ಎಸ್.ಟಿ. ಮೀಸಲಾತಿಗಾಗಿ ರಾಜ್ಯಾವ್ಯಾಪಿ ಸಂಘಟನೆಗೆ ಕಾಗಿನೆಲೆ ಜಗದ್ಗುರುಗಳು ನಿರ್ಧಾರ

Share
  • 28
    Shares

ಹರಿಹರ ತಾಲ್ಲೂಕು ಬೆಳ್ಳೂಡಿ ಕನಕಗುರುಪೀಠದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಲುಮತ ಮಹಾಸಭಾವು ಆಯೋಜಿಸಿದ್ದ ಸಮಾಜದ ಸಂಘಟನೆ ಹಾಗೂ  ಎಸ್.ಟಿ. ಹೋರಾಟ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ 30 ಜಿಲ್ಲೆಗಳಿಂದ ಆಗಮಿಸಿದ್ದ 800ಜನ ಪ್ರತಿನಿಧಿಗಳಿಗೆ ಕಾಗಿನೆಲೆ ಕನಕಗುರುಪೀಠದ ಜಗದ್ಗುರು ಶ್ರೀಶ್ರೀ ಶ್ರೀನಿರಂಜನಾನಂದಪುರಿ ಮಹಾಸ್ವಾಮಿಗಳು ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಕೊಡಗು ಮತ್ತು ಬೀದರ್‍ನಲ್ಲಿ ಕುರುಬರು ಎಸ್.ಟಿ.ಯಲ್ಲಿ ಇದ್ದಾರೆ. ಉಳಿದ ಜಿಲ್ಲೆಗಳು ವಂಚಿತವಾಗಿವೆ.  ಕಳೆದ ಸರ್ಕಾರಕ್ಕೂ  ಸಭೆಗಳು, ಬೃಹತ್ ಸಮಾವೇಶ, ಧರಣಿಗಳ ಮೂಲಕ ಹಲವಾರು  ಬಾರಿ ಎಸ್.ಟಿ. ಮೀಸಲಾತಿಯ ಬೇಡಿಕೆಯನ್ನು ಸಲ್ಲಿಸಲಾಗಿತ್ತು, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಲುಮತ ಮಹಾಸಭಾದ ರಾಜ್ಯಪ್ರತಿನಿಧಿಗಳ ಜೊತೆ ಅಧಿಕೃತ ಸಭೆ ನಡೆಸಿ, ಮೀಸಲಾತಿ ಪ್ರಮಾಣ ಏರಿಸಿ ಎಸ್.ಟಿ.ಗೆ ಶಿಫಾರಸ್ಸು ಮಾಡುವ ಭರವಸೆಯನ್ನು ನೀಡಿದ್ದರು.
 ಸಮಾಜವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು, ಅಟ್ರಾಸಿಟಿ ಕೇಸುಗಳಿಂದ ಅಮಾಯಕ ಕುರುಬರ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಮುಕ್ತಿ ಸಿಗಬೇಕಾದರೆ ಕುರುಬರು ನೆಮ್ಮದಿಯಿಂದ ಜೀವಿಸಬೇಕಾದರೆ ಎಸ್.ಟಿ. ಮೀಸಲಾತಿ ಅನಿವಾರ್ಯತೆ ಇದೆ. ಎಸ್.ಟಿ. ಸಿಗಬೇಕಾದ ಎಲ್ಲಾ ಗುಣ ಲಕ್ಷಣಗಳು ಕುರುಬ ಸಮಾಜಕ್ಕೆ  ಇದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತು ಕರ್ನಾಟಕ ಕೊಡಗು, ಬೀದರ್‍ನಲ್ಲೂ ಎಸ್.ಟಿ. ಇದೆ ಇಷ್ಟೆಲ್ಲಾ  ಇದ್ದರೂ  ಕುರುಬರು  ಹಕ್ಕುಗಳಿಂದ ವಂಚಿತರಾಗಿದ್ದಾರೆ. ಹಾಲುಮತ ಸಮಾಜದ ಹಿತರಕ್ಷಣೆಗಾಗಿ  ನಾನು ಹೋರಾಟದಲ್ಲಿ  ತೊಡಗಿಸಿಕೊಳ್ಳಬೇಕಾದ  ಅನಿವಾರ್ಯತೆಯಿಂದ ನಿವೃತ್ತ ಪೋಲೀಸ್‍ಅಧಿಕಾರಿಗಳು, ನ್ಯಾಯಮೂರ್ತಿಗಳು, ಸಂಶೋಧಕರು ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ,  ಮಹಾರಾಷ್ಟ್ರ,  ಮಧ್ಯಪ್ರದೇಶ,  ರಾಜಾಸ್ತಾನ,  ಗುಜರಾತ್,  ಉತ್ತರಪ್ರದೇಶ,  ಬಿಹಾರ  ಸೇರಿದಂತೆ  ಇತರೆ ರಾಜ್ಯಗಳ 
ಪ್ರತಿನಿಧಿಗಳ  ಎಸ್.ಟಿ. ಮೀಸಲಾತಿ ಹೋರಾಟ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲಿ ಕಾಗಿನೆಲೆಯಲ್ಲಿ ಸಭೆ ನಡೆಸಲಾಗುವುದು. ಎಂದು ಇದೇ ಸಂದರ್ಭದಲ್ಲಿ ಶ್ರೀಗಳು ಹೇಳಿದ್ದಾರೆ. 
 ಹಾಲುಮತ ಮಹಾಸಭಾದ  ರಾಜ್ಯಾಧ್ಯಕ್ಷರಾದ  ರುದ್ರಣ್ಣ ಗುಳಗುಳಿ,  ಮಹಾಸಭಾ ರಾಜ್ಯ ಸಮಿತಿ,  ಎಲ್ಲಾ ಜಿಲ್ಲಾ ಸಮಿತಿ ಸದಸ್ಯರುಗಳು ಮತ್ತು ಕುರುಬ ಸಮಾಜದಬಂಧುಗಳು ಈ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

Be the first to comment on "ಎಸ್.ಟಿ. ಮೀಸಲಾತಿಗಾಗಿ ರಾಜ್ಯಾವ್ಯಾಪಿ ಸಂಘಟನೆಗೆ ಕಾಗಿನೆಲೆ ಜಗದ್ಗುರುಗಳು ನಿರ್ಧಾರ"

Leave a comment

Your email address will not be published.


*