ಅಶೋಕ ಟಾಕೀಸ್ ರಸ್ತೆ ಬಳಿಯ ರೈಲ್ವೆ ಮೇಲ್ಸೆತುವೆಗೆ ಅಂತಿಮ ನಕ್ಷೆ ನೀಡಲು ಗಡುವು

Share
  • 348
    Shares

ದಾವಣಗೆರೆ -ಅಶೋಕ ಟಾಕೀಸ್ ರಸ್ತೆ ಬಳಿಯಲ್ಲಿಯರು ರೈಲ್ವೆ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲು ರೈಲ್ವೆ ಇಲಾಖೆ ಪ್ರಸ್ತುತ ನೀಡಿರುವ ನಕ್ಷೆಗೆ ಕೆಲವೊಂದು ಮಾರ್ಪಾಟುಗಳನ್ನು ಮಾಡಿ, ಭೂಸ್ವಾಧೀನ ಮತ್ತು ನಿರ್ಮಾಣದ ಅಂದಾಜು ವೆಚ್ಚ ಸೇರಿದಂತೆ ಸಂಪೂರ್ಣವಾದ ವರದಿಯೊಂದಿಗೆ ನಕ್ಷೆಯನ್ನು ಇನ್ನು ೧೫ ದಿನಗಳ ಒಳಗಾಗಿ ತಯಾರಿಸಿ ನೀಡುವಂತೆ ಸಂಸದ ಜಿ ಎಂ ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.
೨೦೧೪-೧೫ ರಿಂದ ನೆನೆಗುದಿಗೆ ಬಿದ್ದಿರುವ ಅಶೋಕ ಟಾಕೀಸ್ ಬಳಿಯ ರೇಲ್ವೇ ಮೇಲ್ಸುತುವೆ ಕಾಮಗಾರಿ ಸೇರಿದಂತೆ ನಗರಮಟ್ಟದ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಚರ್ಚಿಸಲು ಇಂದು ಜಿಲ್ಲಾಡಳಿತ ಭವನದಲ್ಲಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಸಕರಾದ ಎಸ್ ಎ ರವೀಂದ್ರನಾಥ, ಕೆ.ಕರುಣಾಕರ ರೆಡ್ಡಿ, ಎಸ್ ವಿ ರಾಮಚಂದ್ರ, ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ಇವರ ಸಮ್ಮುಖದಲ್ಲಿ ಸಭೆ ನಡೆಯಿತು.
ಚರ್ಚೆಯಲ್ಲಿ ಪಿಡಬ್ಲ್ಯುಡಿ, ಮಹಾನಗರಪಾಲಿಕೆ ಹಾಗೂ ರೈಲ್ವೇ ಇಲಾಖೆಯವರು ಸರ್ವೇ ಮಾಡಿ ತಯಾರಿಸಿದ್ದ ನಕ್ಷೆಗಳ ಸಾಧಕ-ಬಾಧಕಗಳ ಕುರಿತು ಕೂಲಂಕಷವಾಗಿ ಚರ್ಚಿಸಿದ ಬಳಿಕ ರೈಲ್ವೇ ಇಲಾಖೆ ಸಿದ್ದಪಡಿಸಿದ್ದ ಗಾಂಧಿ ಸರ್ಕಲ್‌ನಿಂದ ಅಶೋಕ ಟಾಕಿಸ್ ಮಾರ್ಗವಾಗಿ ಕೆಆರ್ ರಸ್ತೆವರೆಗೆ ರೇಲ್ವೇ ಮೇಲ್ಸೆತುವೆ ನಿರ್ಮಿಸುವ ನಕ್ಷೆಯನ್ನು ಕೆಲವೊಂದು ಮಾರ್ಪಾಟುಗಳೊಂದಿಗೆ ಅನುಷ್ಟಾನಗೊಳಿಸಲು ಸಭೆ ನಿರ್ಧರಿಸಿ, ಇನ್ನು ೧೫ ದಿನಗಳ ಒಳಗೆ ಕೆಲವು ಮಾರ್ಪಾಟುಗಳೊಂದಿಗೆ ಭೂಸ್ವಾಧೀನ ಮತ್ತು ನಿರ್ಮಾಣ ವೆಚ್ಚದ ಅಂದಾಜು ಪಟ್ಟಿಯೊಂದಿಗೆ ನಕ್ಷೆಯನ್ನು ನೀಡಲು ಸೂಚಿಸಲಾಯಿತು.
ಪ್ರಸ್ತುತ ಮಂಜೂರಾಗಿರುವ ರೂ. ೩೫ ಕೋಟಿಗೂ ಅಧಿಕ ಅನುದಾನ ಬೇಕಾಗಬಬಹುದೆಂದು ಅಂದಾಜಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಿ ಎಸ್ ರಮೇಶ್, ರೇಲ್ವೇ ಇಲಾಖೆಯ ಮುಖ್ಯ ಇಂಜಿನಿಯರ್ ಷರ್ಫುದ್ದೀನ್, ಎಇಇ ವಿಜಯ ಪ್ರಸಾದ್, ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ಈಶ್ವರಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವೀರೇಶ್, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಪಿಡಬ್ಲ್ಯುಡಿ ಇಲಾಖೆ, ರೈಲ್ವೆ ಇಲಾಖೆ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Be the first to comment on "ಅಶೋಕ ಟಾಕೀಸ್ ರಸ್ತೆ ಬಳಿಯ ರೈಲ್ವೆ ಮೇಲ್ಸೆತುವೆಗೆ ಅಂತಿಮ ನಕ್ಷೆ ನೀಡಲು ಗಡುವು"

Leave a comment

Your email address will not be published.


*