ನಿತ್ಯ ಯೋಗಾಭ್ಯಾಸದಿಂದ ವ್ಯಕ್ತಿತ್ವ ವಿಕಸನ ಹೊಂದುತ್ತದೆ : ವಚನಾನಂದ ಶ್ರೀ

Share
  • 55
    Shares

ದಾವಣಗೆರೆ – ನಿತ್ಯ ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಯೋಗಾಯೋಗವಾಗಿ ವ್ಯಕ್ತಿತ್ವ ವಿಕಸನ ಹೊಂದಲು ಸಹಕಾರಿಯಾಗುತ್ತದೆ ಎಂದು ಶ್ವಾಸಗುರು ಶ್ರಿ ವಚನಾನಂದ ಸ್ವಾಮೀಜಿ ಹೇಳಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಇಂದು ಬುಧವಾರ ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ, ತಪೋವನ ಮೆಡಿಕಲ್ ಕಾಲೇಜ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್, ಪದವಿಪೂರ್ವ ಶಿಕ್ಷಣ ಇಲಾಖೆ, ಪತಂಜಲಿ ಯೋಗ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಯೋಗ ಒಕ್ಕೂಟದಿಂದ ೪ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಾನವ ಸರಪಳಿ ನಿರ್ಮಿಸಿ ಯೋಗದ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಯೋಗಾಸ್ತಕರಿಗೆ ಯೋಗಾಸನಗಳ ಬಗ್ಗೆ ತಿಳಿಸಿಕೊಡುತ್ತಾ ಮಾತನಾಡಿದರು.
ಪ್ರತಿನಿತ್ಯದ ಯೋಗಭ್ಯಾಸದಿಂದ ದೇಹಕ್ಕೆ ಶಕ್ತಿ ಬರುತ್ತದೆ, ವ್ಯಕ್ತಿತ್ವ ವಿಕಸನ ಹೊಂದುತ್ತದೆ. ಮುಖದಲ್ಲಿ ಕಾಂತಿ ಹೊಮ್ಮುತ್ತದೆ. ಸರಿಯಾಗಿ ಉಸಿರಾಡುವುದು ಹಾಗೂ ವಿವಿಧ ಬಗೆಯ ಯೋಗಾಸನ ಮಾಡುವುದರಿಂದ ಯಾವುದೇ ರೀತಿಯ ಕಾಯಿಲೆಗಳು ನಮ್ಮಲ್ಲಿ ಸುಳಿಯವುದಿಲ್ಲ ಎಂದರು.
ಅಲೋಪತಿ, ಹೊಮಿಯೋಪಥಿ ಕೆಳಗಿನ ಕೋರ್ಟ್. ಆಯುರ್ವೇದ ಹೈ ಕೋರ್ಟ್, ಯೋಗ ಸುಪ್ರೀಂ ಕೋರ್ಟ್ ಇದ್ದ ಹಾಗೆ. ಆದ್ದರಿಂದ ನಿತ್ಯವೂ ಯೋಗಾಸನ ಮಾಡಿ, ಆರೋಗ್ಯವಂತರಾಗಿರಬೇಕು ಹಾಗೆಯೇ ಪ್ರತಿಯೊಬ್ಬರು ೯೦ ಬಿಡಿ, ಗ್ರೀನ್ ಟೀ ಕುಡಿಯಿರಿ. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ಉಗುಳಿ ಉಗುಳಿ ರೋಗ ಬಂತು. ಹಾಡಿ ಹಾಡಿ ರಾಗ ಬಂತು ಎನ್ನುವ ಹಾಗೆ ಪ್ರತಿಯೊಬ್ಬರು ಲಾಲಾರಸವನ್ನು ಎಲ್ಲೆಂದರಲ್ಲಿ ಉಗುಳುತ್ತಿದ್ದಾರೆ. ಈ ಲಾಲಾ ರಸದಲ್ಲಿ ೧ ಲಕ್ಷ ಜೀವರಾಶಿಗಳು ಇರುತ್ತವೆ. ಈ ಕಾರಣಕ್ಕಾಗಿಯೇ ಪ್ರಾಣಿಗಳು ಗಾಯದ ಮೇಲೆ ನೆಕ್ಕುತ್ತಲೇ ಇರುತ್ತಿದ್ದು, ಗಾಯ ಬೇಗ ಮಾಯವಾಗುತ್ತದೆ. ಆದ್ದರಿಂದ ಯಾರು ಕೂಡ ಉಗುಳಬೇಡಿ ಎಂದು ಸಲಹೆ ನೀಡಿದರು.
