ದಾವಣಗೆರೆಯಲ್ಲಿ ಬಡ ಮಕ್ಕಳ ನೆರವಿಗಾಗಿ ಮಕ್ಕಳ ಆಟದ ಮನೆ ನಿರ್ಮಾಣ

Share
  • 74
    Shares

ದಾವಣಗೆರೆ– ರಾಜ್ಯದಲ್ಲೇ ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಬಡ ಮಕ್ಕಳ ನೆರವಿಗಾಗಿ ಮಕ್ಕಳ ಆಟದ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಜಿ ಸಚಿವೆ ಹಾಗೂ ವನಿತಾ ಸಮಾಜದ ಸಂಸ್ಥಾಪಕರಾದ ನಾಗಮ್ಮ ಕೇಶವಮೂರ್ತಿ ಹೇಳಿದರು.

ವನಿತಾ ಸಮಾಜದಲ್ಲಿಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಾಲ್ಯದ ಆಟಗಳ ಮಹತ್ವವನ್ನು ಅರಿತಿರುವ ನಮ್ಮ ವನಿತಾ ಸಮಾಜ ಮಕ್ಕಳಿಗೆ ಆಟವಾಡುವ ಅವಕಾಶವನ್ನು ಕಲ್ಪಿಸುತ್ತಿದೆ.ಅನೇಕ ಬಡ ಕುಟುಂಬದ ಮಕ್ಕಳು ಆಟದ ಸಾಮಾನುಗಳನ್ನೇ ಕಂಡಿಲ್ಲ. ಮಕ್ಕಳ ಸರ್ವಾಂಗಿಣ ಬೆಳವಣಿಗೆಯಲ್ಲಿ ಆಟದ ಮತ್ತು ಆಟಿಕೆಗಳ ಪಾತ್ರ ಅನನ್ಯ. ಅದಕ್ಕಾಗಿಯೇ ಮುಂದುವರೆದ ದೇಶಗಳಲ್ಲಿ ಪುಸ್ತಕಗಳ ಗ್ರಂಥಾಲಯದಂತೆ ಆಟಿಕೆಗಳ ಸಂಗ್ರಹಾಲಯವನ್ನೇ ಆರಂಭಿಸಿ ಅವರು ಸದಾ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಿದ್ದಾರೆ. ನಮ್ಮ ದಾವಣಗೆರೆಯಲ್ಲೂ ಸಹ ಬಡ ಮಕ್ಕಳ ನೆರವಿಗಾಗಿ ಹಾಗೂ ಅವರು ಸಹ ಎಲ್ಲರಂತೆ ಮನ ಪೂರ್ವಕವಾಗಿ ಆಟವಾಡಲಿ ಎಂಬ ಉದ್ದೇಶದಿಂದ ಮಕ್ಕಳ ಆಟದ ಮನೆ ಪ್ರಾರಂಭಿಸುತ್ತಿದ್ದೇವೆ. ವನಿತಾ ಸಮಾಜದ ಆವರಣದಲ್ಲಿಯೇ ಎರಡು ಕೊಠಡಿಗಳನ್ನು ತೆರವುಗೊಳಿಸಿ ಮಕ್ಕಳಿಗೆಂದೇ ಆಟದ ಮನೆಯ ಕನಸನ್ನು ಸಾಕಾರಗೊಳಿಸುವ ಉದ್ದೇಶ ಹೊಂದಿದ್ದೇನೆ. ಈಗಾಗಲೇ ಸಿದ್ದತೆಗಳು ನಡೆದಿದ್ದು, ಜೂನ್ ಕೊನೆಯ ವಾರದಲ್ಲಿ ಮಕ್ಕಳಿಗೆ ಅರ್ಪಣೆ ಮಾಡಲಾಗುವುದು. ನನ್ನ ಕನಸು ಸಾಕಾರಗೊಳ್ಳಲು ಈಗಾಗಲೇ ದಾನಿಗಳು ಒಂದಿಷ್ಟು ಆಟಿಕೆ ಸಾಮಾನುಗಳನ್ನು ಖರೀದಿಸಿ ನೀಡಿದ್ದಾರೆ. ಸಾರ್ವಜನಿಕರು ಸಹ ನಮ್ಮ ಮಕ್ಕಳ ಆಟದ ಮನೆಗೆ ತಮ್ಮ ಕೈಲಾದ ಸಹಾಯ ಮಾಡಬಹುದು. ತಮ್ಮ ಮನೆಯಲ್ಲಿರುವ ಗುಣಮಟ್ಟದ ಆಟಿಕೆಗಳನ್ನು ವನಿತಾ ಸಮಾಜದಲ್ಲಿ ತಂದು ನೀಡಬಹುದು. ಜೂನ್ 10 ರೊಳಗಾಗಿ ಆಸಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ನಮ್ಮ ಮಕ್ಕಳ ಆಟದ ಮನೆಯಲ್ಲಿ ಪ್ರತಿ ಭಾನುವಾರ ಸಂಜೆ 4-30 ರಿಂದ 6-30 ರವರೆಗೆ ಬಡ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಯಾವುದೇ ಅನುದಾನದ ನೆರವಿಲ್ಲದೆ. ನಾವೇ ಸಂಗ್ರಹಿಸಿ ನಾವೇ ಪ್ರಾರಂಭಿಸುತ್ತಿದ್ದೇವೆ. ಅದಕ್ಕೆ ಪ್ರತಿಯೊಬ್ಬರ ಸಹಕಾರವಿರಲಿ ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಂಜುಳಾ ಬಸವಲಿಂಗಪ್ಪ, ಶಾರದಾ ಮಾಗನಹಳ್ಳಿ, ರಾಜೇಶ್ವರಿ ಆಲೂರು, ಶಿಖಾ ಪಾಟೀಲ್, ಭಾರತಿ ವೀರೇಶ್ ಇದ್ದರು.

Be the first to comment on " ದಾವಣಗೆರೆಯಲ್ಲಿ ಬಡ ಮಕ್ಕಳ ನೆರವಿಗಾಗಿ ಮಕ್ಕಳ ಆಟದ ಮನೆ ನಿರ್ಮಾಣ"

Leave a comment

Your email address will not be published.


*