ಭದ್ರಾ ಜಲಾಶಯಕ್ಕೆ ಶಾಸಕ ಎಸ್ಸೆಸ್‌ರಿಂದ ಬಾಗಿನ

Share
  • 285
    Shares

ದಾವಣಗೆರೆ: ಇತಿಹಾಸದಲ್ಲೇ ಅತೀ ಶೀಘ್ರ ಭರ್ತಿಯಾಗುವ ಮೂಲಕ ಮೈದುಂಬಿ ಹರಿದು ಮನಮೋಹಕವಾಗಿ ಕಂಗೊಳಿಸುತ್ತಿರುವ ದಾವಣಗೆರೆ ಜಿಲ್ಲೆಯ ಜನರ ಜೀವನಾಡಿಯಾದ ಭದ್ರಾ ಜಲಾಶಯಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಭಾನುವಾರ ಬಾಗಿನ ಸಮರ್ಪಿಸಿದರು.
ಹರಿಹರ ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರಾದ ಡಿ.ಜಿ.ಶಾಂತನಗೌಡ, ಹೆಚ್.ಪಿ.ರಾಜೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮತ್ತಿತರರು ಶಾಸಕರಿಗೆ ಸಾಥ್ ನೀಡಿದರು.
ಭದ್ರಾವತಿ ಶಾಸಕ ಎಸ್.ಪಿ.ಸಂಗಮೇಶ್, ಡಾ|| ಹೆಚ್.ಬಿ.ಅರವಿಂದ್, ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಶ್ರೀಮತಿ ಶೋಭಾ ಪಲ್ಲಾಘಟ್ಟೆ, ಉಪ ಮೇಯರ್ ಕೆ. ಚಮನ್‌ಸಾಬ್ ಮತ್ತು ಮಹಾನಗರ ಪಾಲಿಕೆಯ ಸದಸ್ಯರುಗಳು, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್ ಮತ್ತು ಸದಸ್ಯರುಗಳು, ಜಿ.ಪಂ. ಸದಸ್ಯರುಗಳಾದ ಕೆ.ಹೆಚ್.ಓಬಳಪ್ಪ, ಕೆ.ಎಸ್.ಬಸವಂತಪ್ಪ, ಶ್ರೀಮತಿ ರೇಣುಕಮ್ಮ ಬೇತೂರು ಕರಿಬಸಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಯೂಬ್ ಪೈಲ್ವಾನ್, ಮಾಗಾನಹಳ್ಳಿ ಪರುಶುರಾಮ್, ಕೆಪಿಸಿಸಿ ಸಾಮಾಜಿಕ ಜಾಲತಾಣದ ನಿಖಿಲ್ ಕೊಂಡಜ್ಜಿ, ಕೆ.ಎಲ್.ಹರೀಶ್, ಉದ್ಯಮಿಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಎಸ್.ಕೆ.ವೀರಣ್ಣ, ಭಾಗ್ಯಶ್ರೀ ರಾಜು, ನಿವೃತ್ತ ಡಿವೈಎಸ್ಪಿ ಶಿವಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Be the first to comment on "ಭದ್ರಾ ಜಲಾಶಯಕ್ಕೆ ಶಾಸಕ ಎಸ್ಸೆಸ್‌ರಿಂದ ಬಾಗಿನ"

Leave a comment

Your email address will not be published.


*