶೀಘ್ರ ಸ್ಮಾರ್ಟ್‌ಸಿಟಿ ಯೋಜನೆಯಡಿ ರಸ್ತೆ ಅಭಿವೃದ್ಧಿ-ಶಾಸಕ ಶಾಮನೂರು ಶಿವಶಂಕರಪ್ಪ

Share
  • 158
    Shares

ದಾವಣಗೆರೆ : ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಪ್ರಮುಖ ಅಂಶಗಳಾದ ರಸ್ತೆ ಅಭಿವೃದ್ಧಿ, ರಾಜಾಕಾಲುವೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡುವಂತೆ ಮಾಜಿ ಸಚಿವರು, ಹಾಲಿ ಶಾಸಕರೂ ಆದ ಡಾ|| ಶಾಮನೂರು ಶಿವಶಂಕರಪ್ಪ ಅವರು ಸೂಚಿಸಿದರು.
ಸ್ಮಾರ್ಟ್ ಸಿಟಿ ಯೋಜನೆ ಕುರಿತಂತೆ ಗೃಹ ಕಛೇರಿಯಲ್ಲಿ ನಡೆದ ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಈ ಸೂಚನೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ದಾವಣಗೆರೆ ನಗರದ ಪ್ರಮುಖ ವಾಣಿಜ್ಯ ಪ್ರದೇಶವಾದ ಮಂಡಿಪೇಟೆ, ಎಂ.ಜಿ.ರಸ್ತೆ, ಚೌಕಿಪೇಟೆ, ಚಾಮರಾಜಪೇಟೆ ರಸ್ತೆಗಳಲ್ಲಿ ಒಳಚರಂಡಿ, ಮಳೆ ನೀರು ಚರಂಡಿ, ಕುಡಿಯುವ ನೀರು ಸರಬರಾಜು, ವಿದ್ಯುತ್ ವ್ಯವಸ್ಥೆ, ಅಂಡರ್ ಗ್ರೌಂಡ್ ಕೇಬಲ್ ಒಳಗೊಂಡ ಕಾಂಕ್ರಿಟ್ ರಸ್ತೆ ಕಾಮಗಾರಿ ಹಾಗೂ ನಗರದ ಹಳೇ ಭಾಗದಲ್ಲಿರುವ ರಾಜಾಕಾಲುವೆಗಳನ್ನು ಅಭಿವೃದ್ಧಿ ಪಡಿಸಲು ಶೀಘ್ರ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಿದರು.
ಪಿ.ಬಿ.ರಸ್ತೆಯಲ್ಲಿರುವ ಹಳೇ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸಲು ಸಹ ಒಪ್ಪಿಗೆ ದೊರೆತಿರುವ ಬಗ್ಗೆ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ಹಳೇ ಬಸ್ ನಿಲ್ದಾಣವನ್ನು ತೆರವು ಮಾಡುವುದಕ್ಕಿಂತ ಮುಂಚೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್‌ಗಳ ನಿಲುಗಡೆಗೆ ಬೇರೆ ಸ್ಥಳದಲ್ಲಿ ಅವಕಾಶ ನೀಡಲು ಕ್ರಮಕೈಗೊಳ್ಳಿ ಎಂದರು.
ಅದೇ ರೀತಿ ಎಸ್‌ಪಿಎಸ್ ನಗರದ ವಿವಿಧ ರಸ್ತೆಗಳ ಅಭಿವೃದ್ದಿಗೆ ಸೂಚಿಸಿದರು.


ಜಲಸಿರಿ ಯೋಜನೆಗೂ ಶೀಘ್ರ ಚಾಲನೆ:

ದಾವಣಗೆರೆ ನಗರಕ್ಕೆ ೨೪ ಗಂಟೆ ನೀರು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆಯಾದ ಜಲಸಿರಿ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ ಇನ್ನು ೬ ತಿಂಗಳ ಒಳಗಾಗಿ ನಾಗರೀಕರಿಗೆ ೨೪ ಗಂಟೆ ನೀರು ಒದಗಿಸುವಂತೆ ಜಲಸಿರಿ ಅಧಿಕಾರಿಗಳಿಗೆ ತಿಳಿಸಿದರು.
ಶಾಸಕರ ಸೂಚನೆಗೆ ಅಧಿಕಾರಿಗಳು ಸ್ಪಂದಿಸಿ ಈ ತಿಂಗಳ ಒಳಗಾಗಿ ಸ್ಮಾರ್ಟ್‌ಸಿಟಿ ಮತ್ತು ಜಲಸಿರಿ ಯೋಜನೆಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರುಗಳಾದ ದಿನೇಶ್.ಕೆ.ಶೆಟ್ಟಿ, ಶಿವನಳ್ಳಿ ರಮೇಶ್, ಸ್ಮಾರ್ಟ್ ಸಿಟಿ ಯೋಜನೆಯ ಸೇವಾನಾಯ್ಕ, ಗುರುಪಾದಯ್ಯ, ಆರ್.ಎನ್.ಶ್ರೀನಾಥ್ ರೆಡ್ಡಿ, ಶಿವರಾಜ್, ಚಂದ್ರಶೇಖರ್, ಜಲಸಿರಿ ಯೋಜನೆಯ ಆರ್.ಸಿ.ಮೋಹನ್, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Be the first to comment on "ಶೀಘ್ರ ಸ್ಮಾರ್ಟ್‌ಸಿಟಿ ಯೋಜನೆಯಡಿ ರಸ್ತೆ ಅಭಿವೃದ್ಧಿ-ಶಾಸಕ ಶಾಮನೂರು ಶಿವಶಂಕರಪ್ಪ"

Leave a comment

Your email address will not be published.


*