ಯುವಕನ ಬರ್ಬರ ಕೊಲೆ

Share
  • 22
    Shares

ದಾವಣಗೆರೆ-ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದಾವಣಗೆರೆಯ ಪಿಬಿ ರಸ್ತೆ ಬಳಿ ಇರುವ ಪ್ರೀತಂ ಬಾರ್ ಎದುರಿನಲ್ಲಿ ನಡೆದಿದೆ.
ವಿನೋಬನಗರದ ನಿವಾಸಿ ಭರತ್ (೨೪) ಕೊಲೆಯಾದ ಯುವಕ. ಈತನನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ..ಸ್ನೇಹಿತರ ನಡುವೆ ಗಲಾಟೆ ಸಂಭವಿಸಿದ್ದು,ವಿಕೋಪಕ್ಕೆ ತಿರುಗಿದ ಪರಿಣಾಮ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಮೃತ ಭರತ್ ಪೋಷಕರು ದೂರಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕನ ಶವದ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು ವಿದ್ಯಾನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶ್ವಾನದಳ ತಂಡ ಆಗಮಿಸಿದ್ದು, ಪರಿಶೀಲನಾ ಕಾರ್ಯ ನಡೆದಿದೆ.

Be the first to comment on "ಯುವಕನ ಬರ್ಬರ ಕೊಲೆ"

Leave a comment

Your email address will not be published.


*