ಜಗಳೂರು ವಲಯ ಅರಣ್ಯಾಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ

Share
  • 21
    Shares

ದಾವಣಗೆರೆ -ಜುಲೈ ೧೧ ರಂದು ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹ ದಳವು ದಾವಣಗರೆ ಜಿಲ್ಲೆಯ ಜಗಳೂರು ವಲಯ ಅರಣ್ಯ ಅಧಿಕಾರಿ ಹೆಚ್ ರಾಮಮೂರ್ತಿ ಇವರು ತಮ್ಮ ಬಲ್ಲ ಮೂಲಗಳಿಂದ ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿದೆ.
ಹಾಗೂ ಅವರು ವಾಸಿಸುತ್ತಿರುವ ಕೋಟೆ ರಸ್ತೆ ಚಿತ್ರದುರ್ಗ ನಿವಾಸ ಮತ್ತು ತರೀಕೆರೆ ಭಕ್ತನ ಕಟ್ಟೆಯ ತೋಟದ ಮನೆ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಜಗಳೂರು ವಲಯ ಅರಣ್ಯಾಧಿಕಾರಿಗಳ ಕಚೇರಿ ಮೇಲೆ ದಾಳಿ ನಡೆಸಿದೆ. ಹಾಗೂ ಆರೋಪಿ ಹೊಂದಿರುವ ಆಸ್ತಿ ಪಾಸ್ತಿಗಳ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

Be the first to comment on "ಜಗಳೂರು ವಲಯ ಅರಣ್ಯಾಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ"

Leave a comment

Your email address will not be published.


*