ಕೃಷಿ ಭಾಗ್ಯ ಯೋಜನೆ: ನೀರಾವರಿ ಸೌಲಭ್ಯ ಹೊಂದಿದ ರೈತರಿಗೆ ಉಚಿತ ತರಕಾರಿ ಬೀಜ ವಿತರಣೆ

Share
  • 79
    Shares

ದಾವಣಗೆರೆ – ಕೃಷಿ ಭಾಗ್ಯ ಯೋಜನೆಯಡಿ ನೀರಾವರಿ ಸೌಲಭ್ಯ ಹೊಂದಿರುವ ಜಗಳೂರು ತಾಲ್ಲೂಕಿನ ರೈತರಿಗೆ ಉಚಿತವಾಗಿ ರೂ.೨೦೦೦ ಮೊತ್ತದವರೆಗಿನ ವಿವಿಧ ತರಕಾರಿ ಬೀಜಗಳಾದ ಟಮೊಟೊ, ಬದನೆ, ಬೆಂಡಿ, ಮೆಣಸಿನ ಬೀಜ ಹಾಗೂ ಹೀರೆ ಬೀಜಗಳನ್ನು ವಿತರಿಸಲಾಗುತ್ತಿದೆ.
ಆಸಕ್ತ ರೈತರು ಸೂಕ್ತ ದಾಖಲೆಗಳಾದ ಜಮೀನಿನ ಪಹಣಿ, ನೀರಾವರಿ ಮೂಲ ದೃಡಿಕರಣ ಪತ್ರ, ಆಧಾರ್ ಮತದಾರರ ಗುರುತಿನ ಚೀಟಿ, ಇತ್ತೀಚಿನ ಜಾತಿ ಪ್ರಮಾಣ ಪತ್ರದ ನಕಲು ಹಾಗೂ ಬ್ಯಾಂಕ್ ಪಾಸ್‌ಪುಸ್ತಕ ನಕಲು ಪ್ರತಿಗಳನ್ನು ಕಚೇರಿಗೆ ಹಾಗೂ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆ ಪಲ್ಲಾಗಟ್ಟೆ ಗ್ರಾಮದಲ್ಲಿ ಸಲ್ಲಿಸಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯಿತಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತೋಟಗಾರಿಕೆ ಇಲಾಖೆ ಜಗಳೂರು ಅಥವಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Be the first to comment on "ಕೃಷಿ ಭಾಗ್ಯ ಯೋಜನೆ: ನೀರಾವರಿ ಸೌಲಭ್ಯ ಹೊಂದಿದ ರೈತರಿಗೆ ಉಚಿತ ತರಕಾರಿ ಬೀಜ ವಿತರಣೆ"

Leave a comment

Your email address will not be published.


*