ದಾವಣಗೆರೆ ಜಿಲ್ಲೆಯಲ್ಲಿಯೂ ಬೆಂಬಲ ಬೆಲೆಯ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಲು ಸಂಸದ ಜಿ.ಎಂ.ಸಿದ್ದೇಶ್ವರ ಒತ್ತಾಯ

Share
  • 121
    Shares

ದಾವಣಗೆರೆ -೨೦೧೭-೧೮ನೇ ಸಾಲಿನ ಬೇಸಿಗೆ ಬೆಳೆಯಲ್ಲಿ ಬೆಳೆದ ಭತ್ತವನ್ನು ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲು ರಾಜ್ಯ ಸರ್ಕಾರವು ಮೈಸೂರು, ಮಂಡ್ಯ, ರಾಮನಗರ ಮತ್ತು ಹಾಸನ ಸೇರಿದಂತೆ ಕೇವಲ ನಾಲ್ಕು ಜಿಲ್ಲೆಗಳಲ್ಲಿ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಲು ಸರ್ಕಾರ ಆದೇಶಿಸಿದೆ, ಆದರೆ ಅತೀ ಹೆಚ್ಚು ಭತ್ತ ಬೆಳೆಯುವ ದಾವಣಗೆರೆ, ಕೊಪ್ಪಳ, ಶಿವಮೊಗ್ಗ ಈ ಜಿಲ್ಲೆಗಳಲ್ಲಿ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯದೆ ರೈತರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡ ಹೊರಟಿದೆ ಇದು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಒರೆಸುವ ತಂತ್ರದಂತಿದೆ. ಕಳೆದ ಮೂರು ಹಂಗಾಮಿನಲ್ಲಿ ಬರಗಾಲದ ಕಾರಣದಿಂದ ಈ ಭಾಗದಲ್ಲಿ ರೈತರು ಭತ್ತವನ್ನೆ ಬೆಳೆಯಾಲಾಗಿರಲಿಲ್ಲ ಆದರೆ ಈ ಬೇಸಿಗೆಯ ಬೆಳೆಯಲ್ಲಿ ರೈತರು ಬೆಳೆದಿರುವ ಭತ್ತಕ್ಕೆ ಸೂಕ್ತ ಬೆಲೆ ದೊರಕದೆ ರೈತರೂ ಕಂಗಾಲಾಗಿದ್ದಾರೆ. ಕನಿಷ್ಠ ಪ್ರತಿ ಕ್ವಿಂಟಾಲಿಗೆ ೨,೦೦೦/- ರೂಪಾಯಿ ಇರಬೇಕಾಗಿದ್ದ ಭತ್ತದ ಬೆಲೆ ಈ ಭಾಗದಲ್ಲಿ ಪ್ರತಿ ಕ್ವಿಂಟಾಲಿಗೆ ೧,೩೦೦/- ರೂಪಾಯಿಗೆ ಕುಸಿದಿದೆ ರೈತರು ೧ ಎಕರೆಯಲ್ಲಿ ಭತ್ತ ಬೆಳೆಯಲು ಮಾಡಿರುವ ಖರ್ಚನ್ನೂ ಸಹ ವಾಪಾಸ್ಸು ಪಡೆಯಲಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಭತ್ತ ಬೆಳೆಯುವ ರೈತರ ಹಿತ ಕಾಯುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರು ದಾವಣಗೆರೆ ಜಿಲ್ಲೆಯ ದಾವಣಗೆರೆ, ಹೊನ್ನಾಳಿ, ಚನ್ನಗಿರಿ, ಹರಿಹರ ತಾಲ್ಲೂಕುಗಳಲ್ಲಿ ಕನಿಷ್ಠ ಹತ್ತು ಕಡೆ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಲು ಆದೇಶಿಸುವಂತೆ ಸಂಸದ ಜಿ.ಎಂ.ಸಿದ್ದೇಶ್ವರ  ಆಗ್ರಹ ಪಡಿಸಿದ್ದಾರೆ.

Be the first to comment on "ದಾವಣಗೆರೆ ಜಿಲ್ಲೆಯಲ್ಲಿಯೂ ಬೆಂಬಲ ಬೆಲೆಯ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಲು ಸಂಸದ ಜಿ.ಎಂ.ಸಿದ್ದೇಶ್ವರ ಒತ್ತಾಯ"

Leave a comment

Your email address will not be published.


*