ಬಸ್ತ್ರಿಕ ಪ್ರಾಣಾಯಾಮ:
ಯೋಗ ಜಾಗೃತಿ ಜಾಥಾವನ್ನು ಉದ್ಘಾಟಿಸಿದ ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಯೋಗ ಮಾಡುವುದರಿಂದ ಸಕ್ಕರೆ ಕಾಯಿಲೆ, ಹೃದಯ, ಮೈ, ಕೈ ನೋವು ಮಾಯವಾಗುತ್ತವೆ. ಯೋಗ ಬಲ್ಲವರು ಆರೋಗ್ಯವಂತರಾಗಿರುವುದರ ಜೊತೆಗೆ ಚೈತನ್ಯಶೀಲರಾಗಿದ್ದು ಹೆಚ್ಚು ಸಮಯ ಕೆಲಸ ಮಾಡುವುದಕ್ಕೆ ಉತ್ಸಾಹ ತುಂಬುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ, ಯೋಗ ಆರೋಗ್ಯ ನೀಡುವುದರ ಜೊತೆಗೆ ಉತ್ತಮ ಮನುಷ್ಯರನ್ನಾಗಿ ಬದುಕಲು ದಾರಿ ದೀಪವಾಗುತ್ತದೆ ಎಂದರು.
ಯೋಗಾ ಜಾಗೃತಿ ಜಾಥಾದಲ್ಲಿ ವಿವಿಧ ಶಾಲಾ-ಕಾಲೇಜುಗಳಿಂದ ಸುಮಾರು ೧೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ವೇಳೆ ಯೋಗಪಟು ಅರ್ಜೇಂಟೆನಾ ವಿಕ್ಟರ್ ಡ್ರಿಯಾನೋ, ಇಳಿಕಲ್ ವಿಜಯ ಮಹಾಂತೇಶ್ವರ ಮಠದ ಶ್ರೀ ಗುರು ಮಹಾಂತೇಶ್ವರ ಸ್ವಾಮೀಜಿ, ಶಾಸಕ ಎಸ್.ಎ.ರವೀಂದ್ರನಾಥ್, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಬಿ.ಸಿ.ಉಮಾಪತಿ, ಜಿಪಂ ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ್, ಜಿಪಂ ಸದಸ್ಯೆ ಶೈಲಜಾ ಬಸವರಾಜ್, ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ಡಿಡಿಪಿಐ ಕೆ ಕೋದಂಡರಾಮ್, ಡಿಡಿಪಿಯು ಸಾವಿತ್ರಮ್ಮ, ಬಿಇಓ ಪುಷ್ಪಾ ಲಕ್ಷ್ಮಣ್ ಸ್ವಾಮಿ, ಜಿಲ್ಲಾ ಆಯುಷ್ ಇಲಾಖೆ ಅಕಾರಿ ಸಿದ್ದಪ್ಪ, ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ್ ರಾಯ್ಕರ್, ಎನ್‌ಸಿಸಿ ಕರ್ನಲ್ ಕೃಷ್ಣ ನಾಯರ್ ಇತರರು ಇದ್ದರು.

Be the first to comment on "ನಿತ್ಯ ಯೋಗಾಭ್ಯಾಸದಿಂದ ವ್ಯಕ್ತಿತ್ವ ವಿಕಸನ ಹೊಂದುತ್ತದೆ : ವಚನಾನಂದ ಶ್ರೀ"

Leave a comment

Your email address will not be published.


*