ಮಾತೊಂದ ಹೇಳತೀನಿ… : ಶ್ರೀರಾಮುಲು ನಡೆ ಇತರರಿಗೂ ಪ್ರೇರಣೆಯಾಗಲಿ

Share
  • 62
    Shares

ಸಂಪಾದಕೀಯ

ಮೊಳಕಾಲ್ಮೂರು ಕ್ಷೇತ್ರದ ನೂತನ ಶಾಸಕನಾಗಿರುವ ಬಿ.ಶ್ರೀರಾಮುಲು ‘ಗ್ರಾಮವಾಸ್ತವ್ಯ’ ಮೂಲಕ ತಮ್ಮ ವ್ಯಾಪ್ತಿಯಲ್ಲಿ ಹೊಸಹೆಜ್ಜೆಯನ್ನಿಟ್ಟಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಹೆಚ್.ಡಿ.ಕುಮಾರಸ್ವಾಮಿ ಇಂತಹ ಪ್ರಯತ್ನದಿಂದ ಸುದ್ದಿಗೆ ಗ್ರಾಸವಾಗಿದ್ದರು. ಈಗ ಮಾಜಿ ಆಗಿರುವ ಸಚಿವ ಎಚ್.ಆಂಜನೇಯ ಕೂಡ ಅಲೆಮಾರಿ, ಗುಡ್ಡಗಳು ಪ್ರದೇಶದಲ್ಲಿ ವಾಸವಿದ್ದವರೊಂದಿಗೆ ಗ್ರಾಮವಾಸ್ತವ್ಯ ಮಾಡಿದ್ದುಂಟು. ಒಬ್ಬ ಜನಪ್ರತಿನಿಧಿ ಇಂತಹ ಕ್ರಮಗಳನ್ನು ಅನುಸರಿಸುವುದರಿಂದ ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಹತ್ತಿರದಿಂದ ಕೇಳಿ ತಿಳಿದುಕೊಳ್ಳುವ ಅವಕಾಶ ಇಂತಹ ವಾಸ್ತವ್ಯ ಗಳಿಂದ ದೊರಕುತ್ತದೆ. ಕ್ಷೇತ್ರವ್ಯಾಪ್ತಿಯ ಸರ್ಕಾರಿ ಪ್ರಮುಖ ಅಧಿಕಾರಿಗಳು ಇಂತಹ ಸಂದರ್ಭದಲ್ಲಿ ಹಾಜರರಿರುವಂತಹ ಏರ್ಪಾಡು ಆಗಬೇಕು. ಗ್ರಾಮವಾಸ್ತವ್ಯ “ಪ್ರಚಾರದ ಸರಕು” ಎಂಬ ಆರೋಪದಿಂದ ಮುಕ್ತವಾಗಬೇಕು. ಜನಪ್ರತಿನಿಧಿ ತನ್ನ ಕ್ಷೇತ್ರ ವ್ಯಾಪ್ತಿಯ ಜನತೆಯ ಆಶೋತ್ತರಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವಂತಾಗಬೇಕು. ಇಂತಹ ವಾಸ್ತವ್ಯ ಕನಿಷ್ಟ ತಿಂಗಳಿಗೊಮ್ಮೆಯಂತೆ ಬೇರೆ ಬೇರೆ ಗ್ರಾಮಗಳಲ್ಲಿ ನಡೆಯುವ ಅವಶ್ಯಕತೆ ಖಂಡಿತಾ ಇದೆ.
ಜಯಶಾಲಿಯಾದ ನಂತರ ಕಾರ್ಯಕ್ರಮಗಳ ಅತಿಥಿಯಾಗುವ ಪಟ್ಟಿಯಿಂದ ಜನಪ್ರತಿನಿಧಿಗಳು ದೂರವಿರಬೇaಕು. ಮತಹಾಕಿದ ಎಲ್ಲರಿಗೂ ಆತ ಲಭ್ಯವಾಗುವುದರೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಸಮರೋಪಾದಿಯ ಕೆಲಸಗಳನ್ನು ಹಮ್ಮಿಕೊಳ್ಳುವಂತಾಗಬೇಕು. ಇದನ್ನು ಮತ್ತ್ಯಾರೋ ಒತ್ತಾಯಿಸುವ ಅಗತ್ಯವಿಲ್ಲ ಪ್ರತಿನಿಧಿಗಳೇ ಸ್ವಯಂ ಪ್ರೇರಣೆಯೊಂದಿಗೆ ಕಾರ್‍ಯಪ್ರವೃತ್ತರಾಗಿ “ನಿಜವಾದ ಜನಸೇವೆ” ಎಂಬುದನ್ನು ಸಾಬೀತುಪಡಿಸಬೇಕು. ಪ್ರತಿಯೊಬ್ಬರು ಇಲ್ಲವೇ ಹೆಚ್ಚಿನ ಸಂಖ್ಯೆಯ ಪ್ರತಿನಿಧಿಗಳು ಈ ರೀತಿಯಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸಿದರೆ ಮುಖ್ಯಮಂತ್ರಿಯವರು ರಾಜಧಾನಿಯಲ್ಲಿ ಜನತಾದರ್ಶನ ಮಾಡುವ ಪ್ರಮೇಯವೇ ಬೇಕೆನಿಸುವುದಿಲ್ಲ. ಗ್ರಾಮವಾಸ್ತವ್ಯ ಎಲ್ಲಾ ಪ್ರಜಾಪ್ರತಿನಿಧಿಗಳ ಕರ್ತವ್ಯದ ಪ್ರಧಾನ ಗುರಿ ಆದಾಗ ಪ್ರಗತಿಯ ನಾಗಾಲೋಟವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ.         

                                            

                   –  ವಿ.ಹನುಮಂತಪ್ಪ

Be the first to comment on "ಮಾತೊಂದ ಹೇಳತೀನಿ… : ಶ್ರೀರಾಮುಲು ನಡೆ ಇತರರಿಗೂ ಪ್ರೇರಣೆಯಾಗಲಿ"

Leave a comment

Your email address will not be published.


*