ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್‌ಗಳ ಒಕ್ಕೂಟದಿಂದ ಸಂತ್ರಸ್ಥರಿಗೆ 1 ಕೋಟಿ ರೂ. ನೆರವು

Share
  • 133
    Shares

ದಾವಣಗೆರೆ : ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ನಷ್ಟವುಂಟಾಗಿದ್ದು, ಸಂತ್ರಸ್ಥರಿಗೆ ನೆರವಾಗುವ ದೃಷ್ಟಿಯಿಂದ ದಾವಣಗೆರೆ ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್ ಗಳ ಒಕ್ಕೂಟದಿಂದ ೧ ಕೋಟಿ ರೂಗಳನ್ನು ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಗೌರವ ಅಧ್ಯಕ್ಷರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಡಾ|| ಶಾಮನೂರು ಶಿವಶಂಕರಪ್ಪನವರು ತಿಳಿಸಿದರು.ಇಂದು ನಡೆದ ಒಕ್ಕೂಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಸಾವು-ನೋವುಗಳಾಗಿದ್ದು, ಇದಕ್ಕೆ ಪರಿಹಾರವಾಗಿ ಈಗಾಗಲೇ ಸಾಕಷ್ಟು ಜನತೆಗೆ ಸಹಾಯ ಹಸ್ತ ಚಾಚಿದ್ದು, ಈ ನಿಟ್ಟಿನಲ್ಲಿ ನಾವು ಕೂಡ ಒಕ್ಕೂಟದ ವತಿಯಿಂದ ತಲಾ ೫೦ ಲಕ್ಷ ರೂ.ಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೀಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.ಈ ಹಿಂದೆಯೂ ಸಹ ಒಕ್ಕೂಟದಿಂದ ಭೂಕಂಪ, ಕಾರ್ಗೀಲ್ ಯುದ್ಧ ಹಾಗೂ ಪ್ರಕೃತಿ ವಿಕೋಪಗಳು ನಡೆದ ವೇಳೆ ನೆರವು ನೀಡಲಾಗಿದ್ದು, ಇದೀಗ ೧ ಕೋಟಿ ನೀಡುತ್ತಿದ್ದೇವೆ ಎಂದರು.ವೈಯಕ್ತಿಕವಾಗಿ ೨೫ ಲಕ್ಷ ರೂ: ಒಕ್ಕೂಟದಿಂದ ೧ ಕೋಟಿ ರೂ. ನೀಡುವುದರ ಜೊತೆಗೆ ತಮ್ಮ ವೈಯಕ್ತಿಕವಾಗಿ ೨೫ ಲಕ್ಷ ರೂಗಳನ್ನು ನೀಡುವುದಾಗಿ ಡಾ|| ಶಾಮನೂರು ಶಿವಶಂಕರಪ್ಪನವರು ತಿಳಿಸಿದರು.
ಇದೇ ವೇಳೆ ಒಕ್ಕೂಟದ ಗೌರವ ಕಾರ್‍ಯದರ್ಶಿಗಳನ್ನಾಗಿ ಎನ್‌ಎಂಜೆಬಿ ಮುರುಗೇಶ್ ಅವರನ್ನು ಅವಿರೋಧವಾಗಿ ನೇಮಿಸಲಾಯಿತು. ಈ ಹಿಂದೆ ಒಕ್ಕೂಟದ ಗೌರವ ಕಾರ್‍ಯದರ್ಶಿಗಳಾಗಿದ್ದ ಎನ್‌ಎಂಜೆಬಿ ಆರಾಧ್ಯ ಅವರ ನಿಧನದಿಂದ ಸ್ಥಾನ ತೆರವಾಗಿತ್ತು.
ಈ ಸಭೆಯಲ್ಲಿ ಒಕ್ಕೂಟದ ಕಾರ್ಯಾಧ್ಯಕ್ಷರಾದ ಬಿ.ಸಿ. ಉಮಾಪತಿ, ನೂತನ ಗೌರವ ಕಾರ್‍ಯದರ್ಶಿ ಎನ್‌ಎಂಜೆಬಿ ಮುರುಗೇಶ್, ಸದಸ್ಯರುಗಳಾದ ಎಸ್.ಎಸ್.ಮಲ್ಲಿಕಾರ್ಜುನ್, ಕೋಗುಂಡಿ ಬಕ್ಕೇಶಪ್ಪ, ಕಿರುವಾಡಿ ಸೋಮಶೇಖರ್, ಎನ್.ಜೆ.ಗುರುಸಿದ್ದಯ್ಯ, ಆರ್.ಎಲ್.ಪ್ರಭಾಕರ್, ಕುರ್ಕಿ ಕುಬೇರಪ್ಪ, ರಮಣ್ ಲಾಲ್, ಆರ್.ಜಿ.ಶ್ರೀನಿವಾಸ ಮೂರ್ತಿ, ಸಿ.ಚಂದ್ರಶೇಖರ್, ಬಿ.ಎಲ್.ಗೌಡ, ನಿರಂಜನ್ ನಿಶಾನಿಮಠ, ಜ್ಯೋತಿ ಪ್ರಕಾಶ್, ಡಿ.ವಿ.ಆರಾಧ್ಯಮಠ, ಅಶೋಕ್ ರಾಯಬಾಗಿ, ಶಿವಶಂಕರ್, ಮಂಜುನಾಥ್, ಎಂ.ಬಸವರಾಜ್ ಮತ್ತಿತರರಿದ್ದರು.

Be the first to comment on "ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್‌ಗಳ ಒಕ್ಕೂಟದಿಂದ ಸಂತ್ರಸ್ಥರಿಗೆ 1 ಕೋಟಿ ರೂ. ನೆರವು"

Leave a comment

Your email address will not be published.


*