ಯುವಜನತೆಯ ಉದ್ಯೋಗದ ಬಯಕೆಯನ್ನು ತಣಿಸಲು ಉದ್ಯೋಗ ಮೇಳ

Share
  • 77
    Shares

ದಾವಣಗೆರೆ.-ಕರ್ನಾಟಕ ಸರ್ಕಾರ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದಾವಣಗೆರೆ. ದಾವಣಗೆರೆ ಮಹಾನಗರ ಪಾಲಿಕೆ ಡೆ-ನಲ್ಮ್ ಯೋಜನೆ, ಎ.ವಿ. ಕಮಲಮ್ಮ ಮಹಿಳಾ ಕಾಲೇಜು, ದಾವಣಗೆರೆ. ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ ೧೬.೦೭.೨೦೧೮ ರಂದು ವಿಶ್ವ ಕೌಶಲ” ದಿನದ ಪ್ರಯುಕ್ತ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರiದ ಪ್ರಾಸ್ತಾವಿಕ ನುಡಿಯನ್ನಾಡಿದ ಉದ್ಯೋಗಾಧಿಕಾರಿಗಳಾದ ಜಿ.ಜೆ. ರುದ್ರನಗೌಡರವರು, ಸ್ವ ಉದ್ಯೋಗಕ್ಕೆ ಹೆಚ್ಚಿನ ಅವಕಾಶಕಗಳಿದ್ದು, ಇದರಿಂದ ಅಧಿಕ ಲಾಭವನ್ನು ಪಡೆಯಬಹುದು. ಒಬ್ಬ ವಡೆ ಮಾಡುವ ಸ್ವ ಉದ್ಯೋಗಿ ದಿನಕ್ಕೆ ೫.೦೦೦ ವಡೆಗಳನ್ನು ಮಾರಾಟ ಮಾಡಿ, ಒಂದು ವಡಾಕ್ಕೆ ಒಂದು ರೂಪಾಯಿ ಲಾಭ ಪಡೆದು, ದಿನಕ್ಕೆ ೫.೦೦೦ರೂ ಗಳಿಸುತ್ತಾನೆ. ಇದರಿಂದ ಒಂದು ತಿಂಗಳಿಗೆ ೧,೫೦,೦೦೦ ರೂ ಗಳಿಸಿದಂತಾಗುತ್ತದೆ ಎಂದರು. ಈ ಮೇಳಕ್ಕೆ ಹದಿನಾರಕ್ಕಿಂತಲೂ ಹೆಚ್ಚು ಕಂಪನಿಗಳು ಆಗಮಿಸಿದ್ದು, ಒಟ್ಟು ೯೯೨ ಉದ್ಯೋಗ ಅಕಾಂಕ್ಷಿಗಳು ನೋಂದಣಿ ಮಾಡಿಸಿದ್ದಾರೆ, ಈ ಉದ್ಯೋಗ ಮೇಳದಲ್ಲಿ ಉತ್ತಮ ಅವಕಾಶಗಳಿದ್ದು ಸದುಪಯೋಗಪಡಿಸಿಕೊಳ್ಳಿ ಎಂದು ಹಾರೈಸಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ದಾವಣಗೆರೆ ವಿ.ವಿ.ಯ ಸಿಂಡಿಕೇಟ್ ಸದಸ್ಯರಾದ ಪ್ರೋ. ಸಿ.ಹೆಚ್.ಮುರುಗೇಂದ್ರಪ್ಪ ರವರು ಮಾತನಾಡಿ, ಕಾರ್ಯಕ್ರಮದ ಉದ್ಘಾಟನೆ ಮಾಡಿದಕ್ಕೆ ಹರ್ಷ ವ್ಯಕ್ತಪಡಿಸಿದರು. ಡಿ, ಮಹಾನಗರ ಪಾಲಿಕೆಯಿಂದ ಉತ್ತಮ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸದುಪಯೋಗಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೋ. ಪಿ.ಎಸ್.ಶಿವಪ್ರಕಾಶ್ ಮಾತನಾಡಿದರು.
ಕಾರ್ಯಕ್ರಮದ ಸ್ವಾಗತವನ್ನು ಡಾ.ಹೆಚ್.ಎಸ್. ಮಂಜುನಾಥ್ ರವರು ನಡೆಸಿಕೊಟ್ಟರೆ, ವಂದನಾರ್ಪಣೆಯನ್ನು ವಿದ್ಯಾರ್ಥಿಕ್ಷೇಮಾಧಿಕಾರಿಗಳಾದ ಡಾ. ಬಿ.ಪಿ. ಕುಮಾರ್ ನಿರ್ವಹಿಸಿದರೆ, ಆರಂಭದಲ್ಲಿ ಮಯೂರಿ ಪ್ರಾರ್ಥಿಸಿದರು, ಹಾಗೂ ಸ್ಪೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಈ ಉದ್ಯೋಗ ಮೇಳದಲ್ಲಿ ೧೫೦ಜನ ಆಯ್ಕೆಗೊಂಡಿದ್ದು, ೨೫೦ ಉದ್ಯೋಗ ಆಕಾಂಕ್ಷಿಗಳನ್ನು ಕಾಯ್ದಿರಿಸಲಾಗಿದೆ.

Be the first to comment on "ಯುವಜನತೆಯ ಉದ್ಯೋಗದ ಬಯಕೆಯನ್ನು ತಣಿಸಲು ಉದ್ಯೋಗ ಮೇಳ"

Leave a comment

Your email address will not be published.


*