ಬಿ.ಐ.ಇ.ಟಿ – ‘ಸ್ಮಾರ್ಟ್ ಹೆಲ್ಮೆಟ್’ ಪ್ರಾಜೆಕ್ಟ್ ಗೆ ಪ್ರಥಮ ಬಹುಮಾನ

Share
  • 654
    Shares

ದಾವಣಗೆರೆ-ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಷನ್ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಗಳು ಅವಿಷ್ಕಾರಗೊಳಿಸಿದ “ಸ್ಮಾರ್ಟ್ ಹೆಲ್ಮೆಟ್” ಪ್ರಾಜೆಕ್ಟ್ ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ 20 ನೇ ವಾರ್ಷಿಕೋತ್ಸವದಲ್ಲಿ ನಡೆದ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಪ್ರಥಮ ಬಹುಮಾನ ಲಭಿಸಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಇನುಸ್ಟ್ರುಮೆನ್‌ಟೇಶನ್ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಗಳಾದ ಪೂಜ ಆರ್ ಶರ್ಮ, ಪ್ರಿಯಾಂಕ, ಲತಾ ಮತ್ತು ನಿವೇದಿತಾ ರವರು ‘ಸ್ಮಾರ್ಟ್ ಹೆಲ್ಮೆಟ್’ ಎಂಬ ಪ್ರಾಜೆಕ್ಟನ್ನು ವಿಭಾಗದ ಪ್ರಾಧ್ಯಾಪಕರಾದ ಶ್ರೀದೇವಿಯವರ ಮಾರ್ಗದರ್ಶನದಲ್ಲಿ ಅವಿಷ್ಕಾರ ಮಾಡಿದ್ದಾರೆ. ಮೋಟರ್ ಸೈಕಲ್ ಸವಾರರು ಈ ಹೆಲ್ಮೆಟ್ ಹಾಕಿಕೊಂಡು ಚಾಲನೆ ಮಾಡಲು ಸಿದ್ದರಾದರೆ ಮಾತ್ರ ಮೋಟರ್ ಸ್ಯೈಕಲ್ (ದ್ವಿ ಚಕ್ರ ವಾಹನ) ಚಾಲನೆ ಸ್ಥಿತಿಗೆ ಬರುತ್ತದೆ. ಇಲ್ಲದಿದ್ದರೆ ವಾಹನ ಚಾಲನೆಗೆ ಬರುವುದಿಲ್ಲ ಮತ್ತು ಹೆಲ್ಮೆಟ್ ಹಾಕಿಕೊಂಡು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ಆಗ ಹೆಲ್ಮೇಟ್‌ನಲ್ಲಿರುವ ಸೆನ್ಸಾರ್ ಪತ್ತೆ ಹಚ್ಚಿ ವಾಹನಚಾಲನೆ ಆಗದ ರೀತಿ ನೋಡಿಕೊಳ್ಳುತ್ತದೆ. ವಾಹನ ಅಪಘಾತಕ್ಕೀಡಾದ ಸಂದರ್ಭದಲ್ಲಿತಕ್ಷಣ ಎಸ್.ಎಂ.ಎಸ್. (ಜಿಎಸ್‌ಎಮ್) ಮೂಲಕ ಅಸ್ಪತ್ರೆಗೆ ಮತ್ತು ಸಂಬಂಧಿಕರಿಗೆ ಸಂದೇಶ ನೀಡುತ್ತದೆ. ಈ ಅವಿಷ್ಕಾರವನ್ನು ದ್ವಿಚಕ್ರ ವಾಹನಗಳ ತಯಾರಕರು ಅಳವಡಿಸಿಕೊಂಡರೆ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಬಹುದು. ಈ ಅವಿಷ್ಕಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ೨೦ನೇ ವಾರ್ಷಿಕೋತ್ಸವದಲ್ಲಿ ನಡೆದ ಪ್ರಾಜೆಕ್ಟ ಪ್ರದರ್ಶನದಲ್ಲಿ ಪ್ರಥಮ ಬಹುಮಾನ ಗಳಿಸಿ ೨೫ ಸಾವಿರ ನಗದು ಮತ್ತು ಪ್ರಶಂಸ ಪತ್ರವನ್ನು ಪಡೆದಿದೆ. ಈ ಎಲ್ಲ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಾಲೇಜಿನ ಚೇರ್ಮನ್ ರಾದ .ಎ.ಸಿ.ಜಯಣ್ಣ, ನಿರ್ದೇಶಕರಾದ ಪ್ರೊ.ವೈ.ವೃಷಭೇನ್ದ್ರಪ್ಪ, ಪ್ರಾಂಶುಪಾಲರಾದ ಡಾ. ಸುಬ್ರಮಣ್ಯ ಸ್ವಾಮಿ, ವಿಭಾಗದ ಮುಖ್ಯಸ್ಥರಾದ ಪ್ರೊ.ಬಿ.ಎಂ.ಜಯದೇವಪ್ಪ, ವಿಭಾಗದ ಎಲ್ಲ ಪ್ರಾಧ್ಯಾಪಕರುಗಳು, ಹಾಗು ಸಿಬ್ಬಂದಿಯವರು ಹಾರ್ಧಿಕವಾಗಿ ಅಭಿನಂದಿಸಿದ್ದಾರೆ.

Be the first to comment on "ಬಿ.ಐ.ಇ.ಟಿ – ‘ಸ್ಮಾರ್ಟ್ ಹೆಲ್ಮೆಟ್’ ಪ್ರಾಜೆಕ್ಟ್ ಗೆ ಪ್ರಥಮ ಬಹುಮಾನ"

Leave a comment

Your email address will not be published.


*