ಪಾದಯಾತ್ರೆಯಿಂದ ಪರಸ್ಪರರಲ್ಲಿ ಸದ್ಭಾವನೆ ಮೂಡುತ್ತದೆ : ವಚನಾನಂದ ಶ್ರೀ

Share
  • 22
    Shares

ಹರಿಹರ-ಪಾದಯಾತ್ರೆಗೆ ಅನೇಕ ಶತಮಾನಗಳ ಇತಿಹಾಸವಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ ಆತ್ಮ ವಿಶ್ವಾಸ ವೃದ್ಧಿಯಾಗಿಮನಸ್ಸಿಗೆ ನೆಮ್ಮದಿ ದೊರೆತುದೇಹ ಸದೃಡಗೊಳ್ಳುತ್ತದೆ.ಪಾದಯಾತ್ರೆ ಕೈಗೊಳ್ಳುವಎಲ್ಲ ಸಮುದಾಯದ ಭಕ್ತರಲ್ಲಿ ಪರಸ್ಪರರಲ್ಲಿ ಸಧ್ಭಾವನೆ ಮೂಡುತ್ತದೆ.ನಮ್ಮ ನಾಡಿನ ಶ್ರೇಷ್ಠ ಶರಣೆಯಾಗಿರುವಗುಡ್ಡಾಪುರದ ಶ್ರೀದಾನಮ್ಮದೇವಿ ದೇವಸ್ಥಾನದ ವರೆಗೆ ಪಾದಯಾತ್ರೆ ಕೈಗೊಳ್ಳುವುದರಿಂದ ಮಾನವಜನ್ಮ ಸಾರ್ಥಕತೆ ಪಡೆಯುತ್ತದೆಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಹರಿಹರದಜಗದ್ಗುರುಶ್ರೀ ವಚನಾನಂದ ಮಹಾಸ್ವಾಮಿಗಳು ಹೇಳಿದರು.
ಬೆಳಗಾವಿ ಜಿಲೆಯಅಥಣಿಪಟ್ಟಣದ ಶ್ರೀ ದಾನಮ್ಮದೇವಿ ಪಾದಯಾತ್ರಾಕಮೀಟಿಯವರ ಸಹಯೋಗದಲ್ಲಿಸುಕ್ಷೇತ್ರಗಚ್ಚಿನ ಮಠದಿಂದಗುಡ್ಡಾಪುರದ ವರೆಗೆಎರಡು ದಿನಗಳ ಪಾದಯಾತ್ರೆಗೆ ಶನಿವಾರ ಅಗಷ್ಟ ೧೮ ರಂದು ಮುಂಜಾನೆ ಚಾಲನೆ ನೀಡಿದಿವ್ಯಸಾನಿಧ್ಯವಹಿಸಿಅವರು ಮಾತನಾಡುತ್ತಾಮನಷ್ಯನಜೀವನ ಸಾರ್ಥಕತೆ ಪಡೆಯಬೇಕಾದರೆ ಒಳ್ಳೆಯ ಆಚಾರ, ವಿಚಾರಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಕಾಯಕವೇಕೈಲಾಸವೆಂದು ಕೆಲಸ ಕಾರ್ಯಗಳಲ್ಲಿ ತೊಡಗಬೇಕು, ಆಗ ಯಶಸ್ಸುತಾನಾಗಿಯೇ ಹಿಂಬಾಲಿಸುತ್ತದೆ.ಸತತ ಪ್ರಯತ್ನ ಬಿಡದಛಲ ನಿರ್ದಿಷ್ಟಗುರಿಯುವಕರಲ್ಲಿಇರಬೇಕು ಆಗ ಅಂದುಕೊಂಡದ್ದು ಸಾಧಿಸಲು ಸಾಧ್ಯವಾಗುತ್ತದೆ.ಇದುತಾವು ಕೈಗೊಳ್ಳು ಎರಡನೇ ಪಾದಯಾತ್ರೆಯಾಗಿದ್ದು ಇಚೇಗೆ ಹರಿಹರದಿಂದಕಿತ್ತೂರಿನಚನ್ನಮ್ಮನ ನಾಡಿನ ವೆರೆಗೂ ೨೪೫ ಕೀ.ಮೀ ಪ್ರಥಮಪಾದಯಾತ್ರೆಕೈಗೊಂಡಾಗಅದುತುಂಬಾ ಯಶಸ್ವಿಯಾಗಿದೆ. ಈಗ ಶಿವಯೋಗಿಗಳ ಸುಕ್ಷೇತ್ರದಿಂದ ೭೦ ಕೀ.ಮೀ ಪಾದಯಾತ್ರೆ ಕೈಗೊಳ್ಳಲಾಗುತ್ತದೆಂದು ಅವರು ಹೇಳಿದರು.ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಹರಿಹರದಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಈ ಸಂದರ್ಭದಲ್ಲಿಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಗದ್ದುಗೆಗೆ ಹಾಗೂ ಶ್ರೀ ಮರುಳ ಶಂಕರ ಮಹಾಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ದಾಸೋಹ ವಸ್ತುಗಳನ್ನು ತೆಗೆದುಕೊಂಡು ಹೋಗುವ ವಾಹನಕ್ಕೆ ಪೂಜೆ ಸಲ್ಲಿಸಿದರು. ಶಿವಾನಂದ ಆಶ್ರಮದ ಶ್ರೀ ಬಸವಪ್ರಿಯ ಸ್ವಾಮಿಜಿ, ಸಿದ್ದಾರೂಢ ಮಠದ ಶ್ರೀ ಮರುಳ ಶಂಕರ ಸ್ವಾಮಿಜಿ, ಪುರಸಭೆ ಸದಸ್ಯ ಶೈಲಜಾ ಹಳ್ಳದಮಳ ಹಾಗೂದಾನಮ್ಮದೇವಿ ಪಾದಯಾತ್ರಾಕಮೀಟಿ ಹಿರಿಯರು ಉಪಸ್ಥಿತರಿದ್ದರು.