ಪಟ್ಟಣ ಪಂಚಾಯಿತಿ ಚುನಾವಣೆ: ಜಗಳೂರಿನಲ್ಲಿ ಅರಳಿದ ಕಮಲ

Share
  • 58
    Shares

ಜಗಳೂರು: ಇಂದು ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ೧೧ ಸ್ಥಾನಗಳನ್ನು ಪಡೆಯುವ ಮೂಲಕ ಪಟ್ಟಣ ಪಂಚಾಯಿತಿ ಚುಕ್ಕಾಣಿ ಹಿಡಿದಿದ್ದು, ಕಳೆದ ಬಾರಿ ಆಡಳಿತ ಮಾಡಿದ್ದ ಕಾಂಗ್ರೇಸ್ ಕೇವಲ ೫ ಸ್ಥಾನಗಳನ್ನು ಪಡೆಯುವ ಮೂಲಕ ತೀವ್ರ ಮುಖಭಂಗವಾಗಿದೆ.
ಒಟ್ಟು ೧೮ ಸ್ಥಾನಗಳನ್ನು ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ೧೧ ಸ್ಥಾನಗಳನ್ನು ,ಕಾಂಗ್ರೇಸ್ ೫ ಸ್ಥಾನಗಳನ್ನು, ಜೆಡಿಎಸ್.೨ ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಕಳೆದ ಬಾರಿ ೧೫ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ೧೧ ಕಾಂಗೇಸ್, ೧ ಬಿಜೆಪಿ, ೨ ಜೆಡಿಎಸ್,೧ ಪಕ್ಷೇತರ ಸ್ಥಾನಗಳನ್ನು ಪಡೆದಿದ್ದು ,ಈ ಬಾರಿ ಕಾಂಗ್ರೇಸ್ ೫ ಸ್ಥಾನಗಳನ್ನು ಪಡೆಯುವ ಮೂಲಕ ತೀವ್ರ ನಿರಾಸೆ ಅನುಭವಿಸಿದೆ. ಪರಿಶಿಷ್ಟ ಪಂಗಡದ ಬಿಜೆಪಿ ಮುಖಂಡರಾದ ಆರ್.ತಿಪ್ಪೇಸ್ವಾಮಿ ಮೂರು ಬಾರಿ ಜಯಿಸುವ ಮೂಲಕ ಯಾಟ್ರಿಕ್ ಸಾಧನೆಮಾಡಿದ್ದಾರೆ. ೧೮ ವಾರ್ಡಿನ ಬಿಜೆಪಿಯ ಪಾಪಲಿಂಗ ಕಾಂಗ್ರೇಸ್‌ನ ಪ್ರತಿಸ್ಪರ್ಧಿ ರತ್ನಮ್ಮ ವಿರುದ್ದ ೩೩೫ ಅಧಿಕ ತಗಳ ಅಂತರದಿಂದ ಜಯಶೀಲರಾಗಿದ್ದು, ೧೩ ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ನಿರ್ಮಲಕುಮಾರಿ ಕಾಂಗ್ರೇಸ್‌ನ ಎಂ.ಚೌಡಮ್ಮ ವಿರುದ್ದ ಕೇವಲ ೨೫ ಮತಗಳ ಕಡಿಮೆ ಅಂತರದಿಂದ ಜಯಗಳಿಸಿದ್ದಾರೆ.
