ದಾವಣಗೆರೆ ಸಾಯಿಬಾಬಾ ಮಂದಿರದಲ್ಲಿ 27ರಂದು ಗುರುಪೂರ್ಣಿಮಾ

Share
  • 98
    Shares

ದಾವಣಗೆರೆ- ನಗರದ ಎಂ.ಸಿ.ಸಿ. ಎ ಬ್ಲಾಕ್, 8ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಶಿರಡಿಸಾಯಿಬಾಬಾ ಮಂದಿರದಲ್ಲಿ ಶ್ರೀ ಸಾಯಿ ಟ್ರಸ್ಟ್ ವತಿಯಿಂದ ಗುರುಪೂರ್ಣಿಮಾ ಉತ್ಸವ ಮತ್ತು ಶ್ರೀಶಿರಡಿ ಸಾಯಿಬಾಬಾ ಮೂರ್ತಿಯ 21ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಸಮಾರಂಭವು ಇದೇ ದಿನಾಂಕ 27ರ ಶುಕ್ರವಾರ ನಡೆಯಲಿದೆ.ಅಂದು ಬೆಳಿಗ್ಗೆ 6 ಗಂಟೆಗೆ ಕಾಕಡಾರತಿ, ಬೆಳಿಗ್ಗೆ 9 ಗಂಟೆಗೆ ದೀಪಾರಾಧನೆ,

ಕಳಸ ಸ್ಥಾಪನೆ, ಗೋಪುರ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. ಶ್ರೀಜಡೇಸಿದ್ದ ಶಿವಯೋಗೀಶ್ವರ ಶಾಂತಾಶ್ರಮದ ಶ್ರೀ ಶಿವಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಶಾಸಕರೂ ಆದ ಶ್ರೀ ಸಾಯಿ ಟ್ರಸ್ಟ್ ಅಜೀವ ಛೇರ್ಮನ್ ಡಾ.ಶಾಮನೂರು ಶಿವಶಂಕರಪ್ಪ, ಟ್ರಸ್ಟ್ ಕಾರ್ಯಾಧ್ಯಕ್ಷರೂ ಆದ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಅವರುಗಳು ಎಲ್ಲಾ ಕಾರ್ಯಕ್ರಮಗಳನ್ನು ನೆರವೇರಿಸಲಿದ್ದಾರೆ.
ನಂತರ ಭಕ್ತರಿಂದ ಶ್ರೀ ಶಿರಡಿ ಸಾಯಿಬಾಬಾರವರ ಬೆಳ್ಳಿ ಮೂರ್ತಿಗೆ ಪೂಜೆ, ಪಂಚಾಮೃತಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಪ್ರಸಾದ ವಿನಿಯೋಗ,ಸಂಜೆ 5ಕ್ಕೆ ಶ್ರೀ ಷಾ ಭಜನಾ ಮಂಡಳಿಯ ಮಹಿಳೆಯರಿಂದ ಮತ್ತು ಶ್ರೀಮತಿ ಶೀಲಾ ನಟರಾಜ್ ತಂಡದವರಿಂದ ಲಲಿತ ಸಹಸ್ರ ನಾಮಾವಳಿ, ದೇವಿ ಭಜನೆ,ರಾತ್ರಿ 8.30ಕ್ಕೆ ಪಾಲಕಿ ಉತ್ಸವ ಏರ್ಪಾಡಾಗಿದೆ.

Be the first to comment on "ದಾವಣಗೆರೆ ಸಾಯಿಬಾಬಾ ಮಂದಿರದಲ್ಲಿ 27ರಂದು ಗುರುಪೂರ್ಣಿಮಾ"

Leave a comment

Your email address will not be published.


*