ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ  ಚಾಲನೆ

Share
  • 114
    Shares
ದಾವಣಗೆರೆ: ದಾವಣಗೆರೆ ನಗರದ ಅಭಿವೃದ್ಧಿಗೆ ಸಚಿವ ಸ್ಥಾನದ ಅವಶ್ಯಕತೆಯಿಲ್ಲ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಅಭಿಪ್ರಾಯಪಟ್ಟರು.
ನಗರದ 10ನೇ ವಾರ್ಡ್‍ನ ಹೊಂಡದ ಸರ್ಕಲ್ ಬಳಿ ಇರುವ ಚಂದ್ರಮೌಳೇಶ್ವರ ದೇವಸ್ಥಾನ ಮತ್ತು 9ನೇ ವಾರ್ಡ್‍ನ ಇಡಬ್ಲ್ಯೂಎಸ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ದಾವಣಗೆರೆ ಜಿಲ್ಲೆಗೆ ಉಸ್ತುವಾರಿ ಸಚಿವ ಸ್ಥಾನದ ಕೊರತೆ ಇಲ್ಲದಂತೆ ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ರಸ್ತೆ, ಚರಂಡಿಗಳು ಕಾಂಕ್ರೀಟೀಕರಣ ಆಗುತ್ತಿವೆ. ಈ ಎಲ್ಲಾ ಕಾಮಗಾರಿಗಳಿಗೆ ಹಿಂದಿನ ಸರ್ಕಾರದಿಂದ ಅನುದಾನ ತರಲಾಗಿದ್ದು, ಅನುದಾನ ಕೊರತೆ ಉಂಟಾಗುವುದಿಲ್ಲ. ಅಗತ್ಯ ಬಿದ್ದರೆ ಅನುದಾನ ತರಲಾಗುವುದು ಎಂದರು.
ಈ ಸಂದರ್ಭದಲ್ಲಿ  10ನೇ ವಾರ್ಡ್‍ನ ಸದಸ್ಯರಾದ ಶ್ರೀಮತಿ ಲಕ್ಷ್ಮೀದೇವಿ ಬಿ.ವೀರಣ್ಣ, 9ನೇ ವಾರ್ಡ್‍ನ ಸದಸ್ಯರಾದ ಶ್ರೀಮತಿ ಪಾಲಿಕೆ ಮಾಜಿ ಮೇಯರ್ ಅನಿತಾಬಾಯಿ, ಡೂಡಾ ಮಾಜಿ ಅಧ್ಯಕ್ಷ ಮಾಲತೇಶ್ ಜಾಧವ್, ನಗರಸಭಾ ಮಾಜಿ ಅಧ್ಯಕ್ಷ ಬಿ. ವೀರಣ್ಣ, ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ನಗರಸಭಾ ಮಾಜಿ ಉಪಾಧ್ಯಕ್ಷ ಎಸ್.ಎನ್.ಚಂದ್ರಪ್ಪ, ಡೂಡಾ ಮಾಜಿ ಸದಸ್ಯ ವಿನಾಯಕ ಪೈಲ್ವಾನ್, ಗೌಡ್ರು ಚನ್ನಬಸಪ್ಪ, ವಾರ್ಡ್ ಅಧ್ಯಕ್ಷ ಡಿಶ್ ಮಂಜುನಾಥ್, ಗುತ್ತಿಗೆದಾರರಾದ ಶ್ರೀ ಮರುಳಸಿದ್ದೇಶ್ವರ ಏಜೆನ್ಸಿ, ಕೆ.ಎನ್. ಮುನಿಕುಮಾರ್, ಎಸ್.ಸುರೇಶ್ ಮತ್ತಿತರರು ಇದ್ದರು. 

Be the first to comment on "ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ  ಚಾಲನೆ"

Leave a comment

Your email address will not be published.


*