ನಾಗರೀಕರಿಗೆ ವಾರಕ್ಕೆರಡು ದಿನ ನೀರು ಪೂರೈಸುವಂತೆ ಶಾಸಕರ ಸೂಚನೆ

Share
  • 176
    Shares

ದಾವಣಗೆರೆ : ದಾವಣಗೆರೆ ಜನತೆಗೆ ಕುಡಿವ ನೀರನ್ನು ಸಮರ್ಪಕವಾಗಿ ನೀರು ಪೂರೈಸುವ ಉದ್ದೇಶದಿಂದ ಹಾಲಿ ಇರುವ ೩೦ ಓವರ್ ಹೆಡ್ ಟ್ಯಾಂಕ್‌ಗಳಲ್ಲಿ ಶೇಖರಣೆ ಮಾಡಿ ಪ್ರಥಮ ಹಂತವಾಗಿ ವಾರಕ್ಕೇರಡು ದಿನ ನೀರು ಪೂರೈಸುವಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶುಕ್ರವಾರ ತಮ್ಮ ಗೃಹಕಛೇರಿಯಲ್ಲಿ ಮಹಾನಗರ ಪಾಲಿಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದ ಶಾಸಕರು ಮಳೆಗಾಲದಲ್ಲೂ ನೀರಿನ ಸಮಸ್ಯೆ ಉಂಟಾಗ ದಂತೆ ಎಚ್ಚರಿಕೆ ವಹಿಸಿ ಎಂದು ನೀರು ಸರಬರಾಜು ಶಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿದ್ದು, ಜುಲೈ ತಿಂಗಳಲ್ಲೇ ಜಲಾಶಯ ಭರ್ತಿಯಾಗುವ ಮುನ್ಸೂಚನೆ ಇರುವುದರಿಂದ ಕಾಡಾ ಸಮಿತಿಯ ಅಧಿಕಾರಿಗಳಿಗೆ ಒತ್ತಡ ಹಾಕಿ ಕಾಲುವೆಗೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾಲುವೆಗೆ ನೀರು ಬಂದ ನಂತರ ಕುಂದವಾಡ ಕೆರೆ ಮತ್ತು ಟಿ.ವಿ. ಸ್ಟೇಷನ್ ಕೆರೆಗಳಿಗೆ ನೀರು ತುಂಬಿಸಿಕೊಳ್ಳುವುದರ ಜೊತೆಗೆ ತುಂಗಭದ್ರಾ ನದಿಯ ಹರಿವು ಪ್ರಮಾಣವೂ ಸಹ ಹೆಚ್ಚಿರುವುದರಿಂದ ರಾಜನಹಳ್ಳಿ ಬಳಿ ಇರುವ ನೀರು ಸರಬರಾಜು ಕೇಂದ್ರದಿಂದ ತುಂಗಭದ್ರಾ ನದಿ ನೀರನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು.
ಈಗ ಕುಂದವಾಡ ಕೆರೆ ಮತ್ತು ಟಿ.ವಿ. ಸ್ಟೇಷನ್ ಕೆರೆಗಳಲ್ಲಿ ಇರುವ ನೀರನ್ನು ದಾವಣಗೆರೆ ನಗರದ ಜನತೆಗೆ ಕನಿಷ್ಠ ವಾರಕ್ಕೇರಡು ದಿನ ಮೊದಲ ಹಂತವಾಗಿ ನೀರು ಪೂರೈಸಿ ನಂತರ ದಿನಗಳಲ್ಲಿ ೨ ದಿನಕ್ಕೊಮ್ಮೆ ಜಲಸಿರಿ ಯೋಜನೆ ಅನುಷ್ಠಾನ ಆಗುವುದರೊಳಗೆ ದಿನಕ್ಕೊಮ್ಮೆ ನೀರು ಪೂರೈಸುವಂತೆ ಶಾಸಕರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಈಗ ಕುಂದವಾಡ ಕೆರೆಯಲ್ಲಿ ೧.೨ ಮೀಟರ್ ಹಾಗೂ ಟಿ.ವಿ. ಸ್ಟೇಷನ್ ಕೆರೆಯಲ್ಲಿ ೫.೫೦ ಮೀಟರ್ ಅಡಿಯಷ್ಟು ನೀರು ಸಂಗ್ರಹಣೆ ಇದ್ದು, ೨ ದಿನಕ್ಕೊಮ್ಮೆ ನೀರು ಪೂರೈಸಿದರೆ ೪೦ ದಿನಗಳ ಕಾಲ ನೀರು ಪೂರೈಸಬಹುದಾಗಿದ್ದು, ಮುಂದಿನ ದಿನಗಳಲ್ಲೂ ಸಹ ನೀರಿನ ಸಮಸ್ಯೆ ಉಂಟಾಗದಂತೆಯೂ ಸಹ ಅಧಿಕಾರಿಗಳು ಗಮನ ಹರಿಸುವಂತೆ ತಿಳಿಸಿದರು.
ಇದೀಗ ದಾವಣಗೆರೆ ನಗg ದಲ್ಲಿ ೩೧ ಓವರ್ ಹೆಡ್ ಟ್ಯಾಂಕ್ ಗಳಿದ್ದು, ೩೦ ಟ್ಯಾಂಕ್ ಗಳು ಕಾರ್‍ಯನಿರ್ವಹಿಸುತ್ತಿವೆ. ಜಲಸಿರಿ ಯೋಜನೆಯಲ್ಲಿ ೧೯ ಟ್ಯಾಂಕ್ ಗಳು ನಿರ್ಮಾಣವಾ ಗಲಿದ್ದು, ಒಟ್ಟು ೫೦ ಟ್ಯಾಂಕ್‌ಗಳಲ್ಲಿ ನೀರು ಶೇಖರಣೆ ಮಾಡಿ ನಂತರದ ದಿನಗಳಲ್ಲಿ ೨೪ ಗಂಟೆ ನೀರು ಕೊಡಲಾಗುವುದು ಎಂದರು.
ಸಭೆಯಲ್ಲಿ ಮಹಾಪೌರರಾದ ಶ್ರೀಮತಿ ಶೋಭಾ ಪಲ್ಲಾಗಟ್ಟೆ, ಉಪ ಮಹಾಪೌರರಾದ ಕೆ.ಚಮನ್ ಸಾಬ್, ಮಹಾನಗರ ಪಾಲಿಕೆ ಆಯುಕ್ತರಾದ ಮಂಜುನಾಥ್ ಆರ್.ಬಳ್ಳಾರಿ, ಸದಸ್ಯರುಗಳಾದ ದಿನೇಶ್ ಕೆ.ಶೆಟ್ಟಿ, ಎಂ.ಹಾಲೇಶ್, ಎಲ್.ಎಂ.ಹನುಮಂತಪ್ಪ, ಉಮೇಶ್, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಸಹಾಯಕ ಕಾರ್‍ಯಪಾಲಕ ಅಭಿಯಂತರ ಕೆ.ಎಂ.ಮಂಜು ನಾಥ್ ಮತ್ತಿತರರಿದ್ದರು.

Be the first to comment on "ನಾಗರೀಕರಿಗೆ ವಾರಕ್ಕೆರಡು ದಿನ ನೀರು ಪೂರೈಸುವಂತೆ ಶಾಸಕರ ಸೂಚನೆ"

Leave a comment

Your email address will not be published.


*