ಎ.ವಿ.ಕೆ. ಮಹಿಳಾ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Share
  • 68
    Shares

ದಾವಣಗೆರೆ-2018-19ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಸಲಾಯಿತು. ಈ ಚುನಾವಣೆಯಲ್ಲಿ ಕಲಾ ಕಾರ್ಯದರ್ಶಿಯಾಗಿ ಸಂಗೀತ ಎ. ನಾಯಕ್ ಆಯ್ಕೆಯಾದರು. ಆದರೆ ವಿಜ್ಞಾನ ಮತ್ತು ವಾಣಿಜ್ಯ ಕಾರ್ಯದರ್ಶಿಗಳಿಗೆ ಸ್ಪರ್ಧೆ ನಡೆಯದೆ ಪ್ರಾಂಶುಪಾಲರು ಹಾಗೂ ಅಧ್ಯಾಪಕರು, ಹೆಚ್.ಎಮ್. ಮೆಹರ್ ತಾಜ್‌ರವರನ್ನು ವಿಜ್ಞಾನ ಕಾರ್ಯದರ್ಶಿಯನ್ನಾಗಿಯೂ ಸ್ಪೂರ್ತಿ ಕೆ.ಆರ್. ರವರನ್ನು ವಾಣಿಜ್ಯ ಕಾರ್ಯದರ್ಶಿಯಾಗಿ, ನಮಿತ ಎಸ್. ಜೈನ್ ರವರನ್ನು ಬಿ.ಬಿ.ಎಂ. ಕಾರ್ಯದರ್ಶಿಯಾಗಿ ನೇಮಕ ಮಾಡಿದರು. ಹೀಗೆ ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿಗಳಾದ ಡಾ. ಶಾಮನೂರು ಶಿವಶಂಕರಪ್ಪನವರು, ಖಜಾಂಚಿಗಳಾದ ಎ.ಸಿ. ಜಯಣ್ಣನವರು, ಶೈಕ್ಷಣಿಕ ನಿರ್ದೇಶಕರಾದ ಡಾ. ಎಂ.ಜಿ. ಈಶ್ವರಪ್ಪನವರು, ಎ.ವಿ.ಕೆ. ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ, ಪ್ರಾಚಾರ್ಯರೂ ಆದ ಪ್ರೊ. ಪಿ.ಎಸ್. ಶಿವಪ್ರಕಾಶ್‌ರವರು ಶುಭ ಹಾರೈಸಿದ್ದಾರೆ.

Be the first to comment on "ಎ.ವಿ.ಕೆ. ಮಹಿಳಾ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ"

Leave a comment

Your email address will not be published.


*