ಟಿ.ವಿ.ಸ್ಟೇಷನ್ ಮತ್ತು ಕುಂದುವಾಡ ಕೆರೆಗಳಿಗೆ ನೀರು ತುಂಬಿಸಿಕೊಳ್ಳಲು ಸೂಚನೆ

Share
  • 99
    Shares

ದಾವಣಗೆರೆ- ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ರ ಅಧ್ಯಕ್ಷತೆಯಲ್ಲಿ ದಿನಾಂಕ:10-07-2018ರಂದು ಸಭೆ ಸೇರಿ ಭದ್ರಾ ಜಲಾಶಯದಿಂದ ಒಟ್ಟು ನೂರು ದಿನಗಳ ಕಾಲ ಸತತ ಬಲ ಮತ್ತು ಎಡ ದಂಡೆಗಳ ನಾಲೆಗಳಿಗೆ ನೀರು ಹರಿಸುವಂತೆ ನಿರ್ಧಾರ ಕೈಗೊಂಡ ಹಿನ್ನಲೆಯಲ್ಲಿ ದಿನಾಂಕ:11-07-2018ರ ಬುಧವಾರದಂದು ಮಹಾನಗರಪಾಲಿಕೆಯ ಅಧಿಕಾರಿಗಳೊಂದಿಗೆ ಮಹಾ ಪೌರರಾದ ಶ್ರೀಮತಿ ಶೋಭಾ ಪಲ್ಲಾಗಟ್ಟೆ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ನಗರಕ್ಕೆ ನೀರು ಸರಬರಾಜು ಮಾಡುವ ಸಂಬಂಧ ಟಿ.ವಿ.ಸ್ಟೇಷನ್ ಮತ್ತು ಕುಂದುವಾಡ ಕೆರೆಗಳಿಗೆ ನೀರು ಹರಿಸಿ ಭರ್ತಿ ಮಾಡಿಕೊಳ್ಳುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಹಾಗೂ ನೀರು ಸರಬರಾಜು ಇಂಜಿನಿಯರ್ ಮತ್ತು ಕೆಳ ಹಂತದ ಸಿಬ್ಬಂದಿ ವರ್ಗದವರಿಗೆ ನಗರದಲ್ಲಿ ನೀರು ಸರಬರಾಜು ಮಾಡುವ ಸಂದರ್ಭದಲ್ಲಿ ನೀರು ಪೋಲಾಗದ ಹಾಗೆ ನೋಡಿಕೊಳಲು ಸೂಚಿಸಿದ್ದು, ಕರ್ತವ್ಯದಲ್ಲಿ ಲೋಪದೋಷ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಲಾಯಿತು. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಾರಕ್ಕೆ ೨ ಬಾರಿ ನೀರು ಸರಬರಾಜು ಮಾಡಲು ಸೂಚಿಸಿದರು ಹಾಗೂ ನೀರು ಪೋಲಾಗದಂತೆ ನಳಗಳಿಗೆ ನೀರಿನ ಕೊಳಾಯಿಗಳನ್ನು ಅಳವಡಿಸಲು ಮತ್ತು ರಸ್ತೆಗಳಲ್ಲಿ ವಾಹನಗಳನ್ನು ತೊಳೆಯದಂತೆ ನಾಗರೀಕರಲ್ಲಿ ಸಹಕರಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪ ಮೇಯರ್‌ರಾದ ಕೆ. ಚಮನ್ ಸಾಬ್, ಮಹಾನಗರಪಾಲಿಕೆ ಸದಸ್ಯರಾದ ದಿನೇಶ್ ಕೆ. ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಎ. ನಾಗರಾಜ್, ಅಧೀಕ್ಷಕ ಅಭಿಯಂತರರಾದ ಎಂ. ಸತೀಶ್, ಕಾರ್ಯಪಾಲಕ ಇಂಜಿನಿಯರ್ ಹೆಚ್. ಕರಿಯಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಸ್.ಎಸ್. ಬಿರಾದಾರ್, ಕೆ.ಎಂ. ಮಂಜುನಾಥ, ಇವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Be the first to comment on "ಟಿ.ವಿ.ಸ್ಟೇಷನ್ ಮತ್ತು ಕುಂದುವಾಡ ಕೆರೆಗಳಿಗೆ ನೀರು ತುಂಬಿಸಿಕೊಳ್ಳಲು ಸೂಚನೆ"

Leave a comment

Your email address will not be published.


*