ಲಿಡ್‌ಕರ್‌ನಿಂದ ವಿವಿಧ ಉಪಕರಣಗಳ ವಿತರಣೆ

Share
  • 34
    Shares

ದಾವಣಗೆರೆ- ನಗರದ ಸಮಗಾರ ಸಮಾಜದ ಭವನದಲ್ಲಿ ಡಾ|| ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ತರಬೇತಿ ಪಡೆದ ಸಮಗಾರ ಸಮಾಜದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಮತ್ತು ವಿವಿಧ ಉಪಕರಣಗಳನ್ನು ವಿತರಿಸಿ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಮಾತನಾಡಿದರು.
ಸಮಗಾರ ಸಮಾಜದವರು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವನ್ನು ಪರಿಪಾಲಿಸುತ್ತಾ ಕಾಯಕ ಜೀವಿಗಳಾಗಿದ್ದಾರೆ. ಸಮಾಜದವರು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಅವರು ಕರೆನೀಡಿ ಲಿಡ್‌ಕರ್ ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಶಿಕ್ಷಣವಂತರಾಗಿ ಎಂದು ತಿಳಿಸಿದರು.
ಸರ್ವರಿಗೂ ಸೂರು ಪರಿಕಲ್ಪನೆಯಡಿ ಆಶ್ರಯ ಯೋಜನೆಯಡಿ ಜಮೀನು ಖರೀದಿಸುವ ಪ್ರಯತ್ನ ಮುಂದುವರೆದಿದ್ದು, ಅರ್ಹ ಬಡವರಿಗೆ ನಿವೇಶನ ಒದಗಿಸಲಾಗುವುದು. ಆ ವೇಳೆ ಸಮಗಾರ ಸಮಾಜದ ನಿವೇಶನ ಇಲ್ಲದವರಿಗೆ ಸೂರು ಕಲ್ಪಿಸಲಾಗುವುದು ಎಂದರು.
ಕಾರ್‍ಯಕ್ರಮದ ಸಾನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತಮಠ- ಶಿವಯೋಗಾಶ್ರಮದ ಶ್ರೀ ಬಸವಪ್ರಭು ಸ್ವಾಮಿಗಳವರು ಆಶೀರ್ವಚನ ನೀಡುತ್ತಾ ಸಮಗಾರ ಸಮಾಜ ಕಾಯಕಕ್ಕೆ ಪ್ರಸಿದ್ಧ. ಬಸವಣ್ಣನವರು ಕಟ್ಟಿದ ಲಿಂಗಾಯಿತ ಧರ್ಮಕ್ಕೆ ಸಮಗಾರ ಹರಳಯ್ಯನವರಂತ ತ್ಯಾಗವೂ ಇದೆ ಎಂದು ತಿಳಿಸಿ ಕಾಯಕ ತತ್ವವನ್ನು ಅಳವಡಿಸಿಕೊಂಡಿರುವ ಸಮಗಾರ ಸಮಾಜದವರು ಸ್ವಾತಂತ್ರ್ಯ ನಂತರವೂ ಸಾಮಾಜಿಕ ನ್ಯಾಯ ಪಡೆಯುವಲ್ಲಿ ವಿಫಲವಾಗಿದ್ದು, ಮೊದಲು ಸಂಘಟನೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದು ಕರೆ ನೀಡಿದರು.
ಶಾಮನೂರು ಶಿವಶಂಕರಪ್ಪನವರು ಬಸವಣ್ಣನವರು ಹೇಳಿದಂತೆ ಕಾಯಕ ತತ್ವವನ್ನು ಪರಿಪಾಲಿಸುತ್ತಾ ಬಂದಿದ್ದಾರೆ. ಅವರ ಸೇವೆ ಅವಿಸ್ಮರಣೀ ಯವಾದುದು. ಯುವಕರು ಶಾಮನೂರು ಶಿವಶಂಕರಪ್ಪ ಆದರ್ಶ ದಾರಿದೀಪವಾಗಲಿ ಎಂದು ಆಶಿಸಿದರು. ಮಹಾನಗರ ಪಾಲಿಕೆ ಸದಸ್ಯ ದಿನೇಶ್ ಕೆ.ಶೆಟ್ಟಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಲಿಡ್‌ಕರ್‌ನ ಜಯರಾಂ, ಸಮಗಾರ ಸಮಾಜದ ಶಿವಾನಂದ ಮಬ್ರುಂಕರ್, ಮಾರ್ಕಂಡೇಯ್ಯ ದೊಡ್ಡಮನೆ, ಫಕ್ಕೀರಪ್ಪ ಬೆಟಗೇರಿ, ಶಿವಾಜಿ ತೇರದಾಳ್, ರಾಜಶೇಖರ್ ತೆಲಗಾವಿ, ಪರಮೇಶ್ ಉಳ್ಳಿಕಾಯಿ, ಸುರೇಶ್ ಹುಳ್ಳಿಕಾಶೀ, ದವಲಪ್ಪ ಸಾಥಪತಿ, ಜಗದೀಶ್ ಮಾನೆ, ಶ್ರೀನಿವಾಸ ಕದಂ, ಉಮೇಶ್ ತೇರದಾಳ್ ಮತ್ತಿತತರರು ಉಪಸ್ಥಿತರಿದ್ದರು.

Be the first to comment on "ಲಿಡ್‌ಕರ್‌ನಿಂದ ವಿವಿಧ ಉಪಕರಣಗಳ ವಿತರಣೆ"

Leave a comment

Your email address will not be published.


*