ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆಯ ಅಂಗವಾಗಿ ಪ್ರತಿಭಾ ಪುರಸ್ಕಾರ

Share
  • 95
    Shares

ದಾವಣಗೆರೆ, ಜು. ೧೨- ಜಿಲ್ಲಾ ಕುರುಬರ ಯುವ ಘಟಕದ ವತಿಯಿಂದ ಆಗಸ್ಟ್ ೧೫ರಂದು ಸಂಗೊಳ್ಳಿ ರಾಯಣ್ಣನವರ ೨೨೦ನೇ ಜನ್ಮದಿನಾಚರಣೆಯ ಅಂಗವಾಗಿ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗುವುದು ಎಂದು ಗುರುವಾರ ನಡೆದ ಜಿಲ್ಲಾ ಕುರುಬರ ಯುವ ಘಟಕದ ಪೂರ್ವಾಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಜೆ.ಎನ್. ಶ್ರೀನಿವಾಸ್ ವಹಿಸಿದ್ದರು. ಸಭೆಯಲ್ಲಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಗೌರವಾಧ್ಯಕ್ಷ ಹಾಲೆಕಲ್ಲು ಎಸ್.ಟಿ. ಅರವಿಂದ್, ಪ್ರಧಾನ ಕಾರ್ಯದರ್ಶಿ ಕೆ. ಪರಶುರಾಮ್, ಎಸ್.ಎಸ್. ಗಿರೀಶ್, ಡಿ.ಕೆ. ರಮೇಶಣ್ಣ, ಇಟ್ಟಿಗುಡಿ ಮಂಜುನಾಥ್, ಅಡಾಣಿ ಸಿದ್ದಪ್ಪ, ಜಡಗನಹಳ್ಳಿ ಚಿಕ್ಕಪ್ಪ, ಬಿ. ಲಿಂಗರಾಜ್, ಗಂಗಾಧರ್, ಜಮ್ನಹಳ್ಳಿ ನಾಗರಾಜ್, ಡಿ.ಜಿ. ಪ್ರಕಾಶ್, ನವೀನ್‌ಕುಮಾರ್ ಹೆಚ್.ಬಿ., ಹಾಲೇಕಲ್ ಗೋಣಿಬಸಪ್ಪ, ಚಂದ್ರಶೇಖರ್, ಪರಮೇಶ್ ಮತ್ತಿತರರು ಹಾಜರಿದ್ದರು.
ದಾವಣಗೆರೆ ಜಿಲ್ಲೆಯ ಕುರುಬ ಸಮಾಜದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಶೇಕಡ ೮೦ಕ್ಕೂ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕಾಗಿ ದಾವಣಗೆರೆ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಕಾರ್ಯಾಲಯ, ಹದಡಿ ರಸ್ತೆಯಲ್ಲಿ ಮೂಲ ದಾಖಲಾತಿಗಳೊಂದಿಗೆ ಆಗಸ್ಟ್ ೫ ರೊಳಗಾಗಿ ಅರ್ಜಿ ಸಲ್ಲಿಸತಕ್ಕದ್ದು. ತದ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ : ಸಿದ್ದಪ್ಪ ಅಡಾಣಿ : 9481636021, ಕೆ. ಪರಶುರಾಮ್ :: 9663384343, ಹಾಲೇಕಲ್ ಎಸ್.ಟಿ. ಅರವಿಂದ್ : 94814418009 ಸಂಪರ್ಕಿಸಿ.

Be the first to comment on "ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆಯ ಅಂಗವಾಗಿ ಪ್ರತಿಭಾ ಪುರಸ್ಕಾರ"

Leave a comment

Your email address will not be published.


*