ಸ್ಮಾರ್ಟ್ ಸಿಟಿ ಯೋಜನೆಯ ಸಲಹಾ ಸಮಿತಿ ಸಭೆ

Share
  • 86
    Shares

ದಾವಣಗೆರೆ-ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ 396ಕೋಟಿರೂ.ಅನುದಾನ ಬಂದಿದ್ದರೂ ಇದುವರೆಗೂ ಕೇವಲ 17.14ಕೋಟಿ.ರೂ.ಗಳನ್ನು ವೆಚ್ಚ ಮಾಡಲಾಗಿದೆ. ಇದರಲ್ಲಿ ಡಿಪಿಆರ್ ಮತ್ತು ಆಡಳಿತ ವೆಚ್ಚಕ್ಕೆ ಬಳಕೆ ಮಾಡಲಾಗಿದ್ದು,ಕೇವಲ 2ಕೋಟಿ ವೆಚ್ಚದ ಕಾಮಗಾರಿಯನ್ನಷ್ಟೇ ಕೈಗೊಂಡಿರುವ ಬಗ್ಗೆ ಯೋಜನಾ ವ್ಯವಸ್ಥಾಪಕ ನಿರ್ದೇಶಕ ಆಶಾದ್ ಷರೀಫ್ ಅವರನ್ನು ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತರಾಟೆಗೆ ತೆಗೆದುಕೊಂಡು ಪ್ರಸಂಗ ನಡೆಯಿತು.
ಸ್ಮಾರ್ಟ್ ಯೋಜನೆಯಡಿ ಕೇವಲ ಸಭೆಗಳಾಗುತ್ತಿವೆಯೇ ಹೊರತು,ಕೆಲಸಗಳು ಆಗುತ್ತಿಲ್ಲ. ನಗರದ ಹಳೇ ಭಾಗದಲ್ಲಿ ರಸ್ತೆಗಳನ್ನು ಕಿತ್ತಿದ್ದು, ಕಾಮಗಾರಿ ಮಾಡದಿರುವ ಬಗ್ಗೆ ಅಲ್ಲಿನ ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಉಭಯ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ,ಜಿಲ್ಲಾಧಿಕಾರಿ ಡಿ.ಎಸ್.ರಮೇಶ್,ಪಾಲಿಕೆ ಸದಸ್ಯ ದಿನೇಶ್ ಕೆ.ಶೆಟ್ಟಿ,ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ,ಡಾ.ಶಾಂತಾ ಭಟ್ ಮತ್ತಿತರರು ಉಪಸ್ಥಿತರಿದ್ದರು.

Be the first to comment on "ಸ್ಮಾರ್ಟ್ ಸಿಟಿ ಯೋಜನೆಯ ಸಲಹಾ ಸಮಿತಿ ಸಭೆ"

Leave a comment

Your email address will not be published.


*