ದಾವಣಗೆರೆ ಎಪಿಎಂಸಿ ಅಧ್ಯಕ್ಷರಾಗಿ ಬಿ.ಕೆ.ಈರಣ್ಣ, ಉಪಾಧ್ಯಕ್ಷರಾಗಿ ಎಸ್.ಕೆ.ಚಂದ್ರಶೇಖರ್ ಆಯ್ಕೆ

Share

ದಾವಣಗೆರೆ: ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಿ.ಕೆ.ಈರಣ್ಣ ಅಧ್ಯಕ್ಷರಾಗಿ ಮತ್ತು ಎಸ್.ಕೆ.ಚಂದ್ರಶೇಖರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಕಾರಿಗಳಾದ ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ಘೋಷಿಸಿದರು.
ಶಾಸಕರಾದ ಡಾ||ಶಾಮನೂರು ಶಿವಶಂಕರಪ್ಪನವರು ಮತ್ತು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಸೂಚನೆ ಮೇರೆಗೆ ಈ ಆಯ್ಕೆ ನಡೆಯಿತು.
ಈ ವೇಳೆ ನಿರ್ದೇಶಕರುಗಳಾದ ಶಾಮನೂರು ಕಲ್ಲೇಶಪ್ಪ, ಮುದೇಗೌಡ್ರು ಗಿರೀಶ್, ಎಂ.ಬಿ.ಹಾಲಪ್ಪ, ದೊಗ್ಗಳ್ಳಿ ಬಸವರಾಜ, ಟಿ.ರಾಜಣ್ಣ, ಎಂ.ಕೆ.ರೇವಣಸಿದ್ದಪ್ಪ, ಕೆ.ಜಿ. ಶಾಂತರಾಜ್, ಎಸ್.ಕೆ.ಚಂದ್ರಶೇಖರ್ , ಕೆ.ಎಚ್.ರೇವಣಸಿದ್ದಪ್ಪ , ಕೆ.ಪಿ.ಮಲ್ಲಿಕಾರ್ಜುನ್ ,ಸುಧಾ ರುದ್ರೇಶ್, ಮಂಜುನಾಥ್ ಶ್ಯಾಗಲೆ, ಶ್ರೀಮತಿ ಪಾಲಾಕ್ಷಮ್ಮ, ಸೇವ್ಯಾನಾಯ್ಕ, ಮುಖಂಡರುಗಳಾದ ಬೇತೂರು ಕರಿಬಸಪ್ಪ, ಡಾ|| ಹೆಚ್.ಬಿ.ಅರವಿಂದ್, ಕಾರ್‍ಯದರ್ಶಿ ಬಿ.ಆನಂದ್, ಸಹಾಯಕ ಕಾರ್‍ಯದರ್ಶಿ ಜಿ.ಪ್ರಭು, ರಾಜೇಶ್ ಕುಮಾರ್ , ನಾಗಲಿಂಗೇಶ್, ನೇರ್‍ಲಿಗೆ ಸಂಗಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತ್, ಆಲೂರು ಶಿವಕುಮಾರ್, ಆಲೂರು ವೀರಭದ್ರಪ್ಪ, ಆಲೂರು ಸೋಮಣ್ಣ ಸೇರಿದಂತೆ ಹಲವರಿದ್ದರು.

Be the first to comment on "ದಾವಣಗೆರೆ ಎಪಿಎಂಸಿ ಅಧ್ಯಕ್ಷರಾಗಿ ಬಿ.ಕೆ.ಈರಣ್ಣ, ಉಪಾಧ್ಯಕ್ಷರಾಗಿ ಎಸ್.ಕೆ.ಚಂದ್ರಶೇಖರ್ ಆಯ್ಕೆ"

Leave a comment

Your email address will not be published.


*