ದಾವಣಗೆರೆ ನಗರದಲ್ಲಿ ಚೆಸ್ ಸ್ಕೂಲ್ ಉದ್ಘಾಟನೆ

Share
  • 238
    Shares

ದಾವಣಗೆರೆ– ನಗರದ ಎಂಸಿಸಿ ಎ ಬ್ಲಾಕ್ ನ ಲಿಟ್ಲ್ ವರ್ಲ್ಡ್ ಶಾಲೆಯಲ್ಲಿ ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ನಿಂದ ಆಯೋಜಿಸಿದ್ದ ದಾವಣಗೆರೆ ಚೆಸ್ ಸ್ಕೂಲ್ ಶಾಸಕ ಡಾ.ಶಾಮನೂರು ಶಿವಶಂಕರಪ್ಪ  ಉದ್ಘಾಟಿಸಿ ಮಾತನಾಡಿದ ಅವರು, ಚೆಸ್ ಆಟವನ್ನು ತಲೆಯನ್ನು ಉಪಯೋಗಿಸಿ ಆಟವಾಡುವ ಆಟವಾಗಿದೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಮನಸ್ಸಿನಲ್ಲಿ ಗಮನಕೊಟ್ಟು ಏಕಾಗ್ರತೆಯಿಂದ ಎದುರಾಳಿಯ ಜೊತೆ ಸ್ಪರ್ಧಿಸಬೇಕು.ಚೆಸ್ ಆಟದಿಂದ ಮಕ್ಕಳಲ್ಲಿ ಹೆಚ್ಚಿನ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ. ಈ ಚೆಸ್ ಸ್ಕೂಲ್ ಪ್ರಾರಂಭ ಮಾಡಲಾಗಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಓದಿನ ಜೊತೆಗೆ ಮಕ್ಕಳು ಇಂತಹ ಆಟಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.

ಮೇಯರ್ ಶೋಭಾಪಲ್ಲಾಗಟ್ಟೆ ಮಾತನಾಡಿ, ಮಕ್ಕಳಿಗೆ ಓದು ಅಷ್ಟೇ ಮುಖ್ಯವಲ್ಲ. ಚೆಸ್ ನಂತಹ ಆಟಗಳಲ್ಲಿ ಭಾಗವಹಿಸುವುದರಿಂದ ಏಕಾಗ್ರತೆ ಜ್ಞಾನವು ಸಹ ಬೆಳೆಯುತ್ತದೆ. ಮಕ್ಕಳು ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಹ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸಾಧ್ಯವಾಗುತ್ತದೆ. ಹಾಗಾಗಿ ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಚೆಸ್ ಶಾಲೆಯು ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಪ್ರಾರಂಭವಾಗಿದೆ. ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಿ ಎಂದು ಹೇಳಿದರು. ಈ ವೇಳೆ ಆರು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಉಪಮೇಯರ್ ಕೆ.ಚಮನ್ ಸಾಬ್, ಪಾಲಿಕೆ ಸದಸ್ಯರಾದ ದಿನೇಶ್ ಕೆ ಶೆಟ್ಟಿ, ಸುರೇಂದ್ರಮೋಯ್ಲಿ, ಎಂ.ಹಾಲೇಶ್, ಯುವರಾಜ್,ಕರಿಬಸಪ್ಪ ಸೇರಿದಂತೆ ಮತ್ತಿತರರಿದ್ದರು.

Be the first to comment on "ದಾವಣಗೆರೆ ನಗರದಲ್ಲಿ ಚೆಸ್ ಸ್ಕೂಲ್ ಉದ್ಘಾಟನೆ"

Leave a comment

Your email address will not be published.


*