ಹರಪನಹಳ್ಳಿಯಲ್ಲಿ ಯೋಗ ಜಾಗೃತಿ ಅಭಿಯಾನ

Share
  • 19
    Shares

ಹರಪನಹಳ್ಳಿ: 4ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪತಂಜಲಿ ಯೋಗ ಸಮಿತಿವತಿಯಿಂದ ಪಟ್ಟಣದಲ್ಲಿ ಯೋಗ ಜಾಗೃತಿ ಅಭಿಯಾನ ನಡೆಸಲಾಯಿತು.
ಯೋಗ ಜಾಗೃತಿ ರ್‍ಯಾಲಿಯಲ್ಲಿ ಎಸ್‌ಯುಜೆಎಂ ಕಾಲೇಜ್, ಎಚ್‌ಪಿಎಸ್ ಕಾಲೇಜ್, ಭಂಗಿ ಬಸಪ್ಪ ಕಾಲೇಜು ಒಳಗೊಂಡು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಕಾಲೇಜು ಸಿಬ್ಬಂಧಿಗಳು ಜಾಥದಲ್ಲಿ ಪಾಲ್ಗೊಂಡಿದ್ದರು.
ಎಸ್‌ಯುಜೆಎಂ ಕಾಲೇಜ್‌ನಿಂದ ಹೊರಟ ಮೆರವಣಿಗೆಯಲ್ಲಿ ಬಿತ್ತಿಪತ್ರಗಳನ್ನು ಸಾರ್ವಜನಿಕರಿಗೆ ಹಂಚುತ್ತಾ, ಘೋಷಣೆಗಳನ್ನು ಕೂಗುತ್ತಾ, ಐಬಿ ವೃತ್ತದಿಂದ ಹೊಸಪೇಟೆ ರಸ್ತೆ ಮೂಲಕ ಮಠದಕೇರಿ, ಬಣಗಾರಪೇಟೆ, ಗೌಳೇರಪೇಟೆ, ಹೊಸ ಬಸ್ ನಿಲ್ದಾಣ, ಇಜಾರಿ ಶಿರಸಪ್ಪ ವೃತ್ತದ ಮೂಲಕ ಜ್ಯೂನಿಯರ್ ಕಾಲೇಜ್ ಆವರಣದಲ್ಲಿ ಕೊನೆಗೊಂಡಿತು.
ಈ ವೇಳೆ ಯೋಗ ಸಮಿತಿ ಅಧ್ಯಕ್ಷ ಎಚ್.ಮಲ್ಲಿಕಾರ್ಜುನ್ ಮಾತನಾಡಿ, ಪ್ರತಿನಿತ್ಯ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗುತ್ತದೆ. ಇಂದಿನ ಒತ್ತಡದ ಬದುಕಿನಲ್ಲಿ ಆಹಾರ, ದೈನಂದಿನ ಜೀವನ ಶೈಲಿಯ ಬಗ್ಗೆ ಕಾಳಜಿ ವಹಿಸದೇ ಇರುವುದರಿಂದ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಆಹಾರ, ವಿಶ್ರಾಂತಿ, ಕ್ರಮಗಳು ಸರಿಯಾಗಿದ್ದರೆ ಮಾತ್ರ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಉಪಾಧ್ಯಕ್ಷ ಬಿ.ಸುದರ್ಶನ್, ಕಾರ್ಯದರ್ಶಿ ಕೆ.ಎಸ್.ನಾಗರಾಜ್, ಕೋಶಾಧ್ಯಕ್ಷ ಎಂ.ಕೊಟ್ರೇಶಪ್ಪ, ವಿವಿಧ ಕಾಲೇಜುಗಳ ಪ್ರಚಾರ್ಯರಾದ ಎಲ್.ಕೃಷ್ಣಸಿಂಗ್, ಕೆ.ನೀಲಮ್ಮ, ಅರುಣಕುಮಾರ್, ಪ್ರಸಾದಶಾಸ್ತ್ರ, ಉಪನ್ಯಾಸಕ ಬಿ.ಕೃಷ್ಣಮೂರ್ತಿ ತೌಶೀಪ್ ಅಹ್ಮದ್, ರಾಜು ಲಂಬಾಣಿ, ನೀಲಗುಂದ ಮಂಜುನಾಥ್, ಪ್ರದೀಪ್, ಇಂತಿಯಾಜ್, ಕಿರಣ್ ಪಾಟೀಲ್, ಸುಧಾ, ಕೆ.ಟಿ.ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.

Be the first to comment on "ಹರಪನಹಳ್ಳಿಯಲ್ಲಿ ಯೋಗ ಜಾಗೃತಿ ಅಭಿಯಾನ"

Leave a comment

Your email address will not be published.


*