ಗೆಲವು ಸಾಧಿಸಿದ ಅಭ್ಯರ್ಥಿಗಳ ವಿವರ: ೧ ನೇ ವಾರ್ಡು ಬಿ.ಮಂಜಮ್ಮ (ಬಿಜೆಪಿ), ೨ ನೇ ವಾರ್ಡಿನಿಂದ ಜೆ.ಬಿ.ಲೋಕಮ್ಮ (ಬಿಜೆಪಿ) , ೩ ನೇವಾರ್ಡು ಸಿದ್ದಪ್ಪ (ಬಿಜೆಪಿ) , ೪ ನೇ ವಾರ್ಡು ಎಸ್.ಮಹಮ್ಮದ್ ಆಲಿ (ಕಾಂಗ್ರೇಸ್) , ೫ ನೇ ವಾರ್ಡು ತಿಪ್ಪೇಸ್ವಾಮಿ ಆರ್. (ಬಿಜೆಪಿ), ೬ ನೇ ವಾರ್ಡಿನಿಂದ ಷಕೀಲ್ ಅಹಮ್ಮದ್(ಕಾಂಗ್ರೇಸ್) , ೭ ನೇ ವಾರ್ಡು ಅಭ್ಯರ್ಥಿ ಲುಕ್ಮಾನ್ ಖಾನ್ (ಜೆಡಿಎಸ್), ೮ ನೇವಾರ್ಡುನ ಜರತ್ ಉನ್ನೀಸಾ (ಜೆಡಿಎಸ್) , ೯ ನೇ ವಾರ್ಡು ಬಿ.ಟಿ.ರವಿಕುಮಾರ್ (ಕಾಂಗ್ರೇಸ್) , ೧೦ ನೇ ವಾರ್ಡು ಬಿ,ಕೆ,ರಮೇಶ್(ಕಾಂಗ್ರೇಸ್) , ೧೧ ನೇವಾರ್ಡು ಸಿ.ವಿ.ವಿಶಾಲಾಕ್ಷ್ಮಿ (ಬಿಜೆಪಿ), ೧೨ ನೇ ವಾರ್ಡು ಮಂಜುನಾಥ್ ಎಸ್. (ಕಾಂಗ್ರೇಸ್) , ೧೩ ನೇ ವಾರ್ಡು ನಿರ್ಮಲ ಕುಮಾರಿ (ಬಿಜೆಪಿ), ೧೪ ನೇ ವಾರ್ಡು ಬಿ.ಸರೋಜಮ್ಮ (ಬಿಜೆಪಿ), ೧೫ ನೇ ವಾರ್ಡು ನವೀನ್ ಕುಮಾರ್ ಕೆ.ಎಸ್. (ಬಿಜೆಪಿ), ೧೬ ನೇ ವಾರ್ಡುನ ದೇವರಾಜ (ಬಿಜೆಪಿ), ೧೭ ನೆ ವಾರ್ಡುನ ಟಿ.ಲಿಲಿತ (ಬಿಜೆಪಿ), ೧೮ ನೇ ವಾರ್ಡು ಜೆ.ಪಾಪಲಿಂಗ (ಬಿಜೆಪಿ) ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳು ಪಟ್ಟಣದಲ್ಲಿ ಮೆರವಣಿಗೆ ಮಾಡುವ ಮೂಲಕ ಪಟ್ಟಣದ ನಾಗರಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷರಾದ ಡಿ.ವಿ.ನಾಗಪ್ಪ, ಯುವ ಘಟಕದ ಅಧ್ಯಕ್ಷ ರವಿಕುಮಾರ್, ಪ್ರಧಾನಕಾರ್ಯದರ್ಶಿ ಜೆ.ವಿ.ನಾಗರಾಜು, ಮುಖಂಡರುಗಳಾದ ಬಿಸ್ತುವಳ್ಳಿ ಬಾಬು, ನಿಜಲಿಂಗಪ್ಪ,ತಿಪ್ಪೇಸ್ವಾಮಿ, ಹುಲಿಕುಂಟೆ ಶ್ರೇಷ್ಠಿ ಇತರರು ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳಿಗೆ ಹೂವಿನ ಹಾರ ಕಾಕುವ ಮೂಲಕ ಕೃತಜ್ಞತೆ ಸಲ್ಲಿಸಿದರು.

Be the first to comment on "ಪಟ್ಟಣ ಪಂಚಾಯಿತಿ ಚುನಾವಣೆ: ಜಗಳೂರಿನಲ್ಲಿ ಅರಳಿದ ಕಮಲ"

Leave a comment

Your email address will not be published.


*