22 ಕೆರೆಗಳಿಗೆ ನೀರು ತುಂಬಿಸುವಲ್ಲಿ ಸಂಪೂರ್ಣ ಅಸಡ್ಡೆ : ತರಳಬಾಳು ಶ್ರೀಗಳ ಅಸಮಾಧಾನ

Share
  • 138
    Shares

ತುಂಗಭದ್ರಾ ನದಿಯಿಂದ ೨೨ ಕೆರೆಗಳಿಗೆ ನೀರು ತುಂಬಿಸುವ ಜಾಕ್‌ವೆಲ್ ಬಳಿ ನದಿ ನೀರು ಪಂಪ್ ಮಾಡುವ ಸ್ಥಳವನ್ನು ತರಳಬಾಳು ಶ್ರೀಗಳು ವೀಕ್ಷಿಸಿದರು.

ದಾವಣಗೆರೆ-ಜನಪ್ರತಿನಿಧಿಗಳಿಗೆ ಇರುವ ಅಧಿಕಾರ ನನಗಿದ್ದರೆ ಈ ಕ್ಷಣವೇ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡುತ್ತಿದ್ದೆ ಎಂದು ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಮೂರ್ತಿ ಸ್ವಾಮೀಜಿ ಶಾಸಕರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಹರಿಹರ ತಾಲೂಕಿನ ರಾಜನಹಳ್ಳಿ ಜಾಕ್‌ವೆಲ್‌ಗೆ ಶಾಸಕರಾದ ಎಸ್.ಎ.ರವೀಂದ್ರನಾಥ್,ಎಸ್.ವಿ.ರಾಮಚಂದ್ರ ಹಾಗೂ ಪ್ರೊ.ಲಿಂಗಣ್ಣ ಅವರೊಂದಿಗೆ ಭೇಟಿ ನೀಡಿದ ಶ್ರೀಗಳು ವೃಥಾ ವ್ಯರ್ಥವಾಗಿ ಹರಿಯುತ್ತಿರುವ ನೀರನ್ನು ಕಂಡು ಅದನ್ನು ಸೂಕ್ತ ಬಳಕೆ ಮಾಡುವಲ್ಲಿ ವಿಫಲವಾದ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು,


ಕಾಮಗಾರಿ ಕಳಪೆ ಮಾಡಿರುವ ನೀರಾವರಿ ಹಾಗೂ ಎಲ್‌ಅಂಡ್‌ಟಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶ್ರೀಗಳು, ಕಳೆದ ೨೦ ದಿನಗಳಿಂದ ತುಂಗಭದ್ರಾ ನದಿಯಲ್ಲಿ ಹೆಚ್ಚಿನ ನೀರು ಹರಿಯುತ್ತಿದ್ದರೂ ಈ ಸಂದರ್ಭ ೨೨ ಕೆರೆಗಳ ನೀರು ತುಂಬಿಸಿಕೊಳ್ಳುವಲ್ಲಿ ಅಧಿಕಾರಿಗಳು ಸಂಪೂರ್ಣ ಅಸಡ್ಡೆ ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ ಅಂಡ್ ಟಿ ಕಂಪನಿಯವರು ಈ ಕಾಮಗಾರಿ ನಿರ್ವಹಿಸುತ್ತಿದ್ದು, ಅದರೂ ನಿರ್ಲಕ್ಷ್ಯ ವಹಿಸಿರುವುದನ್ನು ಸ್ವಾಮೀಜಿ ಪ್ರಶ್ನಿಸಿದರು. ಆದರೆ, ಇದಕ್ಕೆ ಅಧಿಕಾರಿಗಳು ಮೌನಕ್ಕೆ ಶರಣಾದರು. ಇದರಿಂದ ಬೇಸತ್ತ ಶ್ರೀಗಳು, ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಸ್ಥಳದಲ್ಲಿದ್ದ ಜನಪ್ರತಿನಿಧಿಗಳಿಗೆ ನಿಮ್ಮಂತೆ ಅಧಿಕಾರವಿದ್ದರೆ ಈ ಕೂಡಲೇ ಅಧಿಕಾರಿಗಳನ್ನು ಅಮಾನತು ಮಾಡಿ ಬಿಡುತ್ತಿದ್ದೆ ಎಂದರು.
ಈ ಸಂದರ್ಭದಲ್ಲಿ ೨೨ ಕೆರೆಗಳ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಾ.ಮಂಜುನಾಥಗೌಡ,ಚಂದ್ರನಾಯ್ಕ ಇದ್ದರು.

Be the first to comment on "22 ಕೆರೆಗಳಿಗೆ ನೀರು ತುಂಬಿಸುವಲ್ಲಿ ಸಂಪೂರ್ಣ ಅಸಡ್ಡೆ : ತರಳಬಾಳು ಶ್ರೀಗಳ ಅಸಮಾಧಾನ"

Leave a comment

Your email address will not be published.